News

ಬೆತ್ತಲೆಯಾಗಿ ನೋಡುವ ಆಸೆಯಿಂದ ಲಕ್ಷಲಕ್ಷ ಕಳೆದುಕೊಂಡ ವೃದ್ದ, ಮ್ಯಾಜಿಕ್ ಮಿರರ್ ಖರೀದಿಸಿ ಮೋಸಹೋದ ವೃದ್ದ…..!

ಮೋಸಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದಕ್ಕೆ ಸಾಕ್ಷಿಯೆಂಬಂತೆ ವೃದ್ದನೋರ್ವ ಜನರನ್ನು ಬೆತ್ತಲೆಯಾಗಿ ನೋಡಬಹುದೆಂಬ ಆಸೆಯಿಂದ ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ. ಕಾನ್ಪುರದಲ್ಲಿ ವೃದ್ದನೋರ್ವ ಬೆತ್ತಲೆಯಾಗಿ ನೋಡುವ ದುರಾಸೆಯಿಂದ ಮ್ಯಾಜಿಕ್ ಮಿರರ್‍ ಎಂಬ ವಸ್ತುವನ್ನು ಖರೀದಿ ಮಾಡಿ ಮೋಸ ಹೋಗಿದ್ದಾನೆ. ಕಾನ್ಪುರ ಮೂಲದ ಅವಿನಾಶ್ ಕುಮಾರ್‍ ಶುಕ್ಲಾ ಎಂಬ 72 ವರ್ಷದ ವೃದ್ದ ಮೋಸಹೋಗಿದ್ದಾನೆ.

ಕಾನ್ಪುರದ ಅವಿನಾಶ್ ಕುಮಾರ್‍ ಶುಕ್ಲಾ ರವರಿಗೆ ಪಶ್ಚಿಮ ಬಂಗಾಳದ ಮೂರು ಮಂದಿ ಮೋಸಗೊಳಿಸಿದ್ದಾರೆ. ಮ್ಯಾಜಿಕ್ ಮಿರರ್‍ ನಮ್ಮ ಬಳಿಯಿದೆ. ಈ ಮಿರರ್‍ ಅನ್ನು ಅಮೇರಿಕಾದ ನಾಸಾ ವಿಜ್ಞಾನಿಗಳು ಬಳಸುತ್ತಾರೆ ಎಂದು ಶುಕ್ಲಾರನ್ನು ನಂಬಿಸಿದ್ದಾರೆ. ಇದರಿಂದ ಜನರನ್ನು ಬೆತ್ತಲೆಯಾಗಿ ನೋಡಬಹುದು, ತಮ್ಮ ಭವಿಷ್ಯ ಸಹ ತಿಳಿದುಕೊಳ್ಳಬಹುದು ಎಂದು ಮೂರು ಮಂದಿ ಆರೋಪಿಗಳು ಅವಿನಾಶ್ ಕುಮಾರ್‍ ರಿಂದ 9 ಲಕ್ಷ ಪಡೆದು ಯಾಮಾರಿಸಿ ಪರಾರಿಯಾಗಿದ್ದರು. ಆರೋಪಿಗಳನ್ನು ಪಾರ್ಥ ಸಿಂಘರಾಯ್, ಮಲಯ್ ಸರ್ಕಾರ್‍, ಸುದೀಪ್ತ ಸಿನ್ಹಾ ರಾಯ್ ಎಂದು ಗುರ್ತಿಸಲಾಗಿದೆ.

ಇನ್ನೂ ತಾವು ಪುರಾತನ ವಸ್ತುಗಳನ್ನು ಸಂಗ್ರಹಿಸುವಂತಹ ಪ್ರಖ್ಯಾತ ಸಿಂಗಾಪುರದ ಕಂಪನಿಯೊಂದರ ಉದ್ಯೋಗಿಗಳೆಂದು ವಂಚಕರು ಪರಿಚಯಿಸಿಕೊಂಡಿದ್ದಾರೆ. ತಮ್ಮಲ್ಲಿ ಮ್ಯಾಜಿಕ್ ಮಿರರ್‍ ಇದೆ ಅದರ ಬೆಲೆ 2 ಕೋಟಿ ಎಂದು ವೃದ್ದನ ಬಳಿ ತಿಳಿಸಿದ್ದಾರೆ. ಮೊದಲಿಗೆ ಒಂಭತ್ತು ಲಕ್ಷ ಹಣ ಪಡೆದು ಶುಕ್ಲಾ ರನ್ನು ಮಾತುಗಳಿಂದ ಮೈಮರೆಸಿ ಭುವನೇಶ್ವರಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೋಟೆಲ್ ಒಂದಕ್ಕೆ ಹೋಗಿದಾಗ ಇದೆಲ್ಲವೂ ಪಿತೂರಿ ಎಂದು ಅರಿವಾಗಿದೆ. ಬಳಿಕ ತನ್ನ ಹಣವನ್ನು ಹಿಂತಿರುಗಿಸುವಂತೆ ಒತ್ತಾಯ ಮಾಡಿದ್ದಾರೆ. ಇನ್ನೂ ಹಣ ವಾಪಸ್ಸು ಕೇಳುತ್ತಿದ್ದಂತೆ 9 ಲಕ್ಷದೊಂದಿಗೆ ಆರೋಪಿಗಳು ಪರಾರಿಯಾಗಿದ್ದಾರೆ.

ಇನ್ನೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ಬಳಿಯಿಂದ ಕಾರು, 28 ಸಾವಿರ ನಗದು ಹಾಗೂ ಐದು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಅವರ ಬಳಿಯಿದ್ದ ಮ್ಯಾಜಿಕ್ ಮಿರರ್‍ ಎಂದು ಹೇಳುವ ಕೆಲವೊಂದು ವಿಡಿಯೋಗಳನ್ನು ಹಾಗೂ ಕೆಲವೊಂದು ದಾಖಲೆಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Most Popular

To Top