ವಿಚ್ಚೇದನದ ಹಾದಿಯಲ್ಲಿ ಕಾಲಿವುಡ್ ಸ್ಟಾರ್ ಜೋಡಿ, ನಯನ್-ವಿಕ್ಕಿ ವಿಚ್ಚೇದನ ಪಡೆದುಕೊಳ್ಳುತ್ತಾರಾ?

ಸಿನಿರಂಗದ ಸೆಲೆಬ್ರೆಟಿಗಳ ಬಗ್ಗೆ ಕೇಳಿಬರುವ ಸುದ್ದಿಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತವೆ. ಅದು ಸತ್ಯವಿರಲಿ, ಸುಳ್ಳಾಗಿರಲಿ ಕಡಿಮೆ ಸಮಯದಲ್ಲೇ ಸುದ್ದಿ ಸಖತ್ ವೈರಲ್ ಆಗುತ್ತದೆ. ಇತ್ತೀಚಿಗೆ ಸಿನಿರಂಗದ ಕೆಲವೊಂದು ಜೋಡಿಗಳು ವಿಚ್ಚೇದನ ಪಡೆದುಕೊಂಡ ಸುದ್ದಿ ತಿಳಿದೇ ಇದೆ. ಇದೀಗ ಕಾಲಿವುಡ್ ಸ್ಟಾರ್‍ ಜೋಡಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿಚ್ಚೇದನ ಹಾದಿಯಲ್ಲಿದ್ದಾರೆ ಎಂಬ ರೂಮರ್‍ ಒಂದು ಕೇಳಿಬರುತ್ತಿದೆ.

ಕಳೆದ 2022 ಜೂನ್ 9 ರಂದು ಅದ್ದೂರಿಯಾಗಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ನಡೆಯಿತು. ಮದುವೆಯಾದ ವರ್ಷದಲ್ಲೇ ಸೆರಗೋಸಿ ಪದ್ದತಿಯ ಮೂಲಕ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದುಕೊಂಡರು. ಇನ್ನೂ ನಟಿ ನಯನತಾರಾ ಸೋಷಿಯಲ್ ಮಿಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಆಗಿರಲಿಲ್ಲ. ಆದರೆ ಜವಾನ್ ಸಿನೆಮಾದ ಪ್ರಚಾರದ ಸಮಯದಲ್ಲಿ ಆಕೆ ಇನ್ಸ್ಟಾಗ್ರಾಂಗೆ ಎಂಟ್ರಿ ಕೊಟ್ಟರು. ಇದೀಗ ನಯನತಾರಾ ವಿಘ್ನೇಶ್ ಶಿವನ್ ರವರನ್ನು ಅನ್ ಫಾಲೋ ಮಾಡಿದ್ದಾರಂತೆ. ಅವರಿಬ್ಬರ ನಡುವೆ ಬಿರುಕು ಮೂಡಿದೆಯಂತೆ. ನಯನತಾರಾ ಸಹ ಇದಕ್ಕೆ ಪುಷ್ಟಿ ಕರಿಸುವಂತಹ ಪೋಸ್ಟ್ ಒಂದನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ನಲ್ಲಿ ಕಣ್ಣಲ್ಲಿ ನೀರು ಬರುತ್ತಿದ್ದರೂ, ಇದು ನನಗೆ ಸಿಕ್ಕಿತ್ತು ಎಂದು ಬರೆದಿದ್ದಾರೆ.

ಇನ್ನೂ ನಯನತಾರ ಪ್ರೇಮಿಗಳ ದಿನದವರೆಗೂ ಪತಿಯೊಂದಿಗಿರುವ ಪೊಟೋಗಳನ್ನು ಪೋಸ್ಟ್ ಮಾಡಿದ್ದರು. ಬಳಿಕ ಪತಿಯೊಂದಿಗೆ ಆಕೆ ಯಾವುದೇ ಪೋಸ್ಟ್ ಮಾಡಿಲ್ಲ. ಇದೀಗ ಆಕೆಯ ಇನ್ಸ್ಟಾ ಪೋಸ್ಟ್ ಗಳ ಕಾರಣದಿಂದ ಅವರಿಬ್ಬರು ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಅನುಮಾನಗಳನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಯನತಾರಾ ಅಭಿಮಾನಿಗಳು ಈ ಸುದ್ದಿ ಅಲ್ಲಗೆಳೆದಿದ್ದಾರೆ. ಇದೊಂದು ಸುಳ್ಳು ಸುದ್ದಿಯಾಗಿದೆ. ನಯನತಾರಾರವರಿಗೆ ಆಗದಂತಹವರು ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಅಷ್ಟಕ್ಖೂ ನಯನತಾರಾ ರವರು ವಿಘ್ನೇಶ್ ರವರನ್ನು ಅನ್ ಫಾಲೋ ಮಾಡಿಲ್ಲ. ಇದೆಲ್ಲಾ ಫೇಕ್ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಯನತಾರಾ ಅಥವಾ ವಿಘ್ನೇಶ್ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.