Film News

ಆಲಿಯಾ ಚಪ್ಪಲಿ ಹೊತ್ತ ರಣಬೀರ್, ನೆಟ್ಟಿಗರ ಆಕ್ರೋಷಕ್ಕೆ ಗುರಿಯಾದ ರಣಬೀರ್ ಕಪೂರ್, ವೈರಲ್ ಆದ ವಿಡಿಯೋ….!

ಬಾಲಿವುಡ್ ಸಿನಿರಂಗದಲ್ಲಿ ಕ್ಯೂಟ್ ಜೋಡಿಯಾದ ಆಲಿಯಾ ಭಟ್ ಹಾಗೂ ರಣಬೀರ್‍ ಕಪೂರ್‍ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಸಿನೆಮಾಗಳ ಜೊತೆಗೆ ಅವರು ಈವೆಂಟ್ ಗಳು, ಅನೇಕ ಕಾರ್ಯಕ್ರಮಗಳಲ್ಲೂ ಸಹ ಭಾಗಿಯಾಗುತ್ತಿರುತ್ತಾರೆ. ಇದೀಗ ರಣಭೀರ್‍ ಆಲಿಯಾ ಭಟ್ ಚಪ್ಪಲಿಯನ್ನು ಎತ್ತಿಕೊಂಡ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡ ಅನೇಕರು ರಣಬೀರ್‍ ಕಪೂರ್‍ ವಿರುದ್ದ ಫೈರ್‍ ಸಹ ಆಗಿದ್ದಾರೆ. ಅಷ್ಟಕ್ಕೂ ಆ ವಿಡಿಯೋ ಏನು ಎಂಬ ವಿಚಾರಕ್ಕೆ ಬಂದರೇ,

ಏ.21 ರಂದು ಬಾಲಿವುಡ್ ನ ಖ್ಯಾತ ನಿರ್ಮಾಫಕ ಆದಿತ್ಯ ಚೋಪ್ರಾ ತಾಯಿ ಪಮೀಲಾ ಚೋಪ್ರಾ ಇಹಲೋಕ ತ್ಯೆಜಿಸಿದ್ದರು. ಸಿನಿರಂಗದ ಅನೇಕರು ಅವರ ಕುಟುಂಬವನ್ನು ಪರಾಮರ್ಶೆ ಮಾಡಲು ಮನೆಗೆ ತೆರಳಿದರು. ಬಾಲಿವುಡ್ ಸ್ಟಾರ್‍ ಜೋಡಿಯಾದ ಆಲಿಯಾ ಹಾಗೂ ರಣಬೀರ್‍ ಸಹ ಹಾಜರಾಗಿದ್ದರು. ಪಮೀಲಾ ಮರಣಕ್ಕೆ ತೀವ್ರ ವಿಷಾದ ಸಹ ವ್ಯಕ್ತಪಡಿಸಿದ್ದರು. ಆದರೆ ರಣಬೀರ್‍ ಕಪೂರ್‍ ಆಲಿಯಾ ಜೋಡಿ ಆದಿತ್ಯ ಚೋಪ್ರಾ ಮನೆಗೆ ಹೋಗುವಂತಹ ವಿಡಿಯೋ ಒಂದು ವೈರಲ್ ಆಗಿದೆ. ಮನೆಯ ಒಳಗೆ ಹೋಗುವಾಗ ಆಲಿಯಾ ತನ್ನ ಚಪ್ಪಲಿಯನ್ನು ಹೊರಗೆ ಬಿಟ್ಟು ಒಳಗೆ ಹೋಗಿದ್ದಾಳೆ. ಬಳಿಕ ರಣಬೀರ್‍ ಆ ಚಪ್ಪಲಿಯನ್ನು ತೆಗೆದು ಮನೆಯ ಒಳೆಗೆ ಇಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋ ಕಂಡ ನೆಟ್ಟಿಗರೂ ಸಹ ಫೈರ್‍ ಆಗುತ್ತಿದ್ದಾರೆ.

ನೆಟ್ಟಿಗರು ಆಕ್ರೋಷಗೊಂಡಿದ್ದಕ್ಕೆ ಕಾರಣ ಸಹ ಒಂದಿದೆ. ಮನೆಯ ಮುಂಭಾಗದಲ್ಲೇ ದೀಪ ಹಾಗೂ ದೇವರ ಮಂದಿರ ಸಹ ಕಾಣಿಸುತ್ತಿದೆ. ರಣಬೀರ್‍ ಕಪೂರ್‍ ಆಲಿಯಾ ಭಟ್ ಚಪ್ಪಲಿಗಳನ್ನು ತೆಗೆದುಕೊಂಡು ಹೋಗಿ ಮಂದಿರದ ಮುಂದೆ ಇಟ್ಟಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ರಣಬೀರ್‍ ರವರ ವಿರುದ್ದ ಫೈರ್‍ ಆಗುತ್ತಿದ್ದಾರೆ. ಬ್ರಹ್ಮಾಸ್ತ್ರ ದಂತಹ ದೈವಭಕ್ತಿಯ ಸಿನೆಮಾ ಮಾಡಿದ ನಿಮಗೆ ದೇವರ ಮಂದಿರ ಕಾಣಿಸಲಿಲ್ಲವೇ, ಎಂದು ಫೈರ್‍ ಆಗುತ್ತಿದ್ದಾರೆ. ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗುತ್ತಿದೆಯೋ ಅಷ್ಟೇ ಮಟ್ಟಿಗೆ ವಿಮರ್ಶೆಗೆ ಸಹ ಗುರಿಯಾಗಿದೆ.

ಇನ್ನೂ ರಣಬೀರ್‍ ಕಪೂರ್‍ ಹಾಗೂ ಆಲಿಯಾ ಮದುವೆ ಕಳೆದ ವರ್ಷ ಏಪ್ರಿಲ್ 14 ರಂದು ಅದ್ದೂರಿಯಾಗಿ ಮದುವೆಯಾದರು. ಮದುವೆಯಾದ ಎರಡನೇ ತಿಂಗಳಲ್ಲೇ ಆಕೆ ಗರ್ಭಿಣಿಯೆಂಬ ಸುದ್ದಿಯನ್ನು ಹೊರಹಾಕಿ ಎಲ್ಲರಿಗೂ ಶಾಕ್ ನೀಡಿದ್ದರು. ಬಳಿಕ ನವೆಂಬರ್‍ ಮಾಹೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಸದ್ಯ ಆಲಿಯಾ ಕುಟುಂಬದೊಂದಿಗೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

Most Popular

To Top