News

ಆತನ ಕೈ ನನ್ನ ತೊಡೆಯ ಮೇಲಿತ್ತು, ಬೆಂಗಳೂರಿನ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳದ ದೂರು.…..!

ಅನೇಕ ಸಾರ್ವಜನಿಕ ಪ್ರದೇಶಗಳಲ್ಲೂ ಸಹ ಇತ್ತೀಚಿಗೆ ಮಹಿಳೆಯರಿಗೆ ಲೈಂಗಿಕ ಕಿರುಕುಳದಂತಹ ಆರೋಪಗಳು ಕೇಳಿಬರುತ್ತಲೇ ಇದೆ. ಲೈಂಗಿಕ ಕಿರುಕುಳದ ಕಾರಣದಿಂದ ಅನೇಕ ಹೊಡೆದಾಟ, ಬಡಿದಾಟಗಳೂ ಸಹ ನಡೆದಿದೆ. ಇದೀಗ ಬೆಂಗಳೂರು ವಿಮಾನದಲ್ಲಿ ಮಹಿಳಾ ಟೆಕ್ಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರೊಂದು ದಾಖಲಾಗಿದೆ. ಫ್ರಾಂಕ್ ಫರ್ಟ್ ಬೆಂಗಳೂರು ವಿಮಾನದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿಯನ್ನು ಬಂಧನ ಆಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದಾರೆ ಎಂದು ಹೇಳಲಾಗಿದೆ.

ಅಮೇರಿಕಾದ ಫ್ರಾಂಕ್ ಫರ್ಟ್ ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಂಧ್ರಪ್ರದೇಶದ ತಿರುಪತಿ ಮೂಲದ 32 ವರ್ಷದ ಮಹಿಳಾ ಟೆಕ್ಕಿ ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ರಜೆಯಿರುವ ಕಾರಣ ಆಕೆ ಭಾರತಕ್ಕೆ ಆಗಮಿಸಿದ್ದಾರೆ. LH0754 ಬೆಂಗಳೂರು ವಿಮಾನದಲ್ಲಿ ಮಹಿಳಾ ಟೆಕ್ಕಿ ಪ್ರಯಾಣ ಮಾಡುತ್ತಿದ್ದಾರೆ. ಆಕೆ 38K ಸೀಟಿನಲ್ಲಿ ಕುಳಿತಿದ್ದಾರೆ. ವಿಮಾನದಲ್ಲಿ ಮಹಿಳಾ ಟೆಕ್ಕಿ ನಿದ್ದೆಗೆ ಜಾರಿದ್ದಾರೆ. ಮಹಿಳಾ ಟೆಕ್ಕಿಯ ಪಕ್ಕದಲ್ಲಿ ಕುಳಿತಿದ್ದ ಮತ್ತೋರ್ವ ಪ್ರಯಾಣಿಕ ಸಾಫ್ಟ್ ವೇರ್‍ ಎಂಜಿನಿಯರ್‍ ಶಂಕರ್‍ ನಾರಾಯಣ್ ರಂಗನಾಥ್ ಎಂಬಾತ 38J ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದಾರೆ.

ವಿಮಾನ ಟೇಕ್ ಆಫ್ ಆದ ಬಳಿಕ ಮಹಿಳೆ ನಿದ್ದೆಗೆ ಜಾರಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಮಹಿಳಾ ಟೆಕ್ಕಿಗೆ ಯಾರೋ ತಮ್ಮ ಮೈಯನ್ನು ಮುಟ್ಟಿದ ಅನುಭವವಾಗಿದೆ. ಬಳಿಕ ಎಚ್ಚರಗೊಂಡು ನೋಡಿದ ಆಕೆಗೆ ಶಾಕ್ ಆಗಿದೆ. ಪಕ್ಕದ ಸೀಟಿನಲ್ಲಿ ಕುಳಿತಿದ್ದ ಶಂಕರ್‍ ನಾರಾಯಣ್ ಕೈಗಳು ಆಕೆಯ ತೊಡೆಯ ಮೇಲಿತ್ತಂತೆ. ಬಳಿಕ ಆಕೆ ಆತನಿಗೆ ವಾರ್ನಿಂಗ್ ಸಹ ನೀಡಿದ್ದಾರೆ. ಬಳಿಕ ಅದೇ ರೀತಿಯ ಅನುಭವವಾಗಿದೆ. ಮತ್ತೆ ಶಂಕರ್‍ ನಾರಾಯಣನ್ ಆತನ ಕೈಗಳನ್ನು ಮಹಿಳಾ ಟೆಕ್ಕಿಯ ತೊಡೆಯ ಮೇಲಿದೆ. ಬಳಿಕ ಮಹಿಳಾ ಟೆಕ್ಕಿ ಕೈಗಳನ್ನು ತಳ್ಳಿ ಹಾಕಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ದೂರಿದ್ದಾರೆ. ಸಿಬ್ಬಂದಿ ಮಹಿಳೆಗೆ ಬೇರೆ ಸೀಟಿನ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮಹಿಳಾ ಟೆಕ್ಕಿ ಲಿಖಿತ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಾಥಮಿಕ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶಂಕರ್‍ ನಾರಾಯಣನ್ ರನ್ನು ಬಂಧಿಸಿದ್ದು, ಬಳಿಕ ಜಾಮೀನು ಪಡೆದುಕೊಂಡು ಆತ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ.

Most Popular

To Top