Film News

ಕೆಜಿಎಫ್ ಸಿನೆಮಾದ ಕಥೆ ಇಷ್ಟವಾಗಿಲ್ಲ, ಆದರೂ ಸಹ ನಟಿಸಬೇಕಾಯ್ತು ಎಂದ ರಾಖಿ ಭಾಯ್ ತಾಯಿ ಅರ್ಚನಾ ಜೋಯಿಸ್.….!

ಸ್ಯಾಂಡಲ್ ವುಡ್ ಸಿನಿರಂಗವನ್ನು ಇಡೀ ವಿಶ್ವದಾದ್ಯಂತ ಖ್ಯಾತಿ ಪಡೆದುಕೊಳ್ಳುವಂತೆ ಮಾಡಿದ ಸಿನೆಮಾ ಎಂದರೇ ಕೆಜಿಎಫ್ ಎಂದು ಹೇಳಬಹುದಾಗಿದೆ. ಈ ಸಿನೆಮಾ ದೇಶದ ಸಿನಿರಂಗಗಳ ಅನೇಕ ಸಿನೆಮಾಗಳ ರೆಕಾರ್ಡ್ ಗಳನ್ನು ಧೂಳಿಪಟ ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಈ ಸಿನೆಮಾದಲ್ಲಿ ಕಾಣಿಸಿಕೊಂಡ ಪ್ರತಿಯೊಂದು ಪಾತ್ರವೂ ಸಹ ವಿಭಿನ್ನವಾಗಿದೆ ಎಂದು ಹೇಳಬಹುದು. ಇದೀಗ ಕೆಜಿಎಫ್ ಸಿನೆಮಾದಲ್ಲಿ ಯಶ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡ ಅರ್ಚನಾ ಜೋಯಿಸ್ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ವೈರಲ್ ಆಗುತ್ತಿವೆ.

ಕೆಜಿಎಫ್ ಸಿನೆಮಾದಲ್ಲಿ ಯಶ್ ರವರು ರಾಖಿ ಭಾಯ್ ಎಂಬ ಪಾತ್ರದಲ್ಲಿ ನಟಿಸಿದ್ದರು. ರಾಖಿ ಭಾಯ್ ತಾಯಿಯಾಗಿ ಅರ್ಚನ ಜೋಯಿಸ್ ಶಾಂತಮ್ಮ ಎಂಬ ಪಾತ್ರದಲ್ಲಿ ನಟಿಸಿದ್ದರು. ಸಿನೆಮಾದಲ್ಲಿ ಯಶ್ ಪಾತ್ರ ಯಾವ ರೀತಿ ನೆನಪಿನಲ್ಲಿರುತ್ತದೆಯೋ ಅದೇ ಮಾದರಿಯಲ್ಲಿ ಶಾಂತಮ್ಮ ಪಾತ್ರ ಸಹ ನೆನಪಿರುತ್ತದೆ. ಇದೀಗ ಕೆಜಿಎಫ್ ಸಿನೆಮಾದ ಅನುಭವಗಳ ಬಗ್ಗೆ ಅರ್ಚನ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಕೆಜಿಎಫ್ ಸಿನೆಮಾದ ಆಫರ್‍ ಬಂದಾಗ ಆಕೆಗೆ 22 ವಯಸ್ಸಂತೆ. ಆ ವಯಸ್ಸಿನಲ್ಲಿ ಮದರ್‍ ರೋಲ್ ಮಾಡಿದರೇ ಕೆರಿಯರ್‍ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತದೆ ಎಂಬ ಉದ್ದೇಶದಿಂದ ಕೆಜಿಎಫ್ ಸಿನೆಮಾಗೆ ಮೊದಲು ನೋ ಎಂದು ಹೇಳಿದ್ದರಂತೆ. ಆದರೆ ಆಕೆ ಆ ಪಾತ್ರಕ್ಕೆ ಫರ್ಪೆಕ್ಟ್ ಆಯ್ಕೆಯಾಗುತ್ತಾರೆ ಎಂದು ಮೇಕರ್ಸ್, ಬಂಧುಗಳು, ಸ್ನೇಹಿತರು ಅರ್ಚನ ರವರನ್ನು ಒಂದು ಬಾರಿ ಕಥೆ ಕೇಳು ಎಂದು ಒತ್ತಡ ಮಾಡಿದ್ದರಂತೆ.

ಇನ್ನೂ ಕಥೆಯನ್ನು ಕೇಳಲು ಆಕೆ ಒಪ್ಪಿಕೊಂಡರಂತೆ. ಕಥೆಯನ್ನು ಪೂರ್ತಿ ಕೇಳಿದ ಬಳಿಕವೂ ಸಹ ಈ ಸಿನೆಮಾ ಮಾಡೋಕೆ ಆಕೆಗೆ ಇಷ್ಟ ಆಗಲಿಲ್ಲವಂತೆ. ಆದರೆ ಮೇಕರ್ಸ್ ಗಳ ಒತ್ತಾಯದ ಮೇರೆಗೆ ಸಿನೆಮಾದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಆದರೆ ಸಿನೆಮಾ ರಿಜಲ್ಟ್ ನೋಡಿ ಶಾಕ್ ಆದರಂತೆ. ಆಕೆ ಊಹೆಗೂ ಮೀರಿ ರೆಸ್ಪಾನ್ಸ್ ಬಂದಿದ್ದು, ತುಂಬಾ ಖುಷಿಯಾಗಿ ಅನಿಸಿತ್ತು. ಒಂದು ವೇಳೆ ಈ ಸಿನೆಮಾ ಮಿಸ್ ಆಗಿದ್ದರೇ ಒಳ್ಳಯೆ ಅವಕಾಶ ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದು ಅರ್ಚನ ಹೇಳಿದ್ದಾರೆ. ಇನ್ನೂ ಅರ್ಚನಾ ಇತ್ತಿಚಿಗೆ ಸ್ಟ್ರೀಮಿಂಗ್ ಆಗುತ್ತಿರುವ ಮಾನ್ಷನ್ 24 ಎಂಬ ಸಿರೀಸ್ ನಲ್ಲಿ ನಟಿಸಿದ್ದು, ಈ ಸಿರೀಸ್ ಪ್ರಮೋಷನ್ ಗಾಗಿ ಆಕೆ ಹೈದರಾಬಾದ್ ಗೆ ಹೋಗಿದ್ದರು. ಈ ವೇಳೆ ಆಕೆ ತನ್ನ ಸಿನೆಮಾ ಕೆರಿಯರ್‍ ಹಾಗೂ ವೈಯುಕ್ತಿಕ ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇದೇ ಸಮಯದಲ್ಲಿ ಆಕೆ ಕೆಜಿಎಫ್ ಸಿನೆಮಾದ ಬಗ್ಗೆ ಹೇಳಿದ್ದಾರೆ.

Most Popular

To Top