ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮದುವೆಗಾಗಿ ಇಟಲಿಗೆ ಪತ್ನಿಯೊಂದಿಗೆ ಹೊರಟ ಪವನ್ ಕಲ್ಯಾಣ್…..!

Follow Us :

ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಮದುವೆ ಇಟಲಿಯಲ್ಲಿ ನ.1 ರಂದು ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ವರುಣ್ ಹಾಗೂ ಲಾವಣ್ಯ ಇಟಲಿಯಲ್ಲಿ ಲ್ಯಾಂಡ್ ಆಗಿದ್ದಾರೆ. ಇದೀಗ ಪವನ್ ಕಲ್ಯಾಣ್ ಹಾಗೂ ಅವರ ಪತ್ನಿ ಅನ್ನಾ ಲೆಜಿನೋವಾ ಜೊತೆಗೆ ಇಟಲಿಗೆ ಹೋಗಿದ್ದು, ಈ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಸುಮಾರು ವರ್ಷಗಳಿಂದ ಸಿಕ್ರೇಟ್ ಆಗಿ ಪ್ರೇಮ ಪಯಣ ಸಾಗಿಸುತ್ತಿದ್ದ ಮೆಗಾ ಕುಟುಂಬದ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದ್ದು, ಇದೀಗ ನ.1 ರಂದು ಈ ಜೋಡಿಯ ಮದುವೆ ಅದ್ದೂರಿಯಾಗಿ ಇಟಲಿಯಲ್ಲಿ ನೆರವೇರಲಿದೆ. ಮೊದಲೇ ತೀರ್ಮಾನಿಸಿದಂತೆ ಈ ಜೋಡಿಯ ವಿವಾಹ ಇಟಲಿಯಲ್ಲೇ ನೆರವೇರಲಿದೆ. ಲಾವಣ್ಯ ಹಾಗೂ ವರುಣ್ ಮೊದಲ ಬಾರಿಗೆ ಇಟಲಿಯಲ್ಲೇ ಭೇಟಿಯಾದ ಹಿನ್ನೆಲೆಯಲ್ಲಿ ಅದೇ ಸೆಂಟಿಮೆಂಟ್ ಆಗಿ ಇಟಲಿಯಲ್ಲಿ ಮದುವೆಯಾಗಲಿದ್ದಾರೆ. ಈಗಾಗಲೇ ಇಬ್ಬರದ್ದೂ ಬ್ಯಾಚಿಲರ್‍ ಪಾರ್ಟಿಗಳೂ ಸಹ ಮುಗಿದಿದೆ. ಇಟಲಿಯಲ್ಲಿ ಮದುವೆಯಾದ ಕಾರಣದಿಂದ ಮೂರು ದಿನಗಳ ಮುಂಚೆಯೇ ಈ ಜೋಡಿ ಅಲ್ಲಿಗೆ ಹೊರಟಿದ್ದಾರೆ. ಜೊತೆಗೆ ಮೆಗಾ ಕುಟುಂಬದ ಸದಸ್ಯರು ಒಬ್ಬೊಬ್ಬರಾಗಿಯೇ ಇಟಲಿಗೆ ಹೋಗುತ್ತಿದ್ದಾರೆ.

ಇದೀಗ ನಟ ಪವನ್ ಕಲ್ಯಾಣ್ ತನ್ನ ಪತ್ನಿ ಅನ್ನಾ ಲೆಜಿನೋವಾ ಜೊತೆಗೆ ಇಟಲಿಗೆ ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಹೋಗುತ್ತಿರುವ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಪವನ್ ಪತ್ನಿ ಅನ್ನಾ ಲೆಜಿನೋವಾ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಸಾರ್ವಜನಿಕವಾಗಿ ತಿರುಗುವುದು ತುಂಬಾನೆ ಕಡಿಮೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ಪವನ್ ಹಾಗೂ ಅನ್ನಾ ಲೆಜಿನೋವಾ ಸುಮಾರು ದಿನಗಳ ಬಳಿಕ ಜೊತೆಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಟೋಗಳು ಹಾಗೂ ವಿಡಿಯೋಗಳನ್ನು ಅಭಿಮಾನಿಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಇನ್ನೂ ಲಾವಣ್ಯ ಹಾಗೂ ವರುಣ್ ಮದುವೆ ನ.1 ರಂದು ನೆರವೇರಲಿದ್ದು, ನ.5 ರಂದು ಹೈದರಾಬಾದ್ ನ ಎನ್ ಕನ್ವೇಷನ್ ಸೆಂಟರ್‍ ನಲ್ಲಿ ರಿಸೆಪ್ಷನ್ ಅದ್ದೂರಿಯಾಗಿ ಆಯೋಜನೆ ಮಾಡಲಾಗಿದೆ.