ಆ ಸ್ಟಾರ್ ನಟಿಯ ಕಾರಣದಿಂದ ಮಂಚು ಲಕ್ಷ್ಮೀಗೆ ಕೋಟಿಗಟ್ಟಲೆ ನಷ್ಟ ಆಗಿದೆಯಂತೆ, ಆಕೆ ಯಾರು ಗೊತ್ತಾ?

ಟಾಲಿವುಡ್ ನ ಖ್ಯಾತ ನಟ ಮೋಹನ್ ಬಾಬು ರವರ ಪುತ್ರಿ ಮಂಚು ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಫನ್ನಿ ವಿಡಿಯೋಗಳನ್ನು, ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಫೇಮ್ ದಕ್ಕಿಸಿಕೊಂಡಿದ್ದಾರೆ. ಆಕೆ ಅಭಿನಯದ ಮೊದಲನೇ ಅನಗನಗಾ ಓ ಧೀರುಡು ಎಂಬ ಸಿನೆಮಾದಲ್ಲಿ ಲೇಡಿ ವಿಲನ್ ಪಾತ್ರಧಾರಿಯಾಗಿ ಕಾಣಿಸಿಕೊಂಡು ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಇನ್ನೂ ಮಂಚು ಲಕ್ಷ್ಮೀಗೆ ಒಬ್ಬ ಸ್ಟಾರ್‍ ನಟಿಯ ಕಾರಣದಿಂದ ಕೋಟಿಗಟ್ಟಲೆ ನಷ್ಟ ಸಂಭವಿಸಿತ್ತಂತೆ. ಅಷ್ಟಕ್ಕೂ ಆ ಸ್ಟಾರ್‍ ನಟಿ ಯಾರು, ಲಕ್ಷ್ಮಿಗೆ ಅಷ್ಟು ನಷ್ಟ ಹೇಗಾಯ್ತು ಎಂಬ ವಿಚಾರಕ್ಕೆ ಬಂದರೇ,

ಮಂಚು ಲಕ್ಷ್ಮೀ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಒಂದಲ್ಲ ಒಂದು ರೀತಿಯ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಮಂಚು ಕುಟುಂಬದ ಲಕ್ಷ್ಮೀ ಏನೆ ಮಾಡಿದರೂ ಸಹ ವಿಭಿನ್ನವಾಗಿಯೇ ಮಾಡುತ್ತಾರೆ. ಅಮೇರಿಕಾದಲ್ಲೂ ಸಹ ಆಕೆ ಬಣ್ಣದ ಲೋಕದಲ್ಲಿ ನಟಿಸಿದ್ದರು. ಅಮೇರಿಕಾದಲ್ಲಿ ಕೆಲವೊಂದು ಶೋಗಳ ಮೂಲಕ ಹಾಗೂ ಕೆಲವೊಂದು ಸಿರೀಸ್ ಗಳಲ್ಲೂ ಸಹ ನಟಿಸಿದ್ದಾರೆ. ಇನ್ನೂ ನಟಿಯಾಗಿ ಕ್ರೇಜ್ ಸಂಪಾದಿಸಿಕೊಳ್ಳಲು ತುಂಬಾನೆ ಪ್ರಯತ್ನ ಮಾಡುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಟಾಕ್ ಶೋಗಳನ್ನು ಸಹ ಪರಿಚಯಿಸಿದರು. ಈ ಟಾಕ್ ಶೋ ಟ್ರೆಂಡ್ ಕ್ರಿಯೇಟ್ ಮಾಡಿದ್ದು ಮಂಚು ಲಕ್ಷ್ಮೀ ಯವರೇ ಎಂದರೇ ತಪ್ಪಾಗಲಾರದು. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಅನೇಕ ಸೇವಾ ಕಾರ್ಯಕ್ರಮಗಳನ್ನು ಸಹ ಮಾಡುತ್ತಿರುತ್ತಾರೆ. ಸಿನಿರಂಗದಲ್ಲಿ ಮಂಚು ಲಕ್ಷ್ಮೀ ಅಂದರೇ ಅನೇಕ ನಟ-ನಟಿಯರು ಗೌರವ ಕೊಡುತ್ತಿರುತ್ತಾರೆ.

ಇನ್ನೂ ಮಂಚು ಲಕ್ಷ್ಮೀ ಓರ್ವ ಸ್ಟಾರ್‍ ನಟಿಯ ಕಾರಣದಿಂದ ಕೋಟಿಗಟ್ಟಲೇ ನಷ್ಟಹೋದರಂತೆ. ಆ ನಟಿಯಾರು, ಏತಕ್ಕಾಗಿ ಮಂಚು ಲಕ್ಷ್ಮೀಗೆ ಅಷ್ಟೊಂದು ನಷ್ಟ ಆಯ್ತು ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿದೆ. ಮಂಚು ಲಕ್ಷ್ಮೀಗೆ ನಷ್ಟ ತಂದುಕೊಟ್ಟಂತಹ ಸ್ಟಾರ್‍ ನಟಿ ಬೇರೆಯಾರೂ ಅಲ್ಲ ಬಾಹುಬಲಿ ಫೇಂ ಅನುಷ್ಕಾ ಶೆಟ್ಟಿ. ಲಕ್ಷ್ಮಿ ಹೋಸ್ಟ್ ಮಾಡುವಂತ ಟಾಕ್ ಶೋಗೆ ಅನುಷ್ಕಾ ರವರನ್ನು ಕರೆತರಲು ಪ್ಲಾನ್ ಮಾಡಿದ್ದರಂತೆ. ಸಾಮಾನ್ಯವಾಗಿ ಮಂಚು ಲಕ್ಷ್ಮಿ ಟಾಕ್ ಶೋಗೆ ಅತಿಥಿಯಾಗಿ ಕರೆದರೇ ಯಾರೂ ಸಹ ಇಲ್ಲ ಎಂದು ಹೇಳುವುದಿಲ್ಲ. ಅದರಂತೆ ಅನುಷ್ಕಾ ಶೆಟ್ಟಿ ಸಹ ಒಪ್ಪಿಕೊಂಡರಂತೆ. ಆದರೆ ಭಾಗಮತಿ ಸಿನೆಮಾದ ಶೂಟಿಂಗ್ ಶೆಡ್ಯೂಲ್ಡ್ ಕಾರಣದಿಂದ ಅನುಷ್ಕಾ ಆ ಶೋಗೆ ಬರಲಿಲ್ಲವಂತೆ. ಆ ಶೋಗಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡು ಎಲ್ಲವೂ ವ್ಯರ್ಥವಾಗಿಯಿತಂತೆ. ಈ ಕಾರಣದಿಂದ ಮಂಚು ಲಕ್ಷ್ಮೀಗೆ ಬರೊಬ್ಬರಿ ಮೂರು ಕೋಟಿ ನಷ್ಟವಾಯಿತ್ತಂತೆ. ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಮಂಚು ಲಕ್ಷ್ಮೀ ಈ ವಿಚಾರವನ್ನು ಹಂಚಿಕೊಂಡಿದ್ದರು.

ಇನ್ನೂ ಮಂಚು ಲಕ್ಷ್ಮೀ ಅಮೇರಿಕಾದಲ್ಲೇ ತನ್ನ ಕೆರಿಯರ್‍ ಪ್ರಾರಂಭಿಸಿದ್ದರು. ಅಲ್ಲೇ ಒಂದೆರಡು ಸಿನೆಮಾಗಳಲ್ಲಿ ನಟಿಸಿದ್ದರು. ಅಮೇರಿಕಾದಲ್ಲೇ ಹೆಚ್ಚು ಕಾಲ ಇದ್ದ ಕಾರಣದಿಂದ ಅಮೇರಿಕಾ ಇಂಗ್ಲೀಷ್ ತುಂಬಾ ಚೆನ್ನಾಗಿ ಬರುತ್ತದೆ. ಇಂಡಿಯಾಗೆ ಬಂದ ಮೇಲೂ ಸಹ ಅದೇ ಇಂಗ್ಲೀಷ್ ಮಾತನಾಡುತ್ತಿರುತ್ತಾರೆ. ಈ ಕಾರಣದಿಂದಲೂ ಸಹ ಲಕ್ಷ್ಮೀ ಟ್ರೋಲ್ ಆಗುತ್ತಿರುತ್ತಾರೆ. ಅದರಲ್ಲೂ ಮಂಚು ಕುಟುಂಬ ಎಂದರೇ ಟ್ರೋಲ್ ಗಳಿಗೆ ಭರ್ಜರಿ ಆಹಾರ ಎನ್ನಲಾಗುತ್ತಿದೆ. ಮಂಚು ಕುಟುಂಬದ ಬಗ್ಗೆ ಅನೇಕ ಮೀಮ್ಸ್, ಟ್ರೋಲ್ ಗಳು ನಡೆಯುತ್ತಲೇ ಇರುತ್ತವೆ.