Film News

ಐಕ್ಯರಾಜ್ಯ ಸಮಿತಿಯಲ್ಲಿ ಕಾಂತಾರ ಸ್ಕ್ರೀನಿಂಗ್ ಅಂತರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ಕಾಂತಾರ ಸಿನೆಮಾಗೆ ಗೌರವ….!

ಸ್ಯಾಂಡಲ್ ವುಡ್ ನ ನಿರ್ದೇಶಕ ಕಂ ನಟ ರಿಷಭ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬಂದ ಕಾಂತಾರ ಸಿನೆಮಾ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಸಾಮಾನ್ಯವಾಗಿ ತೆರೆಕಂಡ ಈ ಸಿನೆಮಾ ಕಡಿಮೆ ಸಮಯದಲ್ಲೇ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಬಿಡುಗಡೆಯಾಯಿತು. ಎಲ್ಲಾ ಭಾಷೆಗಳಲ್ಲೂ ಸಹ ಪ್ರೇಕ್ಷಕರನ್ನು ರಂಜಿಸಿತ್ತು. ದೊಡ್ಡ ಸ್ಟಾರ್‍ ನಟರೂ ಸೇರಿದಂತೆ ಅನೇಕರು ಈ ಸಿನೆಮಾಗೆ ಫಿದಾ ಆಗಿದ್ದರು. ಈಗಾಗಲೇ ಅನೇಕ ಅವಾರ್ಡ್‌ಗಳನ್ನು ಮುಡಿಗೇರಿಸಿಕೊಂಡ ಈ ಸಿನೆಮಾಗೆ ಇದೀಗ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗೌರವ ಸಿಕ್ಕಿದೆ.

ಕಳೆದ ವರ್ಷ ಸ್ಯಾಂಡಲ್ ವುಡ್ ಸಿನೆಮಾಗಳ ಪೈಕಿ ಸಂಚಲನ ಸೃಷ್ಟಿಸಿದ ಸಿನೆಮಾಗಳಲ್ಲಿ ಕೆಜಿಎಫ್-2 ಹಾಗೂ ಕಾಂತಾರ ಮೊದಲ ಸ್ಥಾನದಲ್ಲಿವೆ. ಸೌತ್ ನ RRR ಹಾಗೂ ಕೆಜಿಎಫ್-2 ಸಿಎನಮಾಗಳು ಭಾರಿ ಬಜೆಟ್ ಹಾಗೂ ಭಾರಿ ನಿರೀಕ್ಷೆಯಿಂದ ತೆರೆಗೆ ಬಂದವು. ಆದರೆ ಕಾಂತಾರ ಸಿನೆಮಾ ಕಡಿಮೆ ಬಜೆಟ್ ನಲ್ಲಿ ಸಾಮಾನ್ಯ ಸಿನೆಮಾ ರೀತಿಯಲ್ಲಿ ತೆರೆಗೆ ಬಂತು. ಆದರೆ ಪ್ಯಾನ್ ಇಂಡಿಯಾ ಸಿನೆಮಾ ಆಗಿ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ ನಲ್ಲೂ ಸಹ ಭಾರಿ ಮೊತ್ತ ಕಲೆಕ್ಷನ್ ಮಾಡಿದೆ.  ಈಗಾಗಲೇ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಪಡೆದುಕೊಂಡ ಕಾಂತಾರ ಸಿನೆಮಾಗೆ ಇದೀಗ ಅಂತರಾಷ್ಟ್ರೀಯ ಮಟ್ಟದ ಗೌರವ ಸಹ ಲಭಿಸಲಿದೆ. ಅಂತರಾಷ್ಟ್ರೀಯ ಐಕ್ಯರಾಜ್ಯ ಸಮಿತಿ ವೇದಿಕೆಯಲ್ಲಿ ಕಾಂತಾರ ಸಿನೆಮಾಗೆ ಗೌರವ ದೊರಕಿದೆ. ಸ್ವಿರ್ಜಲ್ಯಾಂಡ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಇಂದು ಅಂತರಾಷ್ಟ್ರೀಯ ಐಕ್ಯರಾಜ್ಯ ಸಮಿತಿ ವೇದಿಕೆಯಲ್ಲಿ ಕಾಂತಾರ ಸಿನೆಮಾ ಸ್ಕ್ರೀನಿಂಗ್ ಆಗಲಿದೆ. ಬಳಿಕ ರಿಷಭ್ ಶೆಟ್ಟಿಯವರು ಸಹ ಈ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಡಿನ್ನರ್‍ ಮೀಟಿಂಗ್ ನಲ್ಲೂ ಸಹ ರಿಷಭ್ ಭಾಗಿಯಾಗಲಿದ್ದಾರಂತೆ. ಇನ್ನೂ ಈ ಕಾರ್ಯಕ್ರಮದಲ್ಲಿ ರಿಷಭ್ ಭಾರತೀಯ ಸಂಸ್ಕೃತಿಯ ಬಗ್ಗೆ, ಪ್ರಕೃತಿಯ ಅಸಮತೋಲನ, ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಲಿದ್ದಾರಂತೆ. ಇನ್ನೂ ಮಾ.17 ರಂದು ದಿವಂಗತ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ರವರ ಜನ್ಮ ದಿನಾಚರಣೆ ಅಂಗವಾಗಿ ಕಾಂತಾರ ಸ್ಪೇಷಲ್ ಸ್ಕ್ರೀನಿಂಗ್ ಆಗಲಿದೆ.

ಇನ್ನೂ ಕಾಂತಾರ ಸಿನೆಮಾ ಭಾರಿ ಸಕ್ಸಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಿಷಭ್ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಇದೀಗ ಕಾಂತಾರ ಸಿನೆಮಾದ ಪ್ರೀಕ್ವೆಲ್ ಬಗ್ಗೆ ಸಹ ರಿಷಭ್ ಮಾತನಾಡಿದ್ದಾರೆ. ಕಾಂತಾರ ಪ್ರೀಕ್ವೆಲ್ ಗಾಗಿ ಲೊಕೇಷನ್ ಹಾಗೂ ಕಥೆಯನ್ನು ಸಿದ್ದಪಡಿಸುವ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ರಿಷಭ್ ರವರ ಮುಂದಿನ ಸಿನೆಮಾದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ.

Most Popular

To Top