ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್, ಚಿತ್ರದುರ್ಗ ಡಿಸಿಸಿ ಬ್ಯಾಂಕ್ ನಲ್ಲಿ 68 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ…..!

ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್. ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಕ್ ನಿಯಮಿತ (ಡಿಸಿಸಿ) ನಲ್ಲಿ ಖಾಲಿಯಿರುವ ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವ್ಯವಸ್ಥಾಪಕರು, ಗುಮಾಸ್ತ, ವಾಹನ ಚಾಲಕ ಸೇರಿದಂತೆ ವಿವಿಧ ಹುದ್ದೆಗಳಿಗೆ…

ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್. ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಕ್ ನಿಯಮಿತ (ಡಿಸಿಸಿ) ನಲ್ಲಿ ಖಾಲಿಯಿರುವ ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವ್ಯವಸ್ಥಾಪಕರು, ಗುಮಾಸ್ತ, ವಾಹನ ಚಾಲಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅಕ್ಟೋಬರ್‍ 16 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಅಧಿಕೃತ ಅಧಿಸೂಚನೆ ಸಹ ಹೊರಡಿಸಲಾಗಿದೆ.

ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ

ಸಹಾಯಕ ಪ್ರಧಾನ ವ್ಯವಸ್ಥಾಪಕರು – 6 ಹುದ್ದೆ, ವಿದ್ಯಾರ್ಹತೆ- ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು

ಪ್ರಥಮ ದರ್ಜೆ ಗುಮಾಸ್ತರು – 9 ಹುದ್ದೆ, ವಿದ್ಯಾರ್ಹತೆ- ಯಾವುದೇ ವಿಷಯದಲ್ಲಿ ಪದವಿ

ದ್ವಿತೀಯ ದರ್ಜೆ ಗುಮಾಸ್ತರು – 35 ಹುದ್ದೆ, ವಿದ್ಯಾರ್ಹತೆ- ಯಾವುದೇ ವಿಷಯದಲ್ಲಿ ಪದವಿ

ಕಂಪ್ಯೂಟರ್​ ಇಂಜಿನಿಯರ್​ – 2 ಹುದ್ದೆ, ವಿದ್ಯಾರ್ಹತೆ- ಬಿಎಸ್ ಸಿ, ಬಿಇ, ಬಿಟೆಕ್​ ಪದವಿ

ವಾಹನ ಚಾಲಕರು – 2 ಹುದ್ದೆ, ವಿದ್ಯಾರ್ಹತೆ- 10ನೇ ತರಗತಿ

ಸಹಾಯಕರು – 12 ಹುದ್ದೆ, ವಿದ್ಯಾರ್ಹತೆ- 10ನೇ ತರಗತಿ

ಇನ್ನೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಟ 18 ವರ್ಷ  ಕನಿಷ್ಟ ಹಾಗೂ ಗರಿಷ್ಟ ವಯೋಮಿತಿ 35 ವಯಸ್ಸಾಗಿರಬೇಕು. ಪ.ಜಾ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಟ 40 ವಯೋಮಿತಿ ಹಾಗೂ ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ನೀಡಲಾಗಿದೆ. ಇನ್ನೂ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಪ.ಜಾ ಹಾಗೂ ಪಂಗಡದ ಅಭ್ಯರ್ಥಿಗಳಿಗೆ 750 ರೂಪಾಯಿ, ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 1500 ರೂ. ಅರ್ಜಿ ಶುಲ್ಕ ನಿಗಧಿಪಡಿಸಲಾಗಿದೆ.  ಇನ್ನೂ ಸೆಪ್ಟೆಂಬರ್‍ 15 ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅಕ್ಟೋಬರ್‍ 16 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಿಸಿಸಿ ಬ್ಯಾಂಕ್ ವೆಬ್ ಸೈಟ್ www.chitradurgadccbank.com ಇಲ್ಲಿಗೆ ಭೇಟಿ ನೀಡಬಹುದಾಗಿದೆ.