Film News

ಜಬರ್ದಸ್ತ್ ಶೋ ಬಿಡಲು ಅಸಲಿ ಕಾರಣ ರಿವೀಲ್ ಮಾಡಿದ ಅನಸೂಯ, ಶಾಕಿಂಗ್ ಕಾಮೆಂಟ್ಸ್ ವೈರಲ್….!

ತೆಲುಗು ಕಿರುತೆರೆಯಲ್ಲಿ ದೊಡ್ಡ ಕ್ರೇಜ್ ಸಂಪಾದಿಸಿ ಆಂಕರ್‍ ಗಳಲ್ಲಿ ಅನಸೂಯ ಭಾರದ್ವಾಜ್ ಗಾಗಿ ಅನೇಕ ಅಭಿಮಾನಿಗಳು ಆಕೆಯ ಶೋ ನೋಡಲು ಕಾಯುತ್ತಿರುತ್ತಾರೆ. ಅನಸೂಯ ಕೆರಿಯರ್‍ ಪ್ರಾರಂಭಿಸಿದಾಗ ಮೊದಲಿಗೆ ಸಾಕ್ಷಿ, ಮಾ ಟಿವಿಗಳಲ್ಲಿ ಕೆಲಸ ಮಾಡಿದ್ದರು. ಬಳಿಕ ಆಕೆಗೆ ಪುಲ್ ಹೈಪ್ ಹಾಗೂ ಪಾಪ್ಯುಲಾರಿಟಿ ನೀಡಿದ ಶೋ ಎಂದರೇ ಅದು ಜಬರ್ದಸ್ಥ್ ಕಾಮಿಡಿ ಶೋ. ಈ ಶೋ ಮೂಲಕವೇ ಆಕೆ ದೊಡ್ಡ ಕ್ರೇಜ್ ಸಂಪಾದಿಸಿಕೊಂಡು ದೊಡ್ಡ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡರು. ಆದರೆ ಆಕೆ ಕೆಲವೊಂದು ಕಾರಣಗಳಿಂದ ಶೋನಿಂದ ಹೊರಬಂದರು. ಇದೀಗ ಆ ಶೋನಿಂದ ಹೊರಬರಲು ಅಸಲೀ ಕಾರಣವನ್ನು ಅನಸೂಯ ಹೊರಹಾಕಿದ್ದಾರೆ.

ಆಂಕರ್‍ ಕಂ ನಟಿ ಅನಸೂಯ ಜಬರ್ದಸ್ತ್ ನಿಂದ ದೂರವಾಗಿ ಅನೇಕ ತಿಂಗಳುಗಳು ಕಳೆಯುತ್ತಿದೆ. ಈ ಶೋ ನಿಂದ ಆಕೆ ಹೊರಬಂದ ಬಳಿಕ ಏತಕ್ಕಾಗಿ ಶೋ ನಿಂದ ಹೊರಬಂದರು ಎಂಬ ವಿಚಾರ ಹೊರಹಾಕಿರಲಿಲ್ಲ. ಈ ಹಿಂದೆ ಜಬರ್ದಸ್ತ್ ಶೋ ನಿರ್ವಾಹಕರೊಂದಿಗೆ ಕೆಲ ವಿಭೇದಗಳ ಕಾರಣದಿಂದ ಆಕೆ ಈ ಶೋನಿಂದ ದೂರವಾದರು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಅಸಲೀ ಕಾರಣ ಬಿಚ್ಚಿಟ್ಟಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅನಸೂಯ ಇತ್ತೀಚಿಗೆ ತನ್ನ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ಆಕೆ ಅನೇಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಟ್ರೋಲ್ಸ್, ಟಿವಿ ಶೋಗಳನ್ನು ಬಿಟ್ಟಿದ್ದು ಸೇರಿದಂತೆ ಅನೇಕ ವಿಚಾರಗಳನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಈ ಚಿಟ್ ಚಾಟ್ ನಲ್ಲಿ ಜಬರ್ದಸ್ತ್ ಶೋ ನಿಂದ ಏಕೆ ಹೊರಬಂದೆ ಎಂಬ ವಿಚಾರ ಹೊರಹಾಕಿದ್ದಾರೆ. ಆದರೆ ಪರೋಕ್ಷವಾಗಿ ಈ ವಿಚಾರ ಹೊರಹಾಕಿದ್ದಾರೆ. ವಿಪರೀತವಾದ ಅಗೌರವಯುತವಾದ ಟಿಆರ್‌ಪಿ ಸ್ಟಂಟ್ಸ್ ಹೋದಾಗ ನಾನು ಟಿವಿ ಶೋಗಳಿಂದ ದೂರವಾದೆ. ಟಿಆರ್‍ಪಿ ಗಳಾಗಿ ಮಾಡುವಂತಹ ಸ್ಟಂಟ್ಸ್ ಹೋದರೇ ಮಾತ್ರ ನಾನು ಅಂತಹ ಶೋಗಳಲ್ಲಿ ಮತ್ತೇ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ ಎಂಬ ಅರ್ಥದಲ್ಲಿ ಅನಸೂಯ ಕಾಮೆಂಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಟಿಆರ್‌ಪಿ ರೇಟಿಂಗ್ ಗಾಗಿ ಡಬಲ್ ಮೀನಿಂಗ್ ಡೈಲಾಗ್ ಗಳು ತುಂಬಾನೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಪರೋಕ್ಷವಾಗಿ ಅನಸೂಯ ಜಬರ್ದಸ್ತ್ ಶೋನಿಂದ ಹೊರಬಂದ ವಿಚಾರವನ್ನು ಹಂಚಿಕೊಂಡಿದ್ದಾರೆ ಎಂದು ಅನೇಕರ ಅಭಿಪ್ರಾಯವಾಗಿದೆ.

ಈ ಹಿಂದೆ ಸಹ ಅನಸೂಯ ಜಬರ್ದಸ್ತ್ ಶೋನಿಂದ ಹೊರಬರಲು ಶೋ ನಿರ್ವಾಹಕರೊಂದಿಗಿನ ವಿಭೇದಗಳು ಹಾಗೂ ಕೆಲವು ಕಮೆಡಿಯನ್ ಗಳು ಆಕೆ ಮೇಲೆ ಮಾಡುವಂತಹ ವಲ್ಗರ್‍ ಕಾಮೆಂಟ್ ಗಳು ಕಾರಣ ಎಂದು ಹೇಳಿದ್ದರು. ಜೊತೆಗೆ ಬಾಡಿ ಶೇಮಿಂಗ್ ಬಗ್ಗೆ ತನ್ನ ಅಭ್ಯಂತರವನ್ನು ಸಹ ಹೊರಹಾಕಿದ್ದರು. ಅಷ್ಟೇಅಲ್ಲದೇ ತನ್ನ ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಅವರಿಗೆ ಎಲ್ಲವೂ ತಿಳಿಯುತ್ತದೆ ಈ ಸಮಯದಲ್ಲಿ ಆ ಶೋ ಸರಿಯಲ್ಲ ಎಂದು ಜಬರ್ದಸ್ತ್ ಬಿಟ್ಟಿದ್ದಾಗಿ ಹೇಳಿಕೊಂಡಿದ್ದರು. ಇದೀಗ ಅನಸೂಯ ಕಿರುತೆರೆ ಶೋಗಳಿಗಿಂತ  ಸಿನೆಮಾಗಳಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಂಡು ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top