News

ಚೈತ್ರಾ ಕುಂದಾಪುರ ಹೈಡ್ರಾಮ, ಸುಸ್ತಾದ ಸಿಸಿಬಿ ಪೊಲೀಸರು, ಕೂಗಾಟ, ಫಿಟ್ಸ್ ಬಂದಂತೆ ಆಕ್ಟಿಂಗ್…….!

ಉದ್ಯಮಿಗೆ ಗೋವಿಂದ ಪೂಜಾರಿ ಎಂಬಾತನಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಐದು ಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖಂಡೆ ಚೈತ್ರಾ ಕುಂದಾಪುರ ಹಾಗೂ ಕೆಲವರನ್ನು ಪೊಲೀಸರು ಬಂಧಿಸಿದ್ದು, ಆಕೆಯನ್ನು ಪೊಲೀಸರ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಆಕೆಯ ಹೈಡ್ರಾಮ ಕಂಡು ಸಿಸಿಬಿ ಪೊಲೀಸರು ಸುಸ್ತಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಕರ್ನಾಟಕದ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ ಬೈಂದೂರಿನ ಉದ್ಯಮಿ ಗೋವಿಂದ ಪೂಜಾರಿ ಎಂಬಾತನಿಗೆ ಚೈತ್ರಾ ಕುಂದಾಪುರ ಸೇರಿದಂತೆ ಹಲವರು ವಂಚನೆ ಮಾಡಿ ಐದು ಕೋಟಿ ಪಡೆದುಕೊಂಡಿದ್ದರು ಎಂಬ ಆರೋಪದಡಿ ಚೈತ್ರಾ ಕುಂದಾಪುರ ಹಾಗೂ ಕೆಲವರನ್ನು ಬಂಧಿಸಿದ್ದಾರೆ. ನ್ಯಾಯಾಂಗ ಸಹ ಆಕೆಯನ್ನು ಪೊಲೀಸರ ಕಸ್ಟಡಿಗೆ ಒಪ್ಪಿಸಿದ್ದರು. ಈ ವೇಳೆ ಆಕೆಯನ್ನು ವಿಚಾರಿಸಲು ಸಿಸಿಬಿ ಪೊಲೀಸರು ಹರಸಾಹಸ ಪಡುತ್ತಿದ್ದಾರಂತೆ. ಆಕೆ ಇಲ್ಲಿಯವರೆಗೂ ಕನಿಷ್ಟ ಒಂದು ಪುಟದಷ್ಟು ಹೇಳಿಕಯಾದರು ದಾಖಲು ಮಾಡಲು ಆಗಿಲ್ಲವಂತೆ. ಬರೀ ಹೈಡ್ರಾಮಾ ಮಾಡುತ್ತಾ, ಕೂಗಾಡುತ್ತಾ ಎಲ್ಲವೂ ಸ್ವಾಮೀಜಿಗೆ ಗೊತ್ತು. ಅಲ್ಲದೇ ಏನೇ ಕೇಳಿದರೂ ಕೂಗಾಡುತ್ತಾ, ಅಳುತ್ತಿದ್ದಾಳೆ ಎಂದು ಹೇಳಲಾಗಿದೆ.

ಇನ್ನೂ ಪೋಲಿಸರು ಇಂದು ಸಹ ವಿಚಾರಣೆ ಮಾಡುವ ಸಮಯದಲ್ಲಿ ಮೂರ್ಚೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಆಕೆಯ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಸಿ ಚಿಕಿತ್ಸೆ ಕೊಡಿಸಲಾಗಿದೆ. ಕುತ್ತಿಗೆಗೆ ವೇಲ್ ಸುತ್ತಿಕೊಂಡು ಆಕೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಕಾರಣದಿಂದ ಆಕೆ ಮೂರ್ಚೆ ಹೋಗಿದ್ದಾಳೆ. ಬಾಯಿಂದ ನೊರೆ ಸಹ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಚೈತ್ರಾ ಕುಟುಂಬಸ್ಥರಿಂದ ಸಹ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರಂತೆ. ಈ ಹಿಂದೆ ಸಹ ಚೈತ್ರಾಗೆ ಫಿಟ್ಸ್ ಬರುತ್ತಿತ್ತು. ಅದಕ್ಕೆ ಮಾತ್ರೆ ಸಹ ನೀಡಲಾಗಿತ್ತು. ಆದರೆ ಆಕೆ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. ಆದ್ದರಿಂದ ಮೂರ್ಚೆ ಹೋಗಿರಬಹುದು ಎಂದು ಚೈತ್ರಾ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಇನ್ನೂ ಐದು ಕೋಟಿ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಕಥೆ ಸಿನೆಮಾದಂತೆ ಕೇಳಿಬರುತ್ತಿದೆ. ಸದ್ಯ ಚೈತ್ರಾ ಕುಂದಾಪುರ ರವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಆಕೆ ಆರೋಗ್ಯ ನಾರ್ಮಲ್ ಆಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

Most Popular

To Top