News

ಬಾಲಿವುಡ್ ನಟರನ್ನೂ ಮೀರಿಸಿದ ಧೋನಿ ನ್ಯೂ ಲುಕ್ಸ್, ಸೋಷಿಯಲ್ ಮಿಡಿಯಾದಲ್ಲಿ ಧೂಳೆಬ್ಬಿಸಿದ ಮಹಿ…..!

ಸಿನೆಮಾ ತಾರೆಯರಿಗೆ ಇರುವಂತೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಂಗ ಕ್ರಿಕೇಟ್ ರಂಗ ಎನ್ನಬಹುದು. ಟೀಂ ಇಂಡಿಯಾ ಆಟಗಾರ ಎಂ.ಎಸ್.ಧೋನಿ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸುಮಾರು ಒಂದೂವರೆ ದಶಕಗಳ ಕಾಲ ಕ್ರಿಕೇಟ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಜೊತೆಗೆ ಅವರು ತಮ್ಮ ಹೇರ್‍ ಸ್ಟೈಲ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಮತ್ತೊಮ್ಮೆ ಧೋನಿ ತಮ್ಮ ಹೇರ್‍ ಸ್ಟೈಲ್ ಮೂಲಕ ಸದ್ದು ಮಾಡಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗಿನಿಂದ ಅನೇಕ ಕಪ್ ಗಳನ್ನು ಗೆದ್ದು ಕೊಡುವಲ್ಲಿ ಶ್ರಮ ವಹಿಸಿದ್ದಾರೆ. ಅವರು ಕ್ರಿಕೆಟ್ ಗೆ ಎಂಟ್ರಿ ಕೊಟ್ಟಾಗಿನಿಂದ ಅವರ ಹೇರ್‍ ಸ್ಟೈಲ್ ತುಂಭಾನೆ ಫೇಮಸ್ ಆಗಿತ್ತು. ಈ ಹಿಂದೆ ಭಾರತ ಹಾಗೂ ಪಾಕಿಸ್ತಾನ ಮ್ಯಾಚ್ ಸಮಯದಲ್ಲೂ ಅಂದು ಪಾಕಿಸ್ತಾನದ ಪ್ರಧಾನಿಯಾಗಿದ್ದ ಫರ್ವೆಜ್ ಮುಷರಫ್ ಸಹ ಧೋನಿ ಹೇರ್‍ ಸ್ಟೈಲ್ ಅನ್ನು ಕೊಂಡಾಡಿದ್ದರು. ಇದೀಗ ಧೋನಿ ಹೊಸ ಹೇರ್‍ ಸ್ಟೈಲ್ ಮೂಲಕ ಕಾಣಿಸಿಕೊಂಡಿದ್ದು, ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಖ್ಯಾತ ಹೇರ್‍ ಸ್ಟೈಲಿಷ್ಟ್ ಅಲೀಮ್ ಹಕೀಂ ಧೋನಿಯವರಿಗೆ ವಿನೂತನವಾಗಿ ಹೇರ್‍ ಸ್ಟೈಲ್ ಮಾಡಿದ್ದಾರೆ. ಈ ಲುಕ್ಸ್ ನಲ್ಲಿ ಧೋನಿ ತುಂಬಾನೆ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟರನ್ನೂ ಸಹ ಮೀರುವಂತೆ ಅವರು ಕಾಣಿಸಿಕೊಂಡಿದ್ದು. ಈ ಪೊಟೋಗಳು ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪೊಟೋಗಳಿಗೆ ಧೋನಿ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮಹಿ ನೀವು ಬಾಲಿವುಡ್ ನಟರಿಗಿಂತಲೂ ತಾವು ಕಡಿಮೆಯಿಲ್ಲ ಎಂದು ಕೊಂಡಾಡಿದ್ದಾರೆ.

Most Popular

To Top