Film News

ಕಾಜಲ್ ಅಗರ್ವಾಲ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್, ಸಿನೆಮಾಗಳಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರಂತೆ ಕಾಜಲ್?

ಸೌತ್ ಸಿನಿರಂಗದಲ್ಲಿ ಅನೇಕ ಸ್ಟಾರ್‍ ಗಳ ಜೊತೆಗೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ ನಟಿ ಕಾಜಲ್ ಅಗರ್ವಾಲ್ ಲಕ್ಷ್ಮೀ ಕಲ್ಯಾಣಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕನಸಿನ ರಾಣಿಯಾದರು. ಮದುವೆಯಾದ ಬಳಿಕ ಕಾಜಲ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಕೆಲವೊಂದು ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಸಿನೆಮಾಗಳಿಂದ ಶೀಘ್ರವೇ ದೂರ ಉಳಿಯಲಿದ್ದಾರೆಂಬ ಸುದ್ದಿಯೊಂದು ಹಾಟ್ ಟಾಪಿಕ್ ಆಗಿದೆ.

ಸುಮಾರು ವರ್ಷಗಳ ಕಾಲ ತೆಲುಗು ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದ ಕಾಜಲ್ ಅಗರ್ವಾಲ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಕಾಜಲ್ ತನ್ನ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳನ್ನೂ ಸಹ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಕಳೆದ 2020 ರ ಅಕ್ಟೋಬರ್‍ 30 ರಂದು ಮುಂಬೈನಲ್ಲಿ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಎಂಬಾತನನ್ನು ವಿವಾಹವಾದರು. ಕಳೆದ ವರ್ಷ ಏಪ್ರಿಲ್ 19 ರಂದು ಮುದ್ದಾದ ಗಂಡು ಮಗುವಿಗೂ ಸಹ ಜನ್ಮ ಕೊಟ್ಟರು. ಮದುವೆ, ಮಗು ಕಾರಣದಿಂದ ಆಕೆ ಸಿನೆಮಾಗಳಿಂದ ದೂರವೇ ಇದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಒಳ್ಳೆಯ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ಒಂದು ರೂಮರ್‍ ಹರಿದಾಡುತ್ತಿದ್ದು, ಆ ಸುದ್ದಿ ಆಕೆಯ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಆಗಿದೆ.

ನಟಿ ಕಾಜಲ್ ಅಗರ್ವಾಲ್ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಮಗನ ಕಾರಣದಿಂದ ಆಕೆ ಸಿನೆಮಾಗಳಿಂದ ದೂರ ಉಳಿಯಲು ಸಿದ್ದವಾಗುತ್ತಿದ್ದಾರಂತೆ. ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ  ಮಗನ ಲಾಲನೆ ಪಾಲನೆ ಮಾಡುವುದು ಕಷ್ಟ ಎಂದು ತನ್ನ ಮಗನಿಗಾಗಿ ಆಕೆ ಸಿನೆಮಾಗಳಿಗೆ ಬ್ರೇಕ್ ಕೊಡಲಿದ್ದಾರಂತೆ. ಮಗನಿಗೆ ತಾಯಿ ಪ್ರೀತಿಯನ್ನು ಹಂಚಲು ಆಕೆ ಸಿನೆಮಾಗಳಿಂದ ದೂರ ಉಳಿಯಲಿದ್ದಾರಂತೆ. ಈ ಕುರಿತು ಆಕೆ ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಸಹ ಮಾಡಲಿದ್ದಾರಂತೆ. ಇನ್ನೂ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ನಿಜ ಇದೆ ಎಂಬುದು ಮಾತ್ರ ತಿಳಿದಿಲ್ಲ. ಆದರೆ ಸುದ್ದಿ ಮಾತ್ರ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಕಾಜಲ್ ಅಗರ್ವಾಲ್ ಸದ್ಯ ಸ್ಟಾರ್‍ ನಟ ಕಮಲ್ ಹಾಸನ್ ಜೊತೆಗೆ ಇಂಡಿಯನ್ 2 ಹಾಗೂ ನಂದಮೂರಿ ಬಾಲಕೃಷ್ಣ ಜೊತೆಗೆ ಭಗವಂತ್ ಕೇಸರಿ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಕಾಜಲ್ ಒಂದು ಮಗುವಿನ ತಾಯಿಯಾದರೂ ಸಹ ಯಂಗ್ ಬ್ಯೂಟಿಯಂತೆ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ.

Most Popular

To Top