News

ಚಂದ್ರನ ಅಂಗಳದಲ್ಲಿ ನಿಗೂಢ ಸದ್ದು, ಆ.26 ರಂದು ಕೇಳಿಸಿದ ನಿಗೂಢ ಸದ್ದು, ಏಲಿಯನ್ ಇದೆಯಾ ಚಂದ್ರನಲ್ಲಿ?

ಭಾರತೀಯ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಯಶಸ್ವಿಗೊಳಿಸಿದ್ದು, ದಿನನಿತ್ಯ ಚಂದ್ರನ ಅಂಗಳದಲ್ಲಿನ ವಿಶೇಷತೆಗಳನ್ನು ತಿಳಿಸುತ್ತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಂತಹ ವಿಕ್ರಂ ಲ್ಯಾಂಡರ್‍ ಹಾಗೂ ಪ್ರಗ್ಯಾನ್ ರೋವರ್‍ ಚಂದ್ರನ ಬಗ್ಗೆ ಅನೇಕ ವಿಚಾರಗಳನ್ನು ಕಳುಹಿಸುತ್ತಿದೆ. ಚಂದ್ರಯಾನ -3 ಮಿಷನ್ ಉದ್ದೇಶ ಹಂತ ಹಂತವಾಗಿ ಸಫಲವಾಗುತ್ತಿದೆ. ಕಳೆದ ಆ.26 ರಂದು ಚಂದ್ರನಲ್ಲಿ ನಿಗೂಢ ಶಬ್ದ ಕೇಳಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಕೆಲವು ದಿನಗಳ ಹಿಂದೆಯಷ್ಟೆ ಚಂದ್ರನಲ್ಲಿ ಸಲ್ಫರ್‍ ಜೊತೆಗೆ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಮ್ಯಾಂಗನೀಸ್, ಸಿಲಿಕಾನ್, ಟೈಟಾನಿಯಂ ಹಾಗೂ ಆಮ್ಲಜನಕವನ್ನು ಪತ್ತೆ ಮಾಡಿದೆ. ಇದೀಗ ಹೈಡ್ರೋಜನ್ ಹುಡುಕಾಟ ಮುಂದುವರೆದಿದೆ ಎಂದು ಇಸ್ರೋ ತನ್ನ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು. ಆ.26 ರಂದು ಚಂದ್ರನ ಅಂಗಳದಲ್ಲಿ ನಿಗೂಡ ಸದ್ದು ಕೇಳಿಬಂದಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರನಲ್ಲಿ ಏಲಿಯನ್ ಗಳಿದೆಯಾ, ಅಥವಾ ಆ ನಿಗೂಡ ಸದ್ದು ಕೇಳಿಬಂದಿದ್ದು ಎಲ್ಲಿ ಎಂಬ ಕುತೂಹಲ ಮೂಡಿದೆ.

ವಿಕ್ರಂ ಲ್ಯಾಂಡರ್‍ ಹಾಗೂ ಪ್ರಗ್ಯಾನ್ ರೋವರ್‍ ನಲ್ಲಿ ಆ.26 ರಮದು ನಿಗೂಡ ಸದ್ದೊಂದು ಕೇಳಿಬಂದಿದೆ. ಈ ನಿಗೂಡ ಸದ್ದು ಸಹ ರೆಕಾರ್ಡ್ ಮಾಡಲಾಗಿದೆ. ಆ.25 ರಂದು ರೋವರ್‍ ನ್ಯಾವಿಗೇಷನ್ ಸಮಯದಲ್ಲಿ ದಾಖಲಾದ ಕಂಪನಗಳಲ್ಲಿ ಇದನ್ನೂ ಸಹ ದಾಖಲು ಮಾಡಲಾಗಿದೆ. ಇದರ ಜೊತೆಗೆ ಮತ್ತೆ ಆ.26 ರಂದೂ ಸಹ ರೆಕಾರ್ಡ್ ಮಾಡಲಾಗಿದೆ. ಈಗಾಗಲೇ ಚಂದ್ರನ ಮೇಲೆ ಕೆಲವೊಂದು ವಸ್ತುಗಳ ಜೊತೆಗೆ ಆಮ್ಲಜನಕ ಸಹ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿ ಜೀವಿಗಳು ಇರಬಹುದಾ ಎಂಬ ಅನುಮಾನ ಮೂಡಿತ್ತು. ಇದೀಗ ಕೇಳಿಬಂದ ನಿಗೂಡ ಸದ್ದಿನಿಂದ ಚಂದ್ರನ ಮೇಲೆ ಅನ್ಯ ಗ್ರಹ ಜೀವಿಗಳಿರಬಹುದೇ ಎಂಬ ಅನುಮಾನ ಮೂಡಿದೆ. ಇನ್ನೂ ಈಗಾಗಲೇ ಏಲಿಯನ್ ಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಇದೀಗ ಚಂದ್ರನ ಮೇಲೆ ಕೇಳಿ ಬಂದ ಸದ್ದು ಏಲಿಯನ್ ಗಳದ್ದು ಇರಬಹುದಾ ಎಂಬ ಕುತೂಹಲ ಮೂಡುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿಖರವಾದ ಮಾಹಿತಿ ಸಿಗಬಹುದೆನ್ನಲಾಗಿದೆ.

Most Popular

To Top