Film News

ಇಲಿಯಾನಾ ಮೇಲೆ ನಿಷೇಧದ ಕಾರಣದಿಂದಲೇ ಸೌತ್ ಸಿನಿಮಾಗಳಿಂದ ದೂರವುಳಿದರೇ? ಷಾಕಿಂಗ್ ನ್ಯೂಸ್ ವೈರಲ್….!

ಒಂದು ಕಾಲದಲ್ಲಿ ಸೌತ್ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಇಲಿಯಾನ ಒಬ್ಬರಾಗಿದ್ದಾರೆ. ಅನೇಕ ಹಿಟ್ ಸಿನೆಮಾಗಳಲ್ಲಿ ಸ್ಟಾರ್‍ ನಟರ ಜೊತೆ ತೆರೆ ಹಂಚಿಕೊಂಡು ಮೋಸ್ಟ್ ವಾಟೆಂಡ್ ನಟಿಯಾಗಿದ್ದರು. ಇನ್ನೂ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಆಕೆ ಕೆಲವು ತಿಂಗಳು ಡಿಪ್ರೆಷನ್ ಗೆ ಸಹ ಗುರಿಯಾಗಿದ್ದರು. ಜೊತೆಗೆ ಸಿನೆಮಾಗಳಿಂದಲೂ ದೂರವಾಗಿದ್ದರು. ಇದೀಗ ಆಕೆ ಸಿನೆಮಾಗಳಿಂದ ದೂರವುಳಿಯಲು ಆಕೆಯ ಮೇಲೆ ಬ್ಯಾನ್ ಹೇರಲಾಗಿದೆ ಎಂಬ ಸುದ್ದಿಯೊಂದು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಇಲಿಯಾನಾ ಕಡಿಮೆ ಸಮಯದಲ್ಲೇ ಸೆನ್ಷೇಷನ್ ಕ್ರಿಯೇಟ್ ಮಾಡಿದ ನಟಿಯಾಗಿದ್ದಾರೆ. ದೇವದಾಸ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ತುಂಬಾ ಕ್ರೇಜ್ ಪಡೆದುಕೊಂಡರು. ಬಳಿಕ ಮಹೇಶ್ ಬಾಬು ಜೊತೆಗೆ ಪೋಕಿರಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಹಿನ್ನೆಲೆಯಲ್ಲಿ ಆಕೆ ಓವರ್‍ ನೈಟ್ ಸ್ಟಾರ್‍ ಆಗಿಬಿಟ್ಟರು. ಅಂದಿನಿಂದ ಅನೇಕ ವರ್ಷಗಳ ಕಾಲ ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡಿದರು. ಸ್ಟಾರ್‍ ನಟರ ಜೊತೆಗೆ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗುವ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಜೊತೆಗೆ ಅನೇಕ ಯುವಕರ ಕ್ರಷ್ ಆದರು. ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಸಹ ಗಿಟ್ಟಿಸಿಕೊಂಡರು.

ಇನ್ನೂ ಇಲಿಯಾನಾ ಕಳೆದ 2018ರಲ್ಲಿ ತೆರೆಕಂಡ ಅಮರ್‍ ಅಕ್ಬರ್‍ ಆಂಟೋನಿ ಎಂಬ ಸಿನೆಮಾದಲ್ಲಿ ರವಿತೇಜ ಜೊತೆಗೆ ಕಾಣಿಸಿಕೊಂಡರು. ಈ ಸಿನೆಮಾದ ಬಳಿಕ ಸೌತ್ ನ ಯಾವುದೇ ಸಿನೆಮಾದಲ್ಲಿ ಆಕೆ ಕಾಣಿಸಿಕೊಂಡಿರಲಿಲ್ಲ. ಆ ಸಿನೆಮಾಗೂ ಮುಂಚೆ ಸುಮಾರು ಆರು ವರ್ಷಗಳ ಕಾಲ ಸೌತ್ ಸಿನೆಮಾಗಳಿಂದ ದೂರವೇ ಇದ್ದರು. ಆಕೆ ವೈಯುಕ್ತಿಕ ಕಾರಣಗಳಿಂದ ಡಿಪ್ರೆಷನ್ ಗೆ ಹೋಗಿದ್ದರು. ಆ ಕಾರಣದಿಂದಲೇ ಸಿನೆಮಾಗಳಿಂದ ದೂರವುಳಿದರು ಎಂದು ಹೇಳಲಾಗುತ್ತಿತ್ತು. ಇದೀಗ ಆಕೆ ಸೌತ್ ಸಿನೆಮಾಗಳಿಂದ ದೂರವುಳಿಯಲು ಅದೇ ಕಾರಣ ಎಂದು ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ. 2012ರವರೆಗೂ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಸದ್ದು ಮಾಡಿದ ಇಲಿಯಾನಾ ಸೌತ್ ಸಿನೆಮಾಗಳಿಂದ ದೂರ ಉಳಿದ್ದಿದ್ದರು.

ಇನ್ನೂ ರವಿತೇಜ ಅಭಿನಯದ ದೇವುಡು ಚೇಸಿನ ಮನುಷುಲು ಸಿನೆಮಾದ ಬಳಿಕ ತಮಿಳಿನಲ್ಲಿ ವಿಕ್ರಮ್ ಜೊತೆಗೆ ನಂದಂ ಎಂಬ ಸಿನೆಮಾದಲ್ಲಿ ಇಲಿಯಾನಾ ನಟಿಸಬೇಕಿತ್ತು. ಈ ಸಿನೆಮಾವನ್ನು ಕಾಲಿವುಡ್ ನಿರ್ಮಾಪಕ ಮೋಹನ್ ನಟರಾಜ್ ನಿರ್ಮಾಣ ಮಾಡಬೇಕಿತ್ತು. ಇನ್ನೂ ಈ ಸಿನೆಮಾಗೆ ಇಲಿಯಾ ಸೈನ್ ಮಾಡಿ ನಲವತ್ತು ಲಕ್ಷ ಸಹ ಅಡ್ವಾನ್ಸ್ ತೆಗೆದುಕೊಂಡಿದ್ದರಂತೆ. ಆದರೆ ಈ ಸಿನೆಮಾ ಕೆಲವೊಂದು ಕಾರಣಗಳಿಂದ ನಿಂತುಹೋಯಿತು. ಬಳಿಕ ನಿರ್ಮಾಪಕ ಇಲಿಯಾನಾ ಗೆ ನೀಡಿದ ಅಡ್ವಾನ್ಸ್ ವಾಪಸ್ಸು ಕೊಡುವಂತೆ ಕೇಳಿದ್ದರಂತೆ. ಇದಕ್ಕೆ ಇಲಿಯಾನಾ ನಿರಾಕರಿಸಿದ್ದರಂತೆ. ಆ ನಿರ್ಮಾಪಕ ಸೌತ್ ಇಂಡಿಯನ್ ಫಿಲಂ ಚೇಂಬರ್‍ ನ್ನು ಸಂಪರ್ಕ ಮಾಡಿದ್ದು, ಅವರೂ ಸಹ ಅಡ್ವಾನ್ಸ್ ವಾಪಸ್ಸು ನೀಡಲು ಸೂಚಿಸಿದ್ದರಂತೆ. ಆದರೆ ಇಲಿಯಾನಾ ರಿಯಾಕ್ಟ್ ಆಗದೇ ಇರುವ ಕಾರಣ ಸಮಸ್ಯೆ ಪರಿಷ್ಕಾರ ಆಗುವವರೆಗೂ ಸೌತ್ ಸಿನೆಮಾಗಳಿಂದ ಆಕೆಯನ್ನು ಬ್ಯಾನ್ ಮಾಡಿದ್ದಾಗಿ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳೋ ಸುದ್ದಿ ಮಾತ್ರ ವೈರಲ್ ಆಗುತ್ತಿದೆ. ಇನ್ನೂ ಎಲ್ಲವೂ ಸರಿಹೋಗಿದ್ದು ಶೀಘ್ರದಲ್ಲೇ ಇಲಿಯಾನ ಸೌತ್ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದೂ ಸಹ ಸುದ್ದಿ ಕೇಳಿಬರುತ್ತಿದೆ.

Most Popular

To Top