Film News

ಭಾರಿ ಸಂಭಾವನೆ ಏರಿಸಿಕೊಂಡ ಮಲಯಾಳಿ ಕುಟ್ಟಿ ಅನುಪಮಾ, ಡಿಜೆ ಟಿಲ್ಲು ಸ್ಕ್ವೇರ್ ಸಿನೆಮಾಗಾಗಿ ಭಾರಿ ಡಿಮ್ಯಾಂಡ್…..!

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಪ್ರೇಮಂ ಎಂಬ ಸಿನೆಮಾದ ಮೂಲಕದ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ನಟಿಯಾಗಿದ್ದಾರೆ. ಅನುಪಮ ಎಂದರೇ ಸಾಕು ಲವ್ಲೀ, ಟ್ರೆಡಿಷನಲ್ ಹಾಗೂ ಕ್ಯೂಟ್ ನಟಿ ಎಂದು ಹೇಳಲಾಗುತ್ತದೆ. ಪ್ರೇಮಂ ಸಿನೆಮಾದ ಬಳಿಕ ದಕ್ಷಿಣ ಭಾರತದ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾದರು. ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಕಾರ್ತಿಕೇಯ-2 ಸಿನೆಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಪಡೆದುಕೊಂಡ ಈಕೆ ಇದೀಗ ಆಕೆ ಡಿಜೆ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ನಟಿಸುತ್ತಿದ್ದು ಈ ಸಿನೆಮಾಗಾಗಿ ಆಕೆ ಭಾರಿ ಸಂಭಾವನೆಯನ್ನು ಪಡೆಯುತ್ತಿದ್ದಾರಂತೆ.

ಮಲಯಾಳಂ ಮೂಲದ ನಟಿಯಾದರೂ ಸಹ ಅನುಪಮಾ ತೆಲುಗು ಪ್ರೇಕ್ಷರಿಗೆ ತುಂಬಾ ಹತ್ತಿರವಾದರು. ಸೌತ್ ನ ವಿವಿಧ ಭಾಷೆಗಳಲ್ಲಿ ಆಕೆ ವಿವಿಧ ಸಿನೆಮಾಗಳಲ್ಲಿ ನಟಿಸಿದ್ದರು. ಶತಮಾನಂ ಭವತಿ, ಹಲೋ ಗುರು ಪ್ರೇಮ ಕೋಸಮೇ, ಉನ್ನದಿ ಒಕ್ಕಟೆ ಜೀವಿತಂ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಅದರಲ್ಲೂ ಕಾರ್ತಿಕೇಯ-2 ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಆಕೆ ಈ ಸಿನೆಮಾದ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ಈ ಸಿನೆಮಾದ ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ.

ಇನ್ನೂ ತೆಲುಗು ಯಂಗ್ ಹಿರೋ ಸಿದ್ದು ಜೊನ್ನಲಗಡ್ಡ ಅಭಿನಯದ ಡಿಜೆ ಟಿಲ್ಲು ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಯಾವುದೇ ನಿರೀಕ್ಷೆಯಿಲ್ಲದೆ ತೆರೆಕಂಡ ಈ ಸಿನೆಮಾ ಭಾರಿ ಸಕ್ಸಸ್ ತಂದುಕೊಟ್ಟಿತ್ತು. ಈ ಸಿನೆಮಾದ ಸೀಕ್ವೆಲ್ ಸಹ ಈಗಾಗಲೇ ಸೆಟ್ಟೇರಿದೆ. ಡಿಜೆ ಟಿಲ್ಲು ಸ್ಕ್ವೇರ್‍ ಎಂಬ ಟೈಟಲ್ ನಡಿ ಈ ಸಿನೆಮಾ ಶೂಟಿಂಗ್ ನಡೆಸಿಕೊಳ್ಳುತ್ತಿದೆ. ಈ ಸಿನೆಮಾದಲ್ಲಿ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೆ ಅನುಪಮಾ ಫಸ್ಟ್ ಲುಕ್ ಪೋಸ್ಟರ ಸಹ ರಿಲೀಸ್ ಆಗಿದ್ದು, ರೊಮ್ಯಾಂಟಿಕ್ ಪೋಸ್ ಮೂಲಕ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದ್ದರು. ಇದೀಗ ಆಕೆ ಈ ಸಿನೆಮಾಗಾಗಿ ಬರೊಬ್ಬರಿ 1.25 ಕೋಟಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರಂತೆ. ಸದ್ಯ ಈ ಸುದ್ದಿ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ಕಳೆದ ವರ್ಷದ ವರೆಗೂ ಅನುಪಮಾ ಕಡಿಮೆ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು. ಡಿಜೆ ಟಿಲ್ಲು ಸ್ಕ್ವೇರ್‍ ಸಿನೆಮಾದ ಮೂಲಕ ಆಕೆ ಭಾರಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇನ್ನೂ ಡಿಜೆ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ಆಕೆ ನೆಕ್ಸ್ಟ್ ಲೆವೆಲ್ ನಲ್ಲಿಯೇ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಈ ಸಿನೆಮಾ ಇದೇ ಸೆ.15 ರಂದು ತೆರೆಕಾಣಲಿದೆ.

Most Popular

To Top