ಸಂಚಲನಾತ್ಮಕ ಹೇಳಿಕೆ ಕೊಟ್ಟ ರವಿನಾ ಟಂಡನ್, ನಟನ ತುಟಿ ತಾಕಿದಾಗ ವಾಂತಿಯಾಯ್ತು ಎಂದ ನಟಿ ರವಿನಾ……!

Follow Us :

ಹಿಂದಿ ಸಿನಿರಂಗದ ಸ್ಟಾರ್‍ ನಟಿ ರವಿನಾ ಟಂಡನ್ ಅನೇಕ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಫೇಂ ಸಂಪಾದಿಸಿಕೊಂಡಿದ್ದರು. ಇದರ ಜೊತೆಗೆ ತೆಲುಗಿನಲ್ಲೂ ಸಹ ರವಿನಾ ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ತೆಲುಗಿನಲ್ಲಿ ಆಕಾಶ ವಿಧಿಲೋ, ಪಾಂಡವಲು ಪಾಂಡವಲು ತುಮ್ಮೆದ ಸಿನೆಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಅದರಲ್ಲೂ ಇಡೀ ದೇಶದ ಅನೇಕ ಸಿನಿಮಾಗಳ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದಂತಹ ಕೆಜಿಎಫ್ ಸಿನೆಮಾದಲ್ಲೂ ಸಹ ನಟಿಸಿ ದೇಶವ್ಯಾಪಿ ಖ್ಯಾತಿ ಪಡೆದುಕೊಂಡರು. ಇದೀಗ ಆಕೆ ಕಿಸ್ ಸೀನ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಸಾಮಾನ್ಯವಾಗಿ ಸಣ್ಣ ಸಿನೆಮಾಗಳಿಂದ ದೊಡ್ಡ ಸಿನೆಮಾಗಳವರೆಗೂ ಕಿಸ್ ಸೀನ್ ಗಳು ಸಾಮಾನ್ಯವಾಗಿರುತ್ತದೆ. ಕಥೆಗೆ ಅವಶ್ಯಕತೆಯಿಲ್ಲದೇ ಇದ್ದರೂ ಸಹ ನಿರ್ದೇಶಕರು ಕಿಸ್ ಸೀನ್ ಗಳನ್ನು ಇಡುತ್ತಾರೆ ಎಂದು ಹೇಳಲಾಗುತ್ತದೆ. ಇದೀಗ ಸೀನಿಯರ್‍ ನಟಿ ರವೀನಾ ಟಂಡನ್ ಕಿಸ್ಸಿಂಗ್ ದೃಶ್ಯಗಳ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಕಿಸ್ಸಿಂಗ್ ದೃಶ್ಯಗಳ ಹಿಂದಿನ ಕಷ್ಟಗಳನ್ನು ಆಕೆ ಹೇಳಿದ್ದಾರೆ. ಸಿನೆಮಾಗಳಲ್ಲಿ ಆಕೆ ನೋ ಕಿಸ್ಸಿಂಗ್ ಎಂಬ ರೂಲ್ ಸಹ ಫಾಲೋ ಆಗುತ್ತಿರುತ್ತಾರೆ. ಆದರೆ ಒಮ್ಮೆ ಆಕೆಯ ಕೆರಿಯರ್‍ ನಲ್ಲಿ ಊಹೆ ಮಾಡದ ರೀತಿಯಲ್ಲಿ ಸಹ ನಟನೊಬ್ಬ ರವಿನಾ ಟಂಡನ್ ತುಟಿಗಳನ್ನು ಟಚ್ ಮಾಡಿದ್ದರಂತೆ. ಕೂಡಲೇ ಆಕೆ ವಾಂತಿಯಾಯ್ತಂತೆ. ನಾನು ಎಂದೂ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಲಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಲು ನನಗೆ ಇಷ್ಟವಾಗಲ್ಲ. ಅದು ನನಗೆ ತುಂಬಾ ಅಸೌಕರ್ಯ ಅನ್ನಿಸುತ್ತದೆ. ಆ ಕಾರಣದಿಂದಲೇ ನಾನು ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವುದಿಲ್ಲ. ಒಂದು ದೃಶ್ಯದ ಶೂಟಿಂಹಗ್ ವೇಳೆ ಸಹ ನಟನೋರ್ವನ ತುಟಿ ಅಚಾನಕ್ ಆಗಿ ನನ್ನ ತುಟಿಗೆ ತಗಲಿತ್ತು. ಆ ನಟ ಬೇಕಂತಾ ಆ ರೀತಿ ಮಾಡಲಿಲ್ಲ. ಆದರೆ ನನಗೆ ಅದು ತುಂಬಾ ಕಿರಿಕಿರಿ ಅನ್ನಿಸಿತ್ತು. ಕೂಡಲೇ ರೂಂ ಗೆ ಹೋಗಿಬಿಟ್ಟೆ. ಅದು ತುಂಬಾ ಅಸಹ್ಯವಾಗಿ ವಾಂತಿ ಮಾಡಿಕೊಂಡೆ. ಜೊತೆಗೆ ನೂರು ಬಾರಿ ಬಾಯಿಯನ್ನು ತೊಳೆದುಕೊಂಡರೇ ಚೆನ್ನಾಗಿರುತ್ತಿತ್ತು ಅನ್ನಿಸಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಆದರೆ ಅದು ಯಾವ ಸಿನೆಮಾದ ಶೂಟಿಂಗ್ ಸಮಯದಲ್ಲಿ ಆದ ಘಟನೆ ಎಂಬುದನ್ನು ರವಿನಾ ರಿವೀಲ್ ಮಾಡಿಲ್ಲ. ಆದರೆ ಆಕೆಯ ಕಾಮೆಂಟ್ ಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಕೆಜಿಎಫ್ ಸಿನೆಮಾದ ಮೂಲಕ ರವಿನಾ ಭಾರಿ ಫೇಂ ಪಡೆದುಕೊಂಡರು. ವಯಸ್ಸಾದರೂ ಸಹ ಆಕೆ ಸಿನೆಮಾಗಳಲ್ಲಿ ನಟಿಸುತ್ತಾ ತಮ್ಮ ಅಭಿಮಾನಿಗಳನ್ನು ಹಾಗೂ ಸಿನೆಮಾ ರಸಿಕರನ್ನು ರಂಜಿಸುತ್ತಿರುತ್ತಾರೆ.