Film News

ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿದ್ದಾಳೆ ವರ್ಮಾ ಹಿರೋಯಿನ್, ಸೀರೆಯಲ್ಲಿ ಕಂಡ ಹುಡುಗಿಯ ಈ ಅವತಾರಕ್ಕೆ ಸುಸ್ತಾದ ಫ್ಯಾನ್ಸ್…..!

ಕೆಲವು ದಿನಗಳ ಹಿಂದೆಯಷ್ಟೆ ಸೋಷಿಯಲ್ ಮಿಡಿಯಾದಲ್ಲಿ ಕೇರಳ ಮೂಲದ ಯುವತಿಯೊಬ್ಬರು ರೀಲ್ಸ್ ಮಾಡಿ ತುಂಬಾನೆ ಫೇಮಸ್ ಆಗಿದ್ದರು. ಆಕೆಯ ರೀಲ್ಸ್ ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಹ ಫಿದಾ ಆಗಿ ಆಕೆಯೊಂದಿಗೆ ಸಿನೆಮಾ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಇದೀಗ ಆಕೆಯೊಂದಿಗೆ ಸಿನೆಮಾ ಮಾಡುತ್ತಿದ್ದು, ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ರಿಲೀಸ್ ಮಾಡಲಾಗಿತ್ತು. ಇದೀಗ ವರ್ಮಾ  ಆಕೆಯ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಈ ಬೋಲ್ಡ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ ಎನ್ನಲಾಗುತ್ತಿದೆ.

ಯುವತಿಯೊಬ್ಬಳರೀಲ್ಸ್ ಕಂಡ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇಂಪ್ರೆಸ್ ಆಗಿದ್ದರು. ಈ ಸಂಬಂಧ ಆ ಯುವತಿಯ ರೀಲ್ಸ್ ಬಗ್ಗೆ ಮಾತನಾಡಿ ಆರ್‍.ಜಿ.ವಿ ಸೀರೆ ಎಷ್ಟು ಸುಂದರವಾಗಿರುತ್ತದೆ ಎಂದು ಆಕೆಯನ್ನು ನೋಡಿದ ಮೇಲೆ ತಿಳಿಯಿತು. ಎಲ್ಲರೂ ಸೀರೆ ಸುಂದರವಾಗಿರುತ್ತದೆ ಎಂದು ಹೇಳುತ್ತಿದ್ದರು. ಆದರೆ ನಾನು ಅದನ್ನು ನಂಬಿರಲಿಲ್ಲ. ಆದರೆ ಈ ವಿಡಿಯೋ ನೋಡಿದ ಬಳಿಕ ನನ್ನ ನಿರ್ಧಾರ ಬದಲಾಗಿದೆ. ಯಾರಾದರೂ ಆಕೆಯನ್ನು ಹುಡುಕಿಕೊಡಿ. ಆಕೆಯೊಂದಿಗೆ ಸೀರೆ ಎಂಬ ಸಿನೆಮಾ ಮಾಡಲು ನಿರ್ಧರಿಸಿದ್ದೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಕೇರಳ ಮೂಲದ ಶ್ರೀಲಕ್ಷ್ಮೀ ಸತೀಶ್ ಎಂಬ ಯುವತಿಯ ರೀಲ್ಸ್ ಗೆ ಆರ್‍.ಜಿ.ವಿ ಫಿದಾ ಆಗಿ ನಿಮಗೆ ಇಷ್ಟ ಇದ್ದರೇ ನನ್ನ ಸಿನೆಮಾದಲ್ಲಿ ನಟಿಸಿ, ಹಿರೋಯಿನ್ ಮಾಡುತ್ತೀನಿ ಎಂದು ಹೇಳಿದ್ದರು. ಇದೀಗ ಆಕೆಯನ್ನು ನಾಯಕಿಯನ್ನಾಗಿ ಮಾಡಿ ಸೀರೆ ಎಂಬ ಸಿನೆಮಾ ತೆರೆಗೆ ತರಲಿದ್ದಾರೆ ವರ್ಮಾ.

ವರ್ಮಾ ಎಂದರೇ ವಿಭಿನ್ನತೆಗೆ ಹೆಸರು ವಾಸಿ. ಅವರು ಏನೇ ಮಾಡಿದರೂ ವಿಭಿನ್ನವಾಗಿಯೇ ಮಾಡುತ್ತಾರೆ. ಅವರ ಸಿನೆಮಾದಲ್ಲಿ ನಟಿಸಿದಂತಹ ಅನೇಕ ನಟಿಯರನ್ನು ಫೇಮಸ್ ಮಾಡಿದ್ದಾರೆ. ಇದೀಗ ಶ್ರೀಲಕ್ಷ್ಮೀ ಸತೀಶ್ ಪೊಟೋಗಳೂ ಸಹ ಇಂಟರ್‍ ನೆಟ್ ನಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ. ಇಷ್ಟು ದಿನ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರೀಲಕ್ಷ್ಮೀ ಸತೀಸ್ ಇದೀಗ ಹಾಲಿವುಡ್ ನಟಿಯರಂತೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ವಿವಿಧ ಮಾದರಿಯ ಪೊಟೋಗಳಲ್ಲಿ ಆಕೆಯನ್ನು ಪ್ರೆಸೆಂಟ್ ಮಾಡಿದ್ದಾರೆ. ಸೀರೆಯಲ್ಲಿ ಕಾಣಿಸುತ್ತಿದ್ದ ಆಕೆಯನ್ನು ಕಂಡ ನೆಟ್ಟಿಗರು ಹೊಸ ಅವತಾರ ಕಂಡು ಶಾಕ್ ಆಗಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳನ್ನು ವರ್ಮಾ ಗೂಗಲ್ ಡ್ರೈವ್ ಮೂಲಕ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

Most Popular

To Top