ತಿರುಮಲಕ್ಕೆ ಹೋಗುವ ಪಾದಚಾರಿಗಳೇ ಎಚ್ಚರ, ಅಲಿಪಿರಿ ಬಳಿ ಮತ್ತೆ ಕಾಣಿಸಿಕೊಂಡ ಕರಡಿ ಚಿರತೆ……!

Follow Us :

ವಿಶ್ವ ವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಅದರಲ್ಲೂ ಕಾಲುನಡಿಗೆಯ ಮೂಲಕ ಸಹ ಅನೇಕರು ಹೋಗುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಪುಟಾಣಿ ಬಾಲಕಿಯೊಬ್ಬಳನ್ನು ಚಿರತೆಯೊಂದು ಕೊಂದುಹಾಕಿತ್ತು. ಈ ಕಾರಣದಿಂದ ಭಕ್ತರು ಕಾಲ್ನಡಿಗೆಯಲ್ಲಿ ಹೋಗಲು ಭಯಪಡುವಂತಾಗಿದೆ. ಇದರಿಂದ ಟಿಟಿಡಿ ಕಾಲ್ನಿಡಿಗೆಯಲ್ಲಿ ಹೋಗಲು ಕೆಲವೊಂದು ಹೊಸ ನಿಯಮಗಳನ್ನೂ ಸಹ ಜಾರಿ ಮಾಡಿದೆ. ಇದೀಗ ಮತ್ತೆ ಭಕ್ತರು ಭಯಪಡುವಂತಾಗಿದೆ. ಅಲಿಪಿರಿ ಬಳಿ ಮತ್ತೆ ಚಿರತೆ ಹಾಗೂ ಕರಡಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಇನ್ನೂ ಕಳೆದೆರಡು ದಿನಗಳ ಹಿಂದೆಯಷ್ಟೆ ಚಿರತೆಯೊಂದನ್ನು ಹಿಡಿಯಲಾಗಿದ್ದು, ಕಳೆದ ಬುಧವಾರ ಮತ್ತೊಂದು ಚಿರತೆ ಸಹ ಬೋನಿಗೆ ಬಿದಿದ್ದೆ. ಚಿರತೆಯನ್ನು ಹಿಡಿಯಲು ಬೋನ್ ಇಟ್ಟಿದ್ದು, ಬೋನಿನಲ್ಲಿ ನಾಯಿಯನ್ನು ಇಡಲಾಗಿದ್ದು, ಅದನ್ನು ತಿನ್ನಲು ಬಂದ ಚಿರತೆ ಬೋನಿಗೆ ಬಿದಿದ್ದು, ಈ ದೃಶ್ಯಗಳು ಸಿಸಿಟಿವಿ ಯಲ್ಲಿ ಸಹ ಸೆರೆಯಾಗಿದೆ. ಇನ್ನೂ 35 ನೇ ತಿರುವಿನಲ್ಲಿರುವ ಮೊಕಾಳಿ ಮಿತ್ರ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಬಳಿ ಬೋನ್ ಇಡಲಾಗಿತ್ತು. ಕಳೆದ 50 ದಿನಗಳ ಅವಧಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮೂರು ಚಿರತೆಗಳನ್ನು ಸೆರೆ ಹಿಡಿದಿದ್ದಾರೆ. ಸದ್ಯ ಬೋನಿಗೆ ಬಿದ್ದ ಎರಡೂ ಚಿರತೆಗಳು ಗಂಡು ಚಿರತೆ ಎಂದು ಹೇಳಲಾಗಿದೆ.

ಇನ್ನೂ ಕಳೆದ ಬುಧವಾರ ಚಿರತೆ ಕಾಣಿಸಿಕೊಂಡ ಸ್ಥಳದಲ್ಲೇ ಕರಡಿಯೂ ಸಹ ಕಾಣಿಸಿಕೊಂಡಿದೆ. ಈ ವಿಚಾರವನ್ನು ಭಕ್ತರು ಟಿಟಿಡಿ ಅಧಿಕಾರಿಗಳಿಗೆ ಸಹ ತಿಳಿಸಿದ್ದಾರೆ. ಇನ್ನೂ ಟಿಟಿಡಿ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಹೋಗಿ ಪರಿಶೀಲನೆ ಸಹ ನಡೆಸಿದ್ದಾರೆ. ತಿಮ್ಮಪ್ಪನ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಹೋಗುವಂತಹ ಭಕ್ತರಿಗೆ ದೊಣ್ಣೆಯೊಂದನ್ನು ನೀಡಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಮೆಟ್ಟಿಲುಗಳ ಬಳಿ ದೊಡ್ಡ ಬೇಲಿ ಸಹ ನಿರ್ಮಾಣ ಮಾಡುವ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ. ಸದ್ಯ ಶ್ರೀವಾರಿ ದರ್ಶನಕ್ಕೆ ಸುಮಾರು 14 ರಿಂದ 16 ಗಂಟೆಯವರೆಗೂ ಕಾಯಬೇಕಿದೆ.