Film News

ಶಾರುಕ್ ಖಾನ್ ರನ್ನೇ ಕಂಟ್ರೋಲ್ ನಲ್ಲಿಟ್ಟ ಅವರ ಪತ್ನಿ ಗೌರಿ ಖಾನ್, ಯಾವ ವಿಚಾರದಲ್ಲಿ ಗೊತ್ತಾ?

ಬಾಲಿವುಡ್ ಸಿನಿರಂಗದ ಮೋಸ್ಟ್ ಬ್ಯೂಟಿಪುಲ್ ಜೋಡಿಗಳಲ್ಲಿ ಶಾರುಖ್ ಹಾಗೂ ಗೌರಿ ಖಾನ್ ಒಂದಾಗಿದೆ. ಸುಮಾರು 33 ವರ್ಷಗಳಿಂದ ಈ ಜೋಡಿ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸಿನೆಮಾಗಳು, ವ್ಯಾಪಾರಗಳ ಜೊತೆಗೆ ಕುಟುಂಬ ಎಲ್ಲವನ್ನೂ ಸಮರೋಪಾದಿಯಲ್ಲಿ ಸಾಗಿಸುತ್ತಾ ಅನೇಕರಿಗೆ ಮಾದರಿಯಾಗಿದ್ದಾರೆ ಎನ್ನಬಹುದಾಗಿದೆ. ಇದೀಗ ಈ ಗೌರಿ ತನ್ನ ಪತಿ ಶಾರುಖ್ ರವರಿಗೆ ಮನೆಯಲ್ಲಿ ತುಂಬಾ ಕಠಿಣ ರೂಲ್ಸ್ ಇಟ್ಟಿದ್ದಾರಂತೆ. ಆಕೆ ಶಾರುಖ್ ಗೆ ಹಾಕಿದ ರೂಲ್ಸ್ ಯಾವುದು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಗೌರಿ ಖಾನ್ ಮಾತನಾಡುತ್ತಾ, ಶಾರುಖ್ ಖಾನ್ ರವರ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್ ಹೊರಗೆ ಏನೇ ತಿನ್ನಬೇಕಾದರೂ ಅಥವಾ ಯಾವುದಾದರೂ ರೆಸ್ಟೋರೆಂಟ್ ಗೆ ಹೋಗಬೇಕಾದರೂ ಅದನ್ನು ನಾನು ಡಿಸೈನ್ ಮಾಡಿದಂತಹ ರೆಸ್ಟೊರೆಂಟ್ ಗೆ ಮಾತ್ರ ಹೋಗಬೇಕು ಎಂಬ ಕಂಡಿಷನ್ ಇಟ್ಟಿದ್ದಾರಂತೆ. ಆಕೆ ಪ್ರೋಫೆಷನಲ್ ಇಂಟಿರಿಯಲ್ ಡಿಸೈನರ್‍ ಆಗಿದ್ದು, ಮುಂಬೈನಲ್ಲಿ ಅನೇಕ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದಾರೆ. ನೂರಾರು ರೆಸ್ಟೊಂರೆಂಟ್ ಗಳಿಗೆ ಇಂಟಿರಿಯರ್‍ ಡಿಜೈನ್ ಮಾಡಿದ್ದಾರೆ. ಇತ್ತಿಚಿಗಷ್ಟೆ ಆಕೆ ಮುಂಬೈನ ಬಾಂದ್ರಾದಲ್ಲಿ ಮೆಕ್ಸಿಕನ್ ರೆಸ್ಟೋರೆಂಟ್ ಗೆ ಇಂಟಿರಿಯರ್‍ ಡಿಸೈನ್ ಮಾಡಿದ್ದರು. ಈ ರೆಸ್ಟೋರೆಂಟ್ ಆರಂಭೋತ್ಸವಕ್ಕೂ ಸಹ ಈ ಜೋಡಿ ಹೋಗಿದ್ದರು ಎನ್ನಲಾಗಿದೆ.

ಶಾರುಕ್ ಪತ್ನಿ ಗೌರಿ ಖಾನ್ ಅನೇಕ ಬಾಲಿವುಡ್ ಸೆಲೆಬ್ರೆಟಿಗಳ ಮನೆಗಳಲ್ಲೂ ಸಹ ಇಂಟಿರಿಯರ್‍ ಡಿಸೈನ್ ಮಾಡಿದ್ದಾರೆ. ರಣಬೀರ್‍ ಕಪೂರ್‍, ಅನನ್ಯಾ ಪಾಂಡೆ, ಷೇನ್, ಫಲ್ಗುಣಿ ಪಿಕಾಕ್, ಆಲಿಯಾ ಭಟ್ ರವರೂ ಸೇರಿದಂತೆ ಅನೇಕರ ಮನೆಗಳಿಗೆ ಇಂಟಿರಿಯರ್‍ ಡಿಸೈನ್ ಮಾಡಿದ್ದಾರೆ. ಅದರ ಜೊತೆಗೆ ದೊಡ್ಡ ದೊಡ್ಡ ಮನೆಗಳು, ಬ್ಯುಸಿನೆಸ್ ಕಟ್ಟಡಗಳಿಗೂ ಸಹ ಅತ್ಯಂತ ಅದ್ಬುತವಾಗಿ ಇಂಟಿರಿಯರ್‍ ಡಿಸೈನ್ ಮಾಡಿದ್ದಾರೆ. ಇನ್ನೂ ಶಾರುಖ್ ಖಾನ್ ಪಠಾನ್ ಸಿನೆಮಾದ ಮೂಲಕ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಾಣುತ್ತಿದ್ದ ಬಾಲಿವುಡ್ ಹೊಸ ಹರುಪು ತಂದುಕೊಟ್ಟರು. ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ಸಿನೆಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಕೊನೆಯದಾಗಿ ಶಾರುಖ್ ಜವಾನ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾ ಸಹ ಭಾರಿ ಸಕ್ಸಸ್ ಕಂಡಿದೆ. ಶೀಘ್ರದಲ್ಲೇ ಅವರು ಡುಂಕಿ ಸಿನೆಮಾದ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿನೆಮಾ ಡಿಸೆಂಬರ್‍ 21 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.

Most Popular

To Top