ಕಾಲ್ನಡಿಗೆಯ ಮೂಲಕ ತಿರುಮಲ ಬೆಟ್ಟ ಏರಿ, ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ನಟಿ ದೀಪಿಕಾ ..….!

ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಮದುವೆಯಾದರೂ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ದೀಪಿಕಾ ತಿರುಮಲದ ತಿಮ್ಮಪ್ಪನ ದರ್ಶನಕ್ಕಾಗಿ ತಿರುಪತಿಗೆ ಹೋಗಿದ್ದಾರೆ. ತಿಮ್ಮಪ್ಪನನ್ನು ದರ್ಶನ ಮಾಡಿಕೊಳ್ಳಲು ಆಕೆ ಅಲಿಪಿರಿ ಮಾರ್ಗದ ಮೂಲಕ ಮೆಟ್ಟಿಲುಗಳನ್ನು ಏರುತ್ತಾ ಗೋವಿಂದ ಗೋವಿಂದ ಎಂದು ನಾಮಸ್ಮರಣೆ ಮಾಡುತ್ತಾ ಭಕ್ತರೊಂದಿಗೆ ನಡೆದಿದ್ದಾರೆ.

ನಟಿ ದೀಪಿಕಾ ತಿರುಮಲದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಕಾಲ್ನಡಿಗೆಯ ಮೂಲಕ ತೆರಳಿದ್ದಾರೆ. ಗುರುವಾರ ರಾತ್ರಿ ಅಲಿಪಿರಿ ಮೂಲಕ ಮೆಟ್ಟಿಲುಗಳನ್ನು ಹತ್ತಿದ್ದಾರೆ. ಭಕ್ತರೊಂದಿಗೆ ಆಕೆ ಸಹ ಕಾಲ್ನಡಿಗೆ ಮೂಲಕ ಹತ್ತಿದ್ದಾರೆ. ಈ ವೇಳೆ ಆಕೆಯೊಂದಿಗೆ ಆಕೆಯ ಸಿಬ್ಬಂದಿ ಸಹ ಇದ್ದಾರೆ. ಭಕ್ತರು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದಿದ್ದರು. ಆದರೆ ಕೂಡಲೇ ಅಲ್ಲಿದ್ದ ಸಿಬ್ಬಂದಿ ದೀಪಿಕಾಗೆ ರಕ್ಷಣೆ ನೀಡಿದ್ದರು. ಕಾಲಿಗೆ ಚಪ್ಪಲಿಯಿಲ್ಲದೇ ದೀಪಿಕಾ ಬೆಟ್ಟ ಹತ್ತಿದ್ದಾರೆ. ಬಳಿಕ ಆಕೆ ತಿರುಮಲದಲ್ಲಿನ ರಾಧೆಯಂ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ರಾತ್ರಿ ಅಲ್ಲೇ ಇದ್ದು, ಇಂದು (ಶುಕ್ರವಾರ) ಬೆಳಿಗ್ಗೆ ವೆಂಕಟೇಶ್ವರನ ಸುಪ್ರಭಾತ ಸೇವೆಯಲ್ಲಿ ಭಾಗಿಯಾಗಿದ್ದಾರೆ. ವಿಐಪಿ ವಿರಾಮ ಸಮಯದಲ್ಲಿ ಆಕೆ ದರ್ಶನ ಪಡೆದಿದ್ದಾರೆ. ಇನ್ನೂ ದೀಪಿಕಾ ತಿರುಮಲದಲ್ಲಿನ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಸಿನೆಮಾಗಳ ಕಡೆ ಬಂದರೇ ನಟಿ ದೀಪಿಕಾ ಕೆರಿಯರ್‍ ಈಗ ಭರ್ಜರಿಯಾಗಿ ಸಾಗುತ್ತಿದೆ. ಮದುವೆಯಾದರೂ ಸಹ ಆಕೆ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಾ ಭಾರಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ಆಕೆ ಎರಡು ಸಿನೆಮಾಗಳಲ್ಲಿ ನಟಿಸಿದ್ದರು. ಶಾರುಖ್ ಜೊತೆಗೆ ಪಠಾನ್ ಹಾಗೂ ಜವಾನ್ ಎಂಬ ಸಿನೆಮಾಗಳಲ್ಲಿ ನಟಿಸಿದ್ದು, ಈ ಎರಡೂ ಸಿನೆಮಾಗಳು ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿದೆ. ಸದ್ಯ ಆಕೆಯ ಕೈಯಲ್ಲಿ ಮೂರು ಸಿನೆಮಾಗಳಿದ್ದು, ಈ ಪೈಕಿ ಪ್ಯಾನ್ ವರ್ಲ್ಡ್ ಸಿನೆಮಾ ಎಂದೇ ಕರೆಯಲಾಗುವ ಕಲ್ಕಿ 2898ಎಡಿ ಸಿನೆಮಾದ ಮೇಳೆ ಭಾರಿ ನಿರೀಕ್ಷೆ ಹುಟ್ಟಿದೆ ಎನ್ನಲಾಗಿದೆ. ಇದರ ಜೊತೆಗೆ ಬಾಲಿವುಡ್ ನಲ್ಲಿ ಆಕೆ ಎರಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.