ಭರಿಸಲಾಗದಷ್ಟು ನೋವಿದ್ದರೂ, ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡಿದ ನ್ಯಾಷನಲ್ ಕ್ರಷ್ ರಶ್ಮಿಕಾ, ವಿಡಿಯೋ ವೈರಲ್…..!

ಸ್ಯಾಂಡಲ್ ವುಡ್ ಮೂಲದ ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆಯಿರುವ ನಟಿಯಾಗಿದ್ದಾರೆ. ಸೌತ್ ಅಂಡ್ ನಾರ್ತ್‌ನಲ್ಲೂ ಭಾರಿ ಬಜೆಟ್ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡ ರಶ್ಮಿಕಾ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ಹೆವಿ ವರ್ಕೌಟ್ಸ್ ಮಾಡುತ್ತಿರುತ್ತಾರೆ. ಇದೀಗ ಆಕೆ ತುಂಬಾ ಕಷ್ಟಪಟ್ಟು ವರ್ಕೌಟ್ಸ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಸ್ಯಾಂಡಲ್ ವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಕಡಿಮೆ ಸಮಯದಲ್ಲೇ ಭಾರಿ ಫೇಂ ಪಡೆದುಕೊಂಡರು. ತೆಲುಗು ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟು ಅಲ್ಲೂ ಸಹ ಒಳ್ಳೆಯ ಸಾಧನೆ ಮಾಡಿದರು. ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲೂ ಸಹ ರಶ್ಮಿಕಾ ಎಂಟ್ರಿ ಕೊಟ್ಟರು. ಅದರಲ್ಲೂ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ರವರ ಜೊತೆಗೆ ಪುಷ್ಪಾ ಸಿನೆಮಾದಲ್ಲಿ ನಟಿಸಿದ ಬಳಿಕ ಆಕೆ ನ್ಯಾಷನಲ್ ಕ್ರಷ್ ಆದರು. ಜೊತೆಗೆ ಪ್ಯಾನ್ ಇಂಡಿಯಾ ಸ್ಟಾರ್‍ ಸಹ ಆದರು.  ಇನ್ನೂ ಆಕೆ ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇನ್ನೂ ಆಕೆ ಹಂಚಿಕೊಂಡ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಸಹ ಆಗುತ್ತಿರುತ್ತದೆ.

ಇನ್ನೂ ರಶ್ಮಿಕಾ ಮಂದಣ್ಣ ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಕೆ ಲೆಗ್ಸ್ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಭಾರಿ ತೂಕವನ್ನು ಕಾಲುಗಳಿಂದ ಎತ್ತುತ್ತಾ ಮಾಂಸಖಂಡಗಳನ್ನು ಮತಷ್ಟು ಬಲವಾಗಿಸಿಕೋಳ್ಳುತ್ತಿದ್ದಾರೆ. ಸಿನಿರಂಗದಲ್ಲಿ ಸಕ್ಸಸ್ ಸಾಧಿಸಬೇಕಾದರೇ ಫಿಟ್ ನೆಸ್ ತುಂಬಾನೆ ಮುಖ್ಯ ಎಂದು ಹೇಳಬಹುದಾಗಿದೆ. ಈ ಹಾದಿಯಲ್ಲೇ ರಶ್ಮಿಕಾ ಸಹ ಫಿಟ್ ನೆಸ್ ಕಾಪಾಡಿಕೊಳ್ಳಲು ಜಿಮ್ ನಲ್ಲಿ ಸಮಯ ಕಳೆಯುತ್ತಿರುತ್ತಾರೆ. ಇದೀಗ ಆಕೆ ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಭರಿಸಲಾಗದಷ್ಟು ನೋವು ಕಾಣುತ್ತಿದ್ದರೂ ಸಹ ಆಕೆ ವರ್ಕೌಟ್ ಮಾಡುತ್ತಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ರಶ್ಮಿಕಾ ಸದ್ಯ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ರಶ್ಮಿಕಾ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಆಕೆ ಬಾಲಿವುಡ್ ನಲ್ಲಿ ಯಾನಿಮಲ್ ಎಂಬ ಸಿನೆಮಾದಲ್ಲೂ ತೆಲುಗಿನಲ್ಲಿ ಲೇಡಿ ಓರಿಯೆಂಟೆಡ್ ಸಿನೆಮಾದಲ್ಲೂ ಸಹ ರಶ್ಮಿಕಾ ನಟಿಸುತ್ತಿದ್ದಾರೆ. ಬಾಲಿವುಡ್ ಸಿನೆಮಾಗಳ ಮೇಲಿನ ವ್ಯಾಮೋಹದಿಂದ ಆಕೆ ಕೆಲವೊಂದು ಸಿನೆಮಾಗಳಿಂದ ದೂರವಾದರು ಎಂದು ಸಹ ಹೇಳಲಾಗುತ್ತಿದೆ.