ಕ್ಷುಲಕ ಕಾರಣಕ್ಕಾಗಿ ಜಲಪಾತದಿಂದ ಹಾರಿದ ಬಾಲಕಿ, ಮೊಬೈಲ್ ಬಳಸಬೇಡ ಎಂದಿದ್ದಕ್ಕೆ 90 ಅಡಿ ಜಲಪಾತದಿಂದ ಹಾರಿದ ಬಾಲಕಿ….!

Follow Us :

ಕೆಲವರು ಕ್ಷುಲಕ ಕಾರಣಕ್ಕಾಗಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ, ಅದರಲ್ಲಿ ಕೆಲವರಂತೂ ಸಹ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ಸಹ ತಲುಪುತ್ತಾರೆ. ಅಂತಹುದೇ ಘಟನೆಯೊಂದು ಛತ್ತೀಸ್ ಗಢದ ಬಸ್ತಾರ್‍ ಎಂಬಲ್ಲಿ ನಡೆದಿದೆ. ಮೊಬೈಲ್ ಬಳಸಬೇಡ ಎಂದು ಹೇಳಿದ್ದಕ್ಕೆ ಯುವತಿಯೊಬ್ಬಳು ಜಲಪಾತದಿಂದ ಹಾರಿದ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.

ಪದೇ ಪದೇ ಮೊಬೈಲ್ ಬಳಸಬೇಡ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿ ಬಾಲಕಿಯನ್ನು ಬೈದ ಕಾರಣದಿಂದ ಪೋಷಕರ ಮಾತುಗಳಿಗೆ ಕೋಪಗೊಂಡ ಬಾಲಕಿ 90 ಅಡಿ ಎತ್ತರದ ಜಲಪಾತದಿಂದ ಕೆಳಗೆ ಬಿದ್ದಿದ್ದಾರೆ. ಛತ್ತಿಸ್ ಘಡದ ಬಸ್ತಾರ್‍ ನ ಜಗದಲ್ ಪುರ ಎಂಬ ಪ್ರದೇಶದಿಂದ ಸುಮಾರು 38 ಕಿ.ಮೀ ದೂರವಿರುವ ಚಿತ್ರಕೊಟೆ ಎಮಬ ಜಲಪಾತದಲ್ಲಿ ಈ ಘಟನೆ ಸಂಭವಿಸಿದೆ. ಇನ್ನೂ ಜಲಪಾತದಿಂದ ಬಾಲಕಿ ಹಾರುವ ವಿಡಿಯೋ ಅನ್ನು ಅಲ್ಲಿಯೇ ಇರುವ ಪ್ರವಾಸಿಗರು ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ವಿಡಿಯೋದಲ್ಲಿರುವಂತೆ ಬಾಲಕಿ 90 ಅಡಿ ಎತ್ತರವಿರುವ ಜಲಪಾತದ ತುತ್ತ ತುದಿಗೆ ಬಂದು ನಿಂತುಕೊಂಡಿರುತ್ತಾಳೆ. ಆ ಪ್ರದೇಶಕ್ಕೆ ಸಾಮಾನ್ಯವಾಗಿ ಯಾರೂ ಸಹ ಹೋಗುವುದಿಲ್ಲವಂತೆ. ಆದರೆ ಬಾಲಕಿ ಅಪಾಯಕಾರಿ ಪ್ರದೇಶಕ್ಕೆ ಬಂದು ನಿಂತು ನೋಡುತ್ತಿದ್ದಂತೆ ಕೆಳಗೆ ಹಾರಿದ್ದಾರೆ. ಆಕೆ ಹಾರುವದಕ್ಕೂ ಮುಂಚೆ ಅಲ್ಲಿದ್ದ ಕೆಲವರು ವಾಪಸ್ಸು ಬರುವಂತೆ ಕೂಗಿ ಹೇಳಿದ್ದಾರೆ. ಆದರೆ ಅದ್ಯಾವುದನ್ನೂ ಲೆಕ್ಕಿಸದೇ ಆಕೆ ಜಲಪಾದಿಂದ ಹಾರಿದ್ದಾಳೆ. ನೀರಿನ ರಭಸಕ್ಕೆ ಆಕೆ ಕೊಚ್ಚಿಕೊಂಡು ಹೋಗಿದ್ದಾಳೆ. ಕೆಲವೊಂದು ಮೂಲಗಳ ಪ್ರಕಾರ ಬಾಲಕಿ ಪದೇ ಪದೇ ಮನೆಯಲ್ಲಿ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದಳಂತೆ. ಇದರಿಂದ ಬಾಲಕಿ ಪೋಷಕರು ಆಕೆಗೆ ಬೈದು ಬುದ್ದಿವಾದ ಹೇಳಿದ್ದಾರೆ. ಜೊತೆಗೆ ಮೊಬೈಲ್ ಸಹ ಕಿತ್ತುಕೊಂಡಿದ್ದರಂತೆ. ಈ ಕಾರಣದಿಂದ ಆಕೆಯ ಮನೆ ಸಮೀಪವೇ ಇರುವ ಈ ಜಲಪಾತದಿಂದ ಧುಮಿಕಿದ್ದಾರೆ. ಇನ್ನೂ ವಿಡಿಯೋ  ವೈರಲ್ ಆಗುತ್ತಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.