ವರಸೆ ಬದಲಿಸಿದ ಹೋಮ್ಲಿ ಬ್ಯೂಟಿ ಮೀರಾ ಜಾಸ್ಮೀನ್, ಸಖತ್ ಬೋಲ್ಡ್ ಆದ ಮಲ್ಲು ಬ್ಯೂಟಿ ಮೀರಾ……!

Follow Us :

ಸೌತ್ ಸಿನಿರಂಗದಲ್ಲಿ ಅನೇಕ ವರ್ಷಗಳ ಹಿಂದೆ ಹೋಮ್ಲಿ ಬ್ಯೂಟಿಯಾಗಿ ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ಮಲಯಾಳಂ ಬ್ಯೂಟಿ ಮೀರಾ ಜಾಸ್ಮೀನ್ ಸದ್ಯ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಮಲಯಾಳಂ ಸೇರಿದಂತೆ ತೆಲುಗು, ಕನ್ನಡ ಹಾಗೂ ತಮಿಳೂ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದರು. ಇದೀಗ ಸೆಕೆಂಡ್ ಇನ್ನೀಂಗ್ಸ್ ಶುರು ಮಾಡಿದ್ದು, ಸೋಷಿಯಲ್ ಮಿಡಿಯಾ ಮೂಲಕ ಹಾಟ್ ಬ್ಯೂಟಿಯಾಗಿ ಬದಲಾಗಿದ್ದಾರೆ.

ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿದ್ದ ಮೀರಾ ಜಾಸ್ಮೀನ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸ್ಪೇಷಲ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಒಂದು ಕಾಲದಲ್ಲಿ ಹೋಮ್ಲಿ ಬ್ಯೂಟಿಯಾಗಿದ್ದ ಈಕೆ ಇದೀಗ ಪಕ್ಕಾ ಹಾಟ್ ಬ್ಯೂಟಿಯಂತೆ ಪೋಸ್ ಕೊಡುತ್ತಿದ್ದಾರೆ. ಸದ್ಯ ಆಕೆ ನಲವತ್ತರ ವಯಸ್ಸಿನ ಗಡಿ ದಾಟಿದ್ದರೂ ಸಹ ಹದಿಹರೆಯದ ಯುವತಿಯರಂತೆ ಪೋಸ್ ಕೊಡುತ್ತಿದ್ದಾರೆ. ಈಗಾಗಲೇ ಅನೇಕ ಸೀನಿಯರ್‍ ನಟಿಯರು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅಕ್ಕ, ಅತ್ತಿಗೆ ಮೊದಲಾದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಮೀರಾ ಜಾಸ್ಮೀನ್ ಮಾತ್ರ ನಟಿಯಾಗಿ ಅವಕಾಶಗಳಿಗಾಗಿ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಆಕೆ ಹಂಚಿಕೊಳ್ಳುವಂತಹ ಹಾಟ್ ಪೊಟೋಶೂಟ್ಸ್ ಗಳು ಎನ್ನಬಹುದಾಗಿದೆ.

ಮಲಯಾಳಂ ಬ್ಯೂಟಿ ಮೀರಾ ಜಾಸ್ಮೀನ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಪಾತ್ರಕ್ಕೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಿದ್ದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾಗಿ ಸಿನೆಮಾಗಳಿಂದ ದೂರ ಉಳಿದರು. ಪತಿಯೊಂದಿಗೆ ವಿಬೇದಗಳು ಹುಟ್ಟಿಕೊಂಡು ಆಕೆ ಒಂಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸಿನೆಮಾಗಳ ಬೇಟೆ ಶುರು ಮಾಡಿದ್ದಾರೆ. ಕೆರಿಯರ್‍ ಆರಂಭದಿಂದಲೂ ಹೋಮ್ಲಿ ಬ್ಯೂಟಿಯಾಗಿ ಕಾಣಿಸಿಕೊಂಡ ಮೀರಾ ಜಾಸ್ಮೀನ್ ಇದೀಗ ತನ್ನಲ್ಲಿನ ಗ್ಲಾಮರ್‍ ಕೊಣವನ್ನು ಹೊರಹಾಕುತ್ತಿದ್ದಾರೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ಆಕೆ ಲೆಹಂಗಾದಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟಿದ್ದಾರೆ. ಟ್ರೆಡಿಷನಲ್ ಲುಕ್ಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಯುವಕರ ನಿದ್ದೆ ಕದ್ದಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕರು ಹಾಗೂ ನಿದೇರ್ಶಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಕೊನೆಯದಾಗಿ ವಿಮಾನಂ ಎಂಬ ಸಿನೆಮಾದಲ್ಲಿ ಸ್ಪೇಷಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆಕೆಯ ಕೈಯಲ್ಲಿ ಮತಷ್ಟು ಪ್ರಾಜೆಕ್ಟ್ ಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.