News

ಪತ್ನಿಯ ಪ್ರಿಯಕರನ ತಲೆ ಕಡಿದು ಆಕೆಯ ತವರು ಮನೆ ಮುಂದೆ ಬಿಸಾಡಿದ ಪತಿ, ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿಯಿಂದ ಕೃತ್ಯ….!

ಸಮಾಜದಲ್ಲಿ ಅನೇಕರು ಅಕ್ರಮ ಸಂಬಂಧಗಳ ಕಾರಣದಿಂದ ತಮ್ಮ ಇಡೀ ಜೀವನವನ್ನೇ ನಾಶ ಮಾಡಿಕೊಳ್ಳುತ್ತಾರೆ. ಅಂತಹುದೇ ಘಟನೆಯೊಂದು ನಡೆದಿದೆ. ತನ್ನ ಪತ್ನಿ ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ, ಪತ್ನಿಯ ಪ್ರಿಯಕರನ ತಲೆ ಕಡಿದು, ಕಡಿದ ತಲೆಯನ್ನು ಪತ್ನಿಯ ತವರು ಮನೆ ಮುಂದೆ ಹಾಕಿರುವಂತಹ ಭಯಾನಕ ಘಟನೆಯೊಂದು ನಡೆದಿದೆ.

ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ ತನ್ನ ಪತ್ನಿಯ ಪ್ರಿಯಕರ ಎಂದು ಶಂಕಿಸಿ ವ್ಯಕ್ತಿಯೊಬ್ಬರನ್ನು ಭರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ತಮಿಳುನಾಇಡನ ತೆಂಕಶಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಎಸ್.ವೇಲು ಸ್ವಾಮಿ ಎಂದು ಗುರ್ತಿಸಲಾಗಿದೆ. ವೇಲುಸ್ವಾಮಿಯ ಪತ್ನಿಯ ಜೊತೆಗೆ ಮುರುಗನ್ ಎಂಬ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದು. ಈ ಸುದ್ದಿ ತಿಳಿದ ವೇಲುಸ್ವಾಮಿ ಮುರುಗನ್ ತಲೆ ಕಡಿದು ಕೊಲೆ ಮಾಡಿದ್ದಾನೆ. ಅದು ಸಾಲದು ಎಂಬಂತೆ ಮುರುಗನ್ ತಲೆಯನ್ನು ಪತ್ನಿಯ ತವರು ಮನೆಯ ಮುಂದೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಇನ್ನೂ ಆರೋಪಿ ವೇಲುಸ್ವಾಮಿ ಹಾಗೂ ಆತನ ಪತ್ನಿ ಎಸಕ್ಕಿ ಯಮ್ಮಾಳ್ ಮದುವೆಯಾಗಿದ್ದರೂ ಸಹ ಮುರುಗನ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಮನೆಯ ಹತ್ತಿರದಲ್ಲಿಯೇ ವಾಸವಿದ್ದ ಮುರುಗನ್ ಜೊತೆಗೆ ಅಕ್ರಮ ಸಂಬಂಧ ಶುರು ಮಾಡಿದ್ದಳಂತೆ. ಈ ಸುದ್ದಿ ಆರೋಪಿ ವೇಲುಸ್ವಾಮಿಗೆ ತಿಳಿದು ಅನೇಕ ಬಾರಿ ಪತ್ನಿಯೊಂದಿಗೆ ಜಗಳ ಸಹ ಮಾಡಿದ್ದನಂತೆ. ಆದರೂ ಸಹ ಆಕೆ ಬದಲಾಗದ ಕಾರಣ ವೇಲುಸ್ವಾಮಿ ಬೇಸತ್ತು ಹೋಗಿದ್ದಾನೆ. ಗಲಾಟೆಯ ಕಾರಣದಿಂದ ಪತ್ನಿ ಸಹ ವೇಲುಸ್ವಾಮಿಯಿಂದ ದೂರವಾದರು. ಇದರಿಂದಾಗಿ ಮುರುಗನ್ ಜೊತೆಗೆ ಜಗಳ ಮಾಡಿಕೊಂಡಿದ್ದಾನೆ. ಜಗಳ ಮಿತಿಮೀರಿ ಮುರುಗನ್ ತಲೆ ಕಡಿದು ತಲೆಯೊಂದಿಗೆ ಪತ್ನಿಯ ತವರು ಮನೆಯ ಮುಂದೆ ಎಸೆದು ಹೋಗಿದ್ದಾನೆ. ಈ ಘಟನೆಯಿಂದ ತವರು ಮನೆಯವರು ಬೆಚ್ಚಿಬಿದ್ದಿದ್ದಾರೆ. ಇನ್ನೂ ಪೊಲೀಸರು ಆರೋಪಿ ವೇಲುಸ್ವಾಮಿಯನ್ನು ಬಂಧಿಸಿ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Trending

To Top