ಅಭಿಮಾನಿಗಳಿಗೆ ಶಾಕ್ ಕೊಟ್ಟ ನಯನತಾರಾ, ಶಾಕಿಂಗ್ ನಿರ್ಣಯ ತೆಗೆದುಕೊಂಡ ಲೇಡಿ ಸೂಪರ್ ಸ್ಟಾರ್…..!

ಸೌತ್ ಸಿನಿರಂಗದಲ್ಲಿ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿ ಫೇಂ ಸಂಪಾದಿಸಕೊಂಡು ಮದುವೆಯಾದರೂ ಸಹ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಕಳೆದ ವರ್ಷ ಜೂನ್ ಮಾಹೆಯಲ್ಲಿ ನಯನತಾರ ಹಾಗೂ ವಿಘ್ನೇಶ್ ಮದುವೆಯಾದರು. ಮದುವೆಯಾದ ಕೆಲವೇ ತಿಂಗಳಲ್ಲಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳ ತಾಯಿಯಾದರು. ಮದುವೆಯಾದಾಗಿನಿಂದ ಒಂದಲ್ಲ ಒಂದು ಸುದ್ದಿಯ ಮೂಲಕ ನಯನತಾರಾ ಸುದ್ದಿಯಲ್ಲೇ ಇದ್ದಾರೆ. ಇದೀಗ ನಯನತಾರಾ ತಮ್ಮ ಅಭಿಮಾನಿಗಳಿಗೆ ಶಾಕ್ ಆಗುವಂತಹ ನಿರ್ಣಯವೊಂದನ್ನು ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಸಿನಿರಂಗದ ಸೆಲಬ್ರೆಟಿಗಳಿಗೆ ಸಾಕಷ್ಟು ಅಭಿಮಾನಿಗಳಿರುತ್ತಾರೆ. ಆದರೆ ತಮ್ಮ ಅಭಿಮಾನಿಗಳಿಗೆ ಆಗಾಗ ಹಿರೋ ಹಿರೋಯಿನ್ ಗಳು ಶಾಕ್ ಕೊಡುತ್ತಿರುತ್ತಾರೆ. ಈ ಹಾದಿಯಲ್ಲೇ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ದೊಡ್ಡ ಸ್ಟಾರ್‍ ನಟರಿಗೂ ಕಡಿಮೆಯಿಲ್ಲ ಎಂಬಂತೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಯನತಾರಾ ಕಳೆದ ವರ್ಷ ಜೂನ್ 9 ರಂದು ಮದುವೆಯಾದರು. ಮದುವೆಯಾದಾಗಿನಿಂದ ಆಕೆ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇನ್ನೂ ಆಕೆ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಸಹ ಪಡೆದುಕೊಂಡರು. ಸದ್ಯ ನಯನತಾರಾ ಸಿನೆಮಾಗಳ ಜೊತೆಗೆ ತನ್ನ ಮಕ್ಕಳೊಂದಿಗೆ ಕುಟುಂಬವನ್ನೂ ಸಹ ಲೀಡ್ ಮಾಡುತ್ತಿದ್ದಾರೆ.

ಇದೀಗ ನಯನತಾರಾ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮುಂದೆ ತಾನು ಸಿನೆಮಾಗಳಿಗೆ ಗುಡ್ ಬೈ ಹೇಳುವುದಾಗಿ ಸುದ್ದಿ ಕೇಳಿಬರುತ್ತಿದೆ. ಇನ್ನೂ ಈಗಾಗಲೇ ಆಕೆಗೆ ಕಥೆಗಳನ್ನು ಹೇಳಲು ಅನೇಕ ನಿರ್ದೇಶಕರು ಬಂದರೂ ಇಷ್ಟವಾಗಿಲ್ಲ ಎಂದು ರಿಜೆಕ್ಟ್ ಮಾಡುತ್ತಿದ್ದರಂತೆ. ಈಗಾಗಲೇ ತಾನು ಒಪ್ಪಿಕೊಂಡ ಸಿನೆಮಾಗಳನ್ನು ಮಾತ್ರ ಆಕೆ ಮುಗಿಸಿ ಬಳಿಕ ಸಿನೆಮಾಗಳಿಂದ ಬ್ರೇಕ್ ಪಡೆಯಲಿದ್ದಾರಂತೆ. ಸದ್ಯ ಸಿನೆಮಾಗಳಿಗೆ ಬ್ರೇಕ್ ಕೊಟ್ಟು ಪತಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಬೇಕೆಂಬ ಉದ್ದೇಶದಲ್ಲಿದ್ದಾರಂತೆ. ಕೆಲವು ವರ್ಷಗಳ ಬಳಿಕ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸುತ್ತಾರಂತೆ. ಇನ್ನೂ ನಯನತಾರಾ ರವರ ಬಗ್ಗೆ ಅಂತಹ ಸುದ್ದಿಗಳು ಕೇಳಿಬರುತ್ತಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ ಎನ್ನಲಾಗುತ್ತಿದೆ. ಆಕೆ ಸಿನೆಮಾಗಳನ್ನು ಮಾಡಬೇಕು ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.

ಇನ್ನೂ ಮದುವೆಯಾದರೂ ಸಹ ನಯನತಾರಾ ಭಾರಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾ ಭಾರಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆಗೆ ಜವಾನ್ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾಗಾಗಿ ಆಕೆ ಭಾರಿ ಮೊತ್ತದ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.