News

ಆರ್ಥಿಕ ಸಂಕಷ್ಟದಲ್ಲಿ ಪಾಕಿಸ್ತಾನ, ಒಂದು ಡಜನ್ ಮೊಟ್ಟೆಗೆ 400 ರೂಪಾಯಿ, ಈರುಳ್ಳಿ 250 ರೂಪಾಯಿಯಂತೆ….!

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಬಹುದಾಗಿದೆ. ದಿನನಿತ್ಯದ ಬದುಕು ತುಂಬಾನೆ ಕಷ್ಟಕರವಾಗಿದೆಯಂತೆ. ಸದ್ಯ ಪಾಕಿಸ್ತಾನದಲ್ಲಿ ಒಂದು ಡಜನ್ ಮೊಟ್ಟೆ ಬರೊಬ್ಬರಿ 400 ರೂಪಾಯಿಯಾಗಿದೆ ಎಂದು ಕೆಲವೊಂದು ಮೂಲಗಳಿಂದ ತಿಳಿದುಬಂದಿದೆ. ಅಂದರೇ ಭಾರತದ ಕರೆನ್ಸಿಯ ಪ್ರಕಾರ 120 ರೂಪಾಯಿ ಆಗಿದೆ. ಆದರೆ ದಿನಬಳಕೆಯ ವಸ್ತುಗಳ ಬೆಲೆ ಏರುತ್ತಿದ್ದರೂ ಸ್ಥಳೀಯ ಸರ್ಕಾರ ದರಪಟ್ಟಿಯನ್ನು ಜಾರಿಗೊಳಿಸಲು ವಿಫಲವಾಗಿದೆಯಂತೆ.

ಪಾಕಿಸ್ತಾನದಲ್ಲಿ ದಿನೇ ದಿನೇ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆಯಂತೆ. ಅಲ್ಲಿನ ಸ್ಥಳೀಯರ ನಿತ್ಯ ಬಳಕೆಯ ಪ್ರಮುಖ ವಸ್ತುವಾದ ಈರುಳ್ಳಿ ಬೆಲೆ ಸಹ ಏರಿಕೆಯಾಗಿದೆಯಂತೆ ಪ್ರತೀ ಕೆಜಿಗೆ 230-250 ರೂಪಾಯಿಯಾಗಿದೆ ಅಂದರೇ ಭಾರತದ ಕರೆನ್ಸಿಯಂತೆ 75 ರೂಪಾಯಿ) ಪಾಕಿಸ್ತಾನದ ಸರ್ಕಾರ ಕೆಜಿ ಈರುಳ್ಳಿಯನ್ನು 175 ರೂಪಾಯಿಯಂತೆ ಮಾರಾಟ ಮಾಡಬೇಕು ಎಂದು ನಿಗಧಿ ಮಾಡಿತ್ತಂತೆ. ಲಾಹೋರ್‍ ನಲ್ಲಿ ಒಂದು ಡಜನ್ ಮೊಟ್ಟೆ ನಾಲ್ಕು ನೂರು ರೂಪಾಯಿಗೆ ಮಾರಾಟ ಆಗುತ್ತಿದೆ. ಜೊತೆಗೆ ಒಂದು ಕೆಜಿ ಚಿಕನ್ 615 ರೂಪಾಯಿಯಾಗಿದೆ ಎಂದು ಅಲ್ಲಿನ ಕೆಲವು ಮಾದ್ಯಮಗಳು ವರದಿ ಮಾಡಿದೆ ಎಂದು ಹೇಳಲಾಗಿದೆ.

ಇನ್ನೂ ಪಾಕಿಸ್ತಾನದ 2023-2024 ಆರ್ಥಿಕ ವರ್ಷದಲ್ಲಿ ಕಳೆದ ವರ್ಷದ ನವೆಂಬರ್‍ ಮಾಹೆಯ ಅಂತ್ಯದ ವೇಳೆಗೆ ಪಾಕಿಸ್ತಾನದ ಸಾಲದ ಹೊರೆ 63 ಸಾವಿರಕ್ಕೂ ಹೆಚ್ಚು ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಏರಿದೆ ಎಂದು ಮಾದ್ಯಮಗಳು ವರದಿ ಮಾಡಿದೆ. ಜೊತೆಗೆ ಪಾಕಿಸ್ತಾನದ ಆರ್ಥಿಕ ಅಭಿವೃದ್ದಿ ಕೇವಲ ಗಣ್ಯರಿಗೆ ಮಾತ್ರ ಸೀಮಿತವಾಗಿದೆ ಎಂದು ವಿಶ್ವಬ್ಯಾಂಕ್ ಸಹ ಹೇಳಿತ್ತು. ದೇಶ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಇದೇ ಮಾದರಿಯಲ್ಲಿರುವ ಬೇರೆ ದೇಶಗಳಿಗಿಂತಲೂ ಪಾಕಿಸ್ತಾನ್ ತುಂಬಾನೆ ಹಿಂದುಳಿದಿದೆ ಎಂದೂ ಸಹ ಕೆಲವೊಂದು ಮಾದ್ಯಮಗಳು ವರದಿ ಮಾಡಿದೆ.

Most Popular

To Top