ಆ ಜೋಡಿ ನನ್ನನ್ನು ಟಾರ್ಗೆಟ್ ಮಾಡಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದ ಬಾಲಿವುಡ್ ನಟಿ ಕಂಗನಾ ರಾನೌತ್….!

Follow Us :

ಬಾಲಿವುಡ್ ನಲ್ಲಿ ಫೈರ್‍ ಬ್ರಾಂಡ್ ಎಂತಲೇ ಖ್ಯಾತಿ ಪಡೆದುಕೊಂಡ ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ರಾಜಕೀಯ ನಾಯಕರನ್ನೂ ಸಹ ಆಕೆ ವಿಮರ್ಶೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಕಾಂಟ್ರವರ್ಸಿ ಕ್ವೀನ್ ಎಂತಲೂ ಕರೆಯುತ್ತಾರೆ. ಇದೀಗ ಆಕೆ ಬಾಲಿವುಡ್ ನ ಸ್ಟಾರ್ ಜೋಡಿಯ ಮೇಲೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆ ಜೋಡಿ ಯಾವುದು ಎಂದು ಹೇಳದೇ ಪರೋಕ್ಷವಾಗಿ ಅವರ ಬಗ್ಗೆ ಕಂಗನಾ ಹೇಳಿದ್ದಾರೆ.

ವಿವಾದಗಳಿಗೆ ಕೇರ್‍ ಆಫ್ ಅಡ್ರೆಸ್ ಎಂದರೇ ಕಂಗನಾ ರಾನೌತ್ ಎಂದು ಹೇಳಬಹುದು. ದೊಡ್ಡ ಸ್ಟಾರ್‍ ಗಳಾಗಲಿ, ಅಥವಾ ದೊಡ್ಡ ರಾಜಕಾರಣಿಗಳಾಗಲಿ ನೇರವಾಗಿ ಅವರ ಮೇಲೆ ಆರೋಪಗಳನ್ನು ಮಾಡಿಬಿಡುತ್ತಾರೆ. ಅವರನ್ನು ಎದರುಸಿ ಸಹ ನಿಲ್ಲುತ್ತಾರೆ. ಇಂತಹ ಅನೇಕ ಕಾರಣಗಳಿಂದ ಆಕೆ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರು. ಈ ಹಾದಿಯಲ್ಲೇ ಬಾಲಿವುಡ್ ಯಂಗ್ ಜೋಡಿಯನ್ನು ಉದ್ದೇಶಿಸಿ ಸಂಚಲನಾತ್ಮಕ ಆರೋಪಗಳನ್ನು ಮಾಡಿದ್ದಾರೆ. ಬಾಲಿವುಡ್ ಇಂಡಸ್ಟ್ರಿಗೆ ಸೇರಿದ ಒಂದು ಜೋಡಿ ನನ್ನ ಮೇಲೆ ನಿಘಾ ಇಟ್ಟಿದೆ. ನನ್ನ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತಿದ್ದಾರೆ. ಜೊತೆಗೆ ನನ್ನ ವೈಯುಕ್ತಿಕ ವಿಚಾರಗಳನ್ನು ಸಹ ಕಲೆಕ್ಟ್ ಮಾಡುತ್ತಿದ್ದಾರೆ. ಲೀಕ್ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ನನಗೆ ಮಾನಸಿಕವಾದ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ದೊಡ್ಡ ನೋಟ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಷ್ಟೇಅಲ್ಲದೇ ನನ್ನ ಕಾರು ಪಾರ್ಕಿಂಗ್, ನಾನು ಮನೆಯಲ್ಲಿ ಏನು ಮಾಡುತ್ತಿದ್ದೇನೆ ಎಂಬ ವಿಷಯದ ಮೇಲೂ ಸಹ ನಿಘಾ ಇಟ್ಟಿದ್ದಾರೆ. ನಾನು ಬೆಳಿಗ್ಗೆ 6 ಗಂಟೆಗೆ ಹೊರಗೇ ಹೋದರೆ ನನ್ನನ್ನು ಫಾಲೋ ಮಾಡುತ್ತಿದ್ದಾರೆ. ಪೊಟೋಗಳನ್ನು ತೆಗೆಯುತ್ತಿದ್ದಾರೆ. ಇನ್ನೂ ವೈಯುಕ್ತಿಕ ವಿಚಾರಗಳ ಜೊತೆಗೆ ವೃತ್ತಿಪರವಾದ ವಿಚಾರಗಳಲ್ಲೂ ಸಹ ಕಿರಿಕಿರಿ ಮಾಡುತ್ತಿದ್ದಾರೆ. ನನ್ನನ್ನು ಸಮಸ್ಯೆಗಳಲ್ಲಿ ಸಿಲುಕಿಸಲು ನೋಡುತ್ತಿದ್ದಾರೆ. ಇದು ಸಾಲದು ಎಂಬಂತೆ ನನ್ನ ವಾಟ್ಸಾಪ್ ಡೇಟಾ ವನ್ನು ಸಹ ಕಲೆಕ್ಟ್ ಮಾಡಿ ಲೀಕ್ ಮಾಡುತ್ತಿದ್ದಾರೆ. ನನ್ನ ಕೆಲಸದವರನ್ನೂ ಸಹ ಅವರ ಕಡೆಗೆ ತಿರುಗಿಸಿಕೊಂಡು ವಿವಿಧ ರೀತಿಯಲ್ಲಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಇನ್ನೂ ಕಂಗನಾ ಆ ಜೋಡಿ ಯಾರು ಎಂಬುದನ್ನು ಮಾತ್ರ ಹೊರಹಾಕಿಲ್ಲ. ಇನ್ನೂ ಪೋಸ್ಟ್ ವೈರಲ್ ಆಗುತ್ತಿದ್ದು, ಆ ಜೋಡಿ ಯಾರು ಎಂಬುದರ ಬಗ್ಗೆ ವಿವಿಧ ರೀತಿಯ ಕಥನಗಳು ಕೇಳಿಬರುತ್ತಿವೆ. ಈ ಹಿಂದೆ ಬಾಲಿವುಡ್ ಯಂಗ್ ಜೋಡಿ ರಣಬೀರ್‍ ಹಾಗೂ ಆಲಿಯಾ ಭಟ್ ರವರನ್ನು ಟಾರ್ಗೆಟ್ ಮಾಡಿದ್ದರು ಕಂಗನಾ. ಈ ಕಾರಣದಿಂದ ರಣಬೀರ್‍-ಆಲಿಯಾ ರವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿವಾದ ಇನ್ನೂ ಎಲ್ಲಿಯವರೆಗೆ ಹೋಗಿ ಸೇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ನಟಿ ಕಂಗನಾ ಎಮರ್ಜೆನ್ಸಿ ಸಿನೆಮಾದಲ್ಲಿ ಇಂದಿರಾಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಚಂದ್ರಮುಖಿ-2 ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.