ರಾಮನ ಟೀಕಾಕಾರರಿಗೆ ಟಾಂಗ್ ಕೊಟ್ಟ ವಿನಯ್ ಗುರೂಜಿ, ಕಾಮೆಂಟ್ ಮಾಡಿದೋರು ಕಳೆದು ಹೋದ್ರು, ಶ್ರೀರಾಮ ಮೋದಿ ಉಳಿದುಕೊಂಡ್ರು ಎಂದ ವಿನಯ್ ಗುರೂಜಿ…..!

Follow Us :

ಜ.22 ರಂದು ಇಡೀ ದೇಶದ ಹಿಂದೂಗಳಿಗೆ ಐತಿಹಾಸಿಕ ಕ್ಷಣ ಎಂದೇ ಹೇಳಬಹುದು. ಅಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆಯಾಗಿದೆ. ದೇಶ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಹಿಂದೂಗಳು ಈ ಐತಿಹಾಸಿಕ ಕ್ಷಣ ನೋಡಿ ಭಾವುಕರಾಗಿ, ಭಕ್ತಿಪರವಾಶರಾಗಿ ರಾಮಲಲ್ಲಾನನ್ನು ಕಣ್ತುಂಬಿಕೊಂಡಿದ್ದಾರೆ. ಆದರೆ ಮೋದಿ ವಿರೋಧಿ ಹಾಗೂ ವಿಪಕ್ಷಗಳ ನಾಯಕರು ಮೋದಿಯವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇದೀಗ ರಾಮನ ಟೀಕಾಕಾರರಿಗೆ ಅವಧೂತ ವಿನಯ್ ಗುರೂಜಿ ಟಾಂಗ್ ಕೊಟ್ಟಿದ್ದಾರೆ.

ನಿನ್ನೆಯಷ್ಟೆ ಕರ್ನಾಕಟ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮೋದಿಯ ಬಗ್ಗೆ ಟೀಕೆ ಮಾಡಿದ್ದರು. ಮೋದಿಯವರನ್ನು ನೋಡಿದ್ರೆ 11 ದಿನ ಉಪವಾಸ ಮಾಡಿದವರಂತೆ ಕಾಣಿಸೊಲ್ಲ. ಯಾವುದೇ ಒಬ್ಬ ವ್ಯಕ್ತಿ 11 ದಿನಗಳ ಕಾಲ ಉಪವಾಸ ಮಾಡೋಕೆ ಸಾಧ್ಯವಿಲ್ಲ ಎಂದು ವೈದ್ಯರೊಬ್ಬರು ಹೇಳಿದ್ದರು. ವೀರಪ್ಪ ಮೊಯ್ಲಿಯವರ ಈ ಹೇಳಿಕೆಗೆ ಬಿಜೆಪಿ ಸಹ ತಿರುಗೇಟು ನೀಡಿದೆ. ಇದೀಗ ಮೋದಿ ಹಾಗೂ ರಾಮನ ಟೀಕಾಕಾರರಿಗೆ ವಿನಯ್ ಗುರೂಜಿ ಸಹ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ರಾಮ ಹಾಗೂ ಮೋದಿ ಟೀಕಾಕಾರರಿಗೆ ಟಾಂಗ್ ಕೊಟ್ಟಿದ್ದಾರೆ. ರಾಮನಿಗೂ ಕಾಮೆಂಟ್ ಮಾಡುವವರಿದ್ದಾರೆ. ಮೋದಿಗೆ ಕಾಮೆಂಟ್ ಮಾಡುವವರಿದ್ದಾರೆ. ಕಾಮೆಂಟ್ ಮಾಡುವವರೆಲ್ಲಾ ಕಳೆದು ಹೋಗಿದ್ದಾರೆ. ರಾಮ ಉಳಿದುಕೊಂಡಿದ್ದಾರೆ. ಮೋದಿ ಮುಂದೆಯೂ ಉಳಿಯುತ್ತಾರೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ. ಇನ್ನೂ ನಾನು ಬೇರೆ ದೇಶಕ್ಕೆ ಹೋದಾಗ ಇಂಡಿಯಾದವನು ಎಂದು ಬೆಲೆ ಕೊಟ್ಟು ಕರೆಯುತ್ತಾರೆ. ನಾನು ಪಕ್ಷದ ಪರವಾಗಿ ಮಾತಾಡುವುದಿಲ್ಲ. ಒಬ್ಬ ವ್ಯಕ್ತಿ ಹಾಗೂ ಪ್ರಧಾನಿ ಬಗ್ಗೆ ಮಾತನಾಡುತ್ತೇನೆ. ಪ್ರಧಾನಿಯ ಎಂಬ ಆ ವ್ಯಕ್ತಿಯ ಚಿಂತನೆ, ತಾಕತ್ತು ಏನು, ಮೋದಿಯನ್ನು ಪ್ರಾಡಕ್ಟ್ ಆಗಿ ಕೊಟ್ಟ ಸಂಘದ ತಾಕತ್ತು ಏನು ಎಂಬುದನ್ನು ನೋಡಬೇಕು ಎಂದು ವಿನಯ್ ಗುರೂಜಿ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.