Film News

ಹುಟ್ಟುಹಬ್ಬದ ಸಂಭ್ರಮದಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ, ಸ್ಪೇಷಲ್ ಗಿಫ್ಟ್ ಕೊಟ್ಟ ಪುಷ್ಪಾ-2 ಚಿತ್ರತಂಡ….!

ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್ ನಲ್ಲಿ ಬಹುಬೇಡಿಕೆ ನಟಿಯಾಗಿ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಏ.5 ರಂದು ಅವರ ಹುಟ್ಟುಹಬ್ಬವಾಗಿದ್ದು, ಅಭಿಮಾನಿಗಳು, ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕರಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ. ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ನಿಮಿತ್ತ ಪುಷ್ಪಾ-2 ಚಿತ್ರತಂಡದಿಂದ ಸ್ಪೇಷಲ್ ಪೋಸ್ಟರ್‍ ಬಿಡುಗಡೆ ಮಾಡುವ ಮೂಲಕ ರಶ್ಮಿಕಾಗೆ ಸ್ಪೇಷಲ್ ಗಿಫ್ಟ್ ಕೊಡಲಾಗಿದೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ಹುಟ್ಟುಹಬ್ಬದಂದು ಅವರ ಸಿನೆಮಾಗಳ ಪೋಸ್ಟರ್‍, ಟೀಸರ್‍ ಬಿಡುಗಡೆ ಮಾಡಲಾಗುತ್ತಿರುತ್ತದೆ. ಆ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಲಾಗುತ್ತದೆ. ಇದೀಗ ರಶ್ಮಿಕಾ ರವರ ಹುಟ್ಟುಹಬ್ಬದ ನಿಮಿತ್ತ ಅವರ ಮುಂದಿನ ಸಿನೆಮಾ ಪುಷ್ಪಾ-2 ಗೆ ಸಂಬಂಧಿಸಿದಂತೆ ಸ್ಪೇಷಲ್ ಪೋಸ್ಟರ್‍ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‍ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಪುಷ್ಪಾ ಸಿನೆಮಾದಲ್ಲಿನ ರಶ್ಮಿಕಾ ಲುಕ್ ಗೂ ಪುಷ್ಪಾ-2 ರಲ್ಲಿರುವ ರಶ್ಮಿಕಾ ಲುಕ್ ಗೂ ತುಂಬಾನೆ ಭಿನ್ನತೆ ಇದೆ ಎನ್ನಲಾಗಿದೆ. ಇದೀಗ ಈ ಪೋಸ್ಟರ ಮೂಲಕ ಅಭಿಮಾನಿಗಳಲ್ಲಿ ಮತಷ್ಟು ಕುತೂಹಲ ಹೆಚ್ಚಾಗಿದೆ ಎನ್ನಬಹುದಾಗಿದೆ. ಜೊತೆಗೆ ಪೋಸ್ಟರ್‍ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪುಷ್ಪಾ ಸಿನೆಮಾದ ಮೂಲಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್‍ ಆದರು ಜೊತೆಗೆ ನ್ಯಾಷನಲ್ ಕ್ರಷ್ ಎಂಬ ಖ್ಯಾತಿಗೂ ಗುರಿಯಾದರು. ಪುಷ್ಪಾ ಸಿನೆಮಾದಲ್ಲಿ ರಶ್ಮಿಕಾ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಾರೆ. ಹಿರೋ ಮುಂದೆ ಮಾತನಾಡಲು ನಾಚಿಕೆ, ಹೆದರಿಕೆ ಇರುತ್ತದೆ. ಆದರೆ ಪುಷ್ಪಾ-2 ರಲ್ಲಿ ಮಾತ್ರ ಆ ರೀತಿಯಾಗಿರುವುದಿಲ್ಲ ಎಂದೇ ಹೇಳಲಾಗುತ್ತಿದೆ. ಇದೀಗ ಹಂಚಿಕೊಂಡಿರುವ ಪೋಸ್ಟರ್‍ ನಲ್ಲಿ ರಶ್ಮೀಕಾ ಸೀರೆಯನ್ನು ಧರಿಸಿದ್ದು, ತುಂಬಾನೆ ಆಭರಣಗಳನ್ನು ಧರಿಸಿದ್ದಾರೆ. ಕಣ್ಣಿನ ಬಳಿ ಕೈ ಇದೆ. ರಶ್ಮಿಕಾಳ ಈ ಲುಕ್ ಅನೇಕರು ಇಷ್ಟವಾಗಿದೆ. ಆಕೆಯ ಅಭಿಮಾನಿಗಳು ಪೋಸ್ಟರ್‍ ಗಳನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ರಶ್ಮಿಕಾ ಹುಟ್ಟುಹಬ್ಬದಂದು ಸ್ಪೇಷಲ್ ಪೋಸ್ಟರ್‍ ಒಂದನ್ನು ಹಂಚಿಕೊಳ್ಳಲಾಗಿತ್ತು. ಇದೀಗ ಮತ್ತೊಂದು ಪೋಸ್ಟರ್‍ ಹಂಚಿಕೊಂಡು ಆಕೆಗೆ ಸ್ಫೇಷಲ್ ಗಿಫ್ಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ ರಶ್ಮಿಕಾ ಅಭಿನಯದ ದಿ ಗರ್ಲ್ ಫ್ರೆಂಡ್ ಸಿನೆಮಾ ತಂಡದಿಂದಲೂ ಸ್ಪೇಷಲ್ ಪೋಸ್ಟರ್‍ ಬಿಡುಗಡೆ ಮಾಡಲಾಗಿದೆ.

ಇನ್ನೂ ರಶ್ಮಿಕಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಅಬುದಬಿಗೆ ಹಾರಿದ್ದಾರೆ. ಅಲ್ಲಿನ ರೆಸಾರ್ಟ್ ಒಂದರಲ್ಲಿ ತಂಗಿದ್ದು, ಅಲ್ಲಿನ ಕಾಡುಪ್ರಾಣಿಗಳೊಂದಿಗೆ ಆಕೆ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಆಕೆಯೊಂದಿಗೆ ವಿಜಯ್ ದೇವರಕೊಂಡ ಸಹ ದುಬೈಗೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top