Film News

ಆ ಸಿನೆಮಾ ನನಗೆ ಪ್ರೀತಿ ಹುಟ್ಟುವಂತೆ ಮಾಡಿತ್ತು ಎಂದ ಸಾಯಿ ಪಲ್ಲವಿ, ವೈರಲ್ ಆದ ಪೋಸ್ಟ್……!

ಸಿನಿರಂಗದಲ್ಲಿ ಗ್ಲಾಮರ್‍ ಶೋ ಮಾಡದೇ ಸ್ಟಾರ್‍ ನಟಿಯಾದವರಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಸಿನೆಮಾಗಳಲ್ಲಿ ಗ್ಲಾಮರ್‍ ಶೋಗೆ ಯಾವುದೇ ರೀತಿಯ ಆಸ್ಪದ ನೀಡಿದೇ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಆಕೆ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳೂ ಸಹ ಸಕ್ಸಸ್ ಕಂಡಿದೆ. ಈಕೆ ಅಭಿನಯದ ಅನೇಕ ಸಿನೆಮಾಗಳು ನಟರಷ್ಟೆ ಸಮನಾಗಿರುವಂತಹ ಪಾತ್ರಗಳಲ್ಲಿ ನಟಿಸುತ್ತಾರೆ. ಆಕೆ ಕೊನೆಯದಾಗಿ ಗಾರ್ಗಿ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಆಕೆ ಹಂಚಿಕೊಂಡ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಪರಿಚಯದ ಅವಶ್ಯಕತೆ ಹೆಚ್ಚಾಗಿ ಬೇಕಾಗಿಲ್ಲ ಎಂದು ಹೇಳಬಹುದು. ನಟನೆಯ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡ ಈಕೆ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಖಾತೆಗೆ ಹಾಕಿಕೊಂಡಿದ್ದಾರೆ. ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಾ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಕಳೆದ ವರ್ಷ ಆಕೆ ವಿರಾಟಪರ್ವಂ ಹಾಗೂ ಗಾರ್ಗಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾಗಳ ಬಳಿಕ ಆಕೆ ಯಾವುದೇ ಸಿನೆಮಾಗಳನ್ನು ಘೋಷಣೆ ಮಾಡದ ಹಿನ್ನೆಲೆಯಲ್ಲಿ ಆಕೆ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ರೂಮರ್‍ ಗಳೂ ಸಹ ಹುಟ್ಟಿಕೊಂಡಿದ್ದವು. ಆದರೆ ತಮಿಳು ಹಿರೋ ಶಿವ ಕಾರ್ತಿಕೇಯನ್ ಜೊತೆ ಸಿನೆಮಾ ಘೋಷಣೆ ಮಾಡಿ ಎಲ್ಲ ರೂಮರ್‍ ಗಳಿಗೆ ಬ್ರೇಕ್ ಹಾಕಿದರು.

ಇನ್ನೂ ಸಾಯಿ ಪಲ್ಲವಿ ಸೋಷಿಯಲ್ ಮಿಡಿಯಾದಲ್ಲಿ ಎಲ್ಲ ನಟಿಯರಂತೆ ಅಷ್ಟೊಂದು ಆಕ್ಟೀವ್ ಆಗಿರೊಲ್ಲ. ತಮ್ಮ ಸಿನೆಮಾ ಅಪ್ಡೇಟ್ ಗಳನ್ನು ಮಾತ್ರ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಆಕೆ ಅಭಿನಯದ ಗಾರ್ಗಿ ಸಿನೆಮಾದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಗಾರ್ಗಿ ಸಿನೆಮಾ ಬಿಡುಗಡೆಯಾಗಿ ಒಂದು ವರ್ಷ ಪೂರ್ಣಗೊಳಿಸಿದ್ದು, ಆ ಸಿನೆಮಾದ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.  ಈ ಸಿನೆಮಾದ ಬಳಿಕ ನನಗೆ ಸಿನೆಮಾಗಳ ಮೇಲೆ ಮತಷ್ಟು ಪ್ರೀತಿ ಹುಟ್ಟಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಸಾಯಿ ಪಲ್ಲವಿ ಕಾಮೆಂಟ್ ಇದೀಗ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಸಾಯಿ ಪಲ್ಲವಿ ಅಮರನಾಥ ಯಾತ್ರೆಗೆ ತೆರಳಿದ್ದರು. ಅಲ್ಲಿನ ಕೆಲವೊಂದು ಪೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ತನ್ನ ಕುಟುಂಬದೊಂದಿಗೆ ಆಕೆ ಈ ಯಾತ್ರೆಗೆ ತೆರಳಿದ್ದರು. ಆ ಪೊಟೊಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

Most Popular

To Top