Film News

ಸ್ಟಾರ್ ನಟಿಯರಿಗಿಂತಲೂ ಕಡಿಮೆಯಿಲ್ಲ ಬಾಲಯ್ಯ ಮಗಳು, ಬಾಲಯ್ಯ ದ್ವಿತೀಯ ಪುತ್ರಿ ತೇಜಸ್ವಿನಿ ಪೊಟೋಸ್ ವೈರಲ್….!

ಟಾಲಿವುಡ್ ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ರವರು ಅಖಂಡ ಸಿನೆಮಾದಿಂದ ಸಕ್ಸಸ್ ಪುಲ್ ಬ್ಲಾಕ್ ಬ್ಲಸ್ಟರ್‍ ಹಿಟ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಖಂಡ, ವೀರಸಿಂಹಾರೆಡ್ಡಿ, ಭಗವಂತ್ ಕೇಸರಿ ಸಿನೆಮಾಗಳ ಮೂಲಕ ಹ್ಯಾಟ್ರಿಕ್ ಗೆಲುವು ಪಡೆದುಕೊಂಡಿದ್ದಾರೆ ಎನ್ನಬಹುದಾಗಿದೆ. ಭಗವಂತ್ ಕೇಸರಿ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಬಾಲಯ್ಯನ ದ್ವಿತೀಯ ಪುತ್ರಿ ತೇಜಸ್ವಿನಿ ಸಹ ಹಾಜರಾಗಿದ್ದು, ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಸಿಂಗ ನಂದಮೂರಿ ಬಾಲಕೃಷ್ಣ ರವರಿಗೆ ಮೂರು ಮಕ್ಕಳಿದ್ದಾರೆ, ಅವರಲ್ಲಿ ಇಬ್ಬರು ಹೆಣ್ಣು, ಒಬ್ಬರು ಗಂಡು ಮಗು. ಬಾಲಯ್ಯನ ಮೊದಲ ಪುತ್ರಿ ಬ್ರಾಹ್ಮಿಣಿ ನೋಡಲು ಹಿರೋಯಿನ್ ನಂತಿದ್ದರೂ ಸಹ ಆಕೆ ಬ್ಯುಸಿನೆಸ್ ವುಮೆನ್ ಆಗಿ ಬೆಳೆಯಬೇಕೆಂಬ ಉದ್ದೇಶದಿಂದ ವ್ಯಾಪಾರದತ್ತ ಮುಖ ಮಾಡಿದ್ದಾರೆ. ನಾರಾ ಚಂದ್ರಬಾಬು ನಾಯ್ಡು ರವರ ಕುಟುಂಬ ವ್ಯಾಪಾರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ಕಿರಿಯ ಮಗಳು ತೇಜಸ್ವಿನಿಗೆ ಸಿನಿರಂಗದತ್ತ ಒಲವಿದೆ ಎನ್ನಲಾಗುತ್ತಿದೆ. ನಟಿಯಾಗಿ ಆಗದೇ ಇದ್ದರೂ ಸಹ ನಿರ್ಮಾಪಕಿಯಾಗಿ ಹಾಗೂ ಸಿನಿರಂಗದ ಬೇರೆ ವಿಭಾಗಗಳಲ್ಲಿ ಸಕ್ಸಸ್ ಕಾಣಲು ಕೋರುತ್ತಿದ್ದಾರೆ ಎಂದು ಹೇಳಲಾಗಿದೆ. ತೇಜಸ್ವಿನಿ ಕಳೆದ 2013 ರಲ್ಲಿ ಮದುವೆಯಾದರು. ಗೀತಂ ವಿದ್ಯಾಸಂಸ್ಥೆಗಳ ಎಂ.ವಿ.ವಿ.ಎಸ್ ಮೂರ್ತಿ ಮೊಮ್ಮಗ ಶ್ರೀಭರತ್ ನನ್ನು ಮದುಬೆಯಾದರು. ಅವರಿಬ್ಬರಿಗೂ ಓರ್ವ ಮಗನಿದ್ದಾನೆ. ಈ ಹಿಂದೆ ಸಹ ಭರತ್ ಕೆರಿಯರ್‍ ವಿಚಾರದಲ್ಲಿ ತೇಜಸ್ವಿನಿಗೆ ಸಂಪೂರ್ಣ ಸ್ವತಂತ್ರ ನೀಡಿದ್ದೇನೆ. ಆಕೆ ನಿರ್ಮಾಪಕಿಯಾಗಬೇಕು ಎಂದುಕೊಳ್ಳುತ್ತಿದ್ದಾರೆ ಎಂದಿದ್ದರು.

ಇನ್ನೂ ತೇಜಸ್ವಿನಿ ಹೈದರಾಬಾದ್ ನಲ್ಲಿ ಪದವಿ ಪೂರ್ಣಗೊಳಿಸಿದ್ದು, ಅಮೇರಿಕಾದಲ್ಲಿ ಎಂ.ಎಸ್ ಮುಗಿಸಿದ್ದರು. ವಿಜುವಲ್ ಎಫೆಕ್ಟ್ಸ್ ಬಗ್ಗೆ ತೇಜಸ್ವಿನಿಗೆ ಅನುಭವ ಇದೆ ಎನ್ನಲಾಗಿದೆ. ಬಾಲಯ್ಯನವರ ಸಕ್ಸಸ್ ಪುಲ್ ಟಾಕ್ ಶೋ ಅನ್ ಸ್ಟಾಪುಬಲ್ ಶೋ ಗೆ ಕ್ರಿಯೇಟಿವ್ ಕನ್ಸಲ್ಟೆಂಟ್ ಆಗಿ ವ್ಯವಹರಿಸಿದ್ದಾರೆ. ಈ ಶೋ ಆಹಾ ಒಟಿಟಿಯಲ್ಲಿ ಒಳ್ಳೆಯ ಲಾಭ ಗಳಿಸಿತು. ಶೀಘ್ರದಲ್ಲೇ ಆಕೆ ನಿರ್ಮಾಪಕಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಬಾಲಕೃಷ್ಣ ಅಭಿನಯದ ಭಗವಂತ್ ಕೇಸರಿ ಸಿನೆಮಾದ ಸಕ್ಸಸ್ ಮೀಟ್ ನಲ್ಲಿ ತೇಜಸ್ವಿನಿ ಹೈಲೈಟ್ ಆಗಿದ್ದರು. ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿ ಹರಿದಾಡುತ್ತಿವೆ. ಆಕೆ ಹಿರೋಯಿನ್ ಗಳಿಗಿಂತಲೂ ಕಡಿಮೆ ಏನು ಇಲ್ಲ ಎಂಬ ಕಾಮೆಂಟ್ ಗಲು ಹರಿದುಬರುತ್ತಿವೆ.

Most Popular

To Top