News

ಹೊಸ ಬಾಂಬ್ ಸಿಡಿಸಿ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಸಹ ಬಿಜೆಪಿ ಸೇರೋಕೆ ರೆಡಿಯಾಗಿದ್ರು ಎಂದ ಮಾಜಿ ಸಚಿವ…..!

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರೋಕೆ ರೆಡಿಯಾಗಿದ್ರು ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹಾಟ್ ಬಾಂಬ್ ಸಿಡಿಸಿದ್ದಾರೆ ಮಾಜಿ ಸಚಿವ ಹಾಗೂ ಜೆಡಿಎಸ್ ಪಕ್ಷದ ಕೋರ್‍ ಕಮಿಡಿ ಅಧ್ಯಕ್ಷ ಜಿ.ಟಿ.ದೇವೆಗೌಡ. ಕಳೆದ 2006 ರಲ್ಲಿ ಸಿದ್ದರಾಮಯ್ಯ ಬಿಜೆಪಿ ಪಕ್ಷಕ್ಕೆ ಸೇರೋಕೆ ಸಿದ್ದರಾಮಯ್ಯ ಸಿದ್ದವಾಗಿದ್ದರು ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.

ಮಾಜಿ ಸಚಿವ ಜಿ.ಟಿ.ದೇವೇಗೌಡ ರವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಾಂಬ್ ಸಿಡಿಸಿದ್ದಾರೆ. 2006ರ ಲ್ಲಿ ನಡೆದ ಉಪಚುನಾವಣೆಯ ಬಳಿಕ ವಿರೋಧ ಪಕ್ಷದ ನಾಯಕ ಮಾಡದಿದ್ರೆ ಸಿದ್ದರಾಮಯ್ಯ ಬಿಜೆಪಿ ಸೇರ್ತಿದ್ರು, ಅದಕ್ಕಾಗಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಜೊತೆಗೆ ಕಾಗಿನೆಲೆಯಿಂದ ಸೂತ್ತೂರು ಮಠಕ್ಕೆ ಬಂದಿದ್ದರು. ಅಷ್ಟೇಅಲ್ಲದೇ ಕಾಂಗ್ರೇಸ್ ಪಕ್ಷವನ್ನು ಅವರು ಸೀಮೆಎಣ್ಣೆ ಪಾರ್ಟಿ ಎಂದು ಹೇಳಿದ್ರು. ಬಿಜೆಪಿ ಸೇರುವ ಬಗ್ಗೆ ಮೋದಿ ಜೊತೆ ಮಾತನಾಡಿದ್ರು. ವಿರೋಧ ಪಕ್ಷದ ಸ್ಥಾನ ಸಿದ್ದರಾಮಯ್ಯನವರಿಗೆ ಸಿಗದೇ ಇದಿದ್ದರೇ ಅವರು ನೂರಕ್ಕೆ ನೂರರಷ್ಟು ಬಿಜೆಪಿಗೆ ಹೋಗ್ತಾ ಇದ್ರು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಆದರೆ ಕಾಂಗ್ರೇಸ್ ನವರು ಅಧಿಕಾರ ಶಾಶ್ವತ ಎಂದುಕೊಂಡಿದ್ದಾರೆ.

ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಪೂರ್ಣ ಮನಸ್ಸಿನಿಂದ ಒಂದಾದರೇ ಲೋಕಸಭೆಯಲ್ಲಿ 25 ಸ್ಥಾನಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಕಾಂಗ್ರೇಸ್ ಪಕ್ಷಕ್ಕೆ ಮೂರನೇ ಸ್ಥಾನ ನೀಡಿ ತಕ್ಕ ಪಾಠ ಕಲಿಸಬಹುದು. ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಟಿಕೆ ನೀಡಿದರೇ ಆಗ 25 ಸ್ಥಾನಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಗೆಲ್ಲಬಹುದು. ಕಾಂಗ್ರೇಸ್ ಸೋಲಿಸುವ ಗುರಿಯಿಂದಲೇ ಬಿಜೆಪಿ ಜೊತೆ ಸೇರಲಾಗುತ್ತಿದೆ. ಬಿಜೆಪಿಗೆ ನಮ್ಮ ಶಕ್ತಿ ಬೇಕು, ನಮಗೆ ಬಿಜೆಪಿ ಶಕ್ತಿ ಬೇಕು. ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಎಫ್.ಐ.ಆರ್‍ ಹಾಕಿಸುತ್ತಿದ್ದಾರೆ. ಕಾರ್ಯಕರ್ತರಿಗೆ ರಕ್ಷಣೆಇಲ್ಲ. ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಲೋಕಸಭೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಸೋಲಿಸಬೇಕು ಎಂದು ಸೆ.10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶ ಹಮ್ಮಿಕೊಂಡಿದ್ದು, ಅಂದು ನಮ್ಮ ಶಕ್ತಿ ಪ್ರದರ್ಶನ ತೋರಿಸುತ್ತೇವೆ ಎಂದು ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

Most Popular

To Top