News

ಕ್ಯಾಬ್ ಚಾಲಕನಿಂದ ಮಹಿಳೆಯ ಮೇಲೆ ಹಲ್ಲೆ ಆರೋಪ, ಪೊಲೀಸರ ವಶಕ್ಕೆ ಕ್ಯಾಬ್ ಚಾಲಕ…!

ಬೆಂಗಳೂರಿನಲ್ಲಿ ಕ್ಯಾಬ್ ಚಾಲನೋರ್ವ ಮಹಿಳೆಗೆ ನಿಂಧಿಸಿ ಆಕೆ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕ್ಯಾಬ್ ಚಾಲಕನನ್ನು ಬೆಳ್ಳಂದೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪತ್ನಿಯ ಮೇಲೆ ಹಲ್ಲೆ ಮಾಡಿದ ಬಗ್ಗೆ ಹಲ್ಲೆಗೊಳಗಾದ ಮಹಿಳೆ ಪತಿ ನೀಡಿದ ದೂರಿನ ಆಧಾರದ ಮೇಲೆ ಕ್ಯಾಬ್ ಚಾಲಕ ಬಸವರಾಜು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಬೆಳ್ಳಂದೂರಿನ ಬೋಗನಹಳ್ಳಿ ಬಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಮಹಿಳೆ ಕುಟುಂಬ ವಾಸವಿದೆ. ಮಗನಿಗೆ ಚಿಕಿತ್ಸೆ ಕೊಡಿಸಯವ ಸಲುವಾಗಿ ಬೋಗನಹಳ್ಳಿಯಿಂದ ಮಣಿಪಾಲ್ ಆಸ್ಪತ್ರೆಗೆ ಹೋಗಲು ಕಳೆದ ಬುಧವಾರ ಕ್ಯಾಬ್ ಬುಕ್ ಮಾಡಿದ್ದಾರೆ. ಇನ್ನೂ ಅಪಾರ್ಟ್‌ಮೆಂಟ್ ನಿಂದ ಹೊರಬರುತ್ತಿದ್ದಂತೆ ಕ್ಯಾಬ್ ಹತ್ತಿದ ತಾಯಿ ಮಗ ಸುಮಾರು ನೂರು ಮೀಟರ್‍ ವರೆಗೆ ಕ್ರಮಿಸಿದ್ದಾರೆ. ಬಳಿಕ ಮಹಿಳೆಗೆ ತಾನು ಬೇರೆ ಕ್ಯಾಬ್ ಹತ್ತಿರುವುದುಆಗಿ ಅರಿವಿಗೆ ಬಂದಿದೆ. ಕೂಡಲೇ ಕ್ಯಾಬ್ ನಿಲ್ಲಿಸುವಂತೆ ಚಾಲಕನಿಗೆ ಕೇಳಿಕೊಂಡಿದ್ದಾರೆ. ಆದರೆ ಕ್ಯಾಬ್ ಚಾಲಕ ಅಸಮಧಾನಗೊಂದು ಆಕೆಯೊಂದಿಗೆ ಮಾತಿನ ಚಕಮಕಿ ಸಹ ನಡೆಸಿದ್ದಾರೆ. ಬಳಿಕ ಕಾರಿನಿಂದ ಇಳಿಯುತ್ತಿದ್ದಂತೆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿದ್ದಾರೆ.

ಇನ್ನೂ ಬುಧವಾರ ಅದೇ ಅಪಾರ್ಟ್‌ಮೆಂಟ್ ನಿಂದ ಎರಡು ಕ್ಯಾಬ್ ಗಳು ಬುಕ್ ಆಗಿದೆ. ಹಲ್ಲೆಗೊಳಗಾದ ಮಹಿಳೆ ಬೇರೆ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಮಹಿಳೆ ಆತುರದಲ್ಲಿ ತಾನು ಬುಕ್ ಮಾಡಿದ ಕ್ಯಾಬ್ ಬಿಟ್ಟು ಬೇರೆ ಕ್ಯಾಬ್ ಹತ್ತಿದ್ದಾರೆ. ಕ್ಯಾಬ್ ಹೊರಟ ಬಳಿಕ ಆಕೆಗೆ ಅದರ ಅರಿವಾಗಿದೆ. ಕ್ಯಾಬ್ ಡ್ರೈವರ್‍ ಹಾಗೂ ಮಹಿಳೆಯ ನಡುವೆ ಮಾತಿನ ಚಕಮಕಿ ನಡೆದಿದೆ. ಮಹಿಳೆ ಕಾರು ಇಳಿಯುವಾಗ ಕ್ಯಾಬ್ ಬಾಗಿಲನ್ನು ಜೋರಾಗಿ ಹಾಕಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕ್ಯಾಬ್ ಚಾಲಕ ಮಹಿಳೆಯನ್ನು ನೂಕಿದ್ದಾನೆ ಎಂದು ಪೊಲೀಸರ ವಿಚಾರಣೆಯ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.

ಇನ್ನೂ ಚಾಲಕ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವಂತಹ ದೃಶ್ಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ಮಹಿಳೆ ಕಿರುಚಾಡಿದ್ದು, ಅಪಾರ್ಟ್ ಮೆಂಟ್ ನಿವಾಸಿಗಳು ಆಕೆಯ ನೆರವಿಗೆ ಧಾವಿಸಿದ್ದಾರೆ. ಜನ ಬರುವಷ್ಟರಲ್ಲಿ ಕ್ಯಾಬ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಮಹಿಳೆಯ ಪತಿ ನೀಡಿದ ದೂರಿನ್ವಯ ಕ್ಯಾಬ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top