ಬಾಹುಬಲಿ ಸಕ್ಸಸ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ತಮನ್ನಾ, ಬಾಹುಬಲಿಯಿಂದ ನನಗೆ ಬಂದಿದ್ದು ಏನು ಇಲ್ಲಾ ಎಂದ ಮಿಲ್ಕಿ ಬ್ಯೂಟಿ…..!

Follow Us :

ಸೌತ್ ಸಿನಿರಂಗದಲ್ಲಿ ತನ್ನ ಗ್ಲಾಮರ್‍ ಮೂಲಕವೇ ಅನೇಕ ವರ್ಷಗಳ ಕಾಲ ಆಳಿದಂತಹ ನಟಿ ತಮನ್ನಾ ಭಾಟಿಯಾ ಬ್ಯೂಟಿಗೆ ದೊಡ್ಡ ದೊಡ್ಡ ಸ್ಟಾರ್‍ ಗಳೂ ಸಹ ಫಿದಾ ಆಗಿದ್ದಾರೆ. ಗ್ಲಾಮರಸ್ ಡ್ಯಾನ್ಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಈ ರೀತಿಯ ಕ್ರೇಜ್ ಬೇರೆ ಯಾವ ನಟಿಯೂ ಸಹ ಪಡೆದುಕೊಂಡಿಲ್ಲ ಎಂದು ಹೇಳಬಹುದಾಗಿದೆ. ಸೌತ್ ಸಿನಿರಂಗದ ಅನೇಕ ಸಿನೆಮಾಗಳ ಮೂಲಕ 15 ವರ್ಷಗಳಿಂದ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಆಕೆಯ ಕೆರಿಯರ್‍ ನಲ್ಲಿ ಬಿಗೆಸ್ಟ್ ಹಿಟ್ ಬಾಹುಬಲಿ ಸಿನೆಮಾ ಎಂದರೇ ತಪ್ಪಾಗಲಾರದು. ಆದರೆ ಆಕೆ ಬಾಹುಬಲಿ ಸಕ್ಸಸ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಸುಮಾರು 15 ವರ್ಷಗಳಿಂದ ಮಿಲ್ಕಿ ಬ್ಯೂಟಿ ತಮನ್ನಾ ಗ್ಲಾಮರ್‍ ಮೂಲಕವೇ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ್ದಾರೆ. ಸೌತ್ ಸಿನೆಮಾಗಳ ಜೊತೆಗೆ ಇದೀಗ ಆಕೆ ಬಾಲಿವುಡ್ ನಲ್ಲೂ ಸಹ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಗ್ಲಾಮರ್‍ ಮೂಲಕವೇ ಆಕೆ ಅನೇಕ ಯುವಕರ ಕನಸಿನ ರಾಣಿಯಾದರು ಎನ್ನಬಹುದಾಗಿದೆ. ಪ್ರಭಾಸ್, ಪವನ್ ಕಲ್ಯಾಣ್, ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಅನೇಕ ಸ್ಟಾರ್‍ ಗಳ ಜೊತೆಗೆ ಆಕೆ ನಟಿಸಿದ್ದಾರೆ. ಹ್ಯಾಪಿಡೇಸ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತನ್ನ ಖಾತೆಗೆ ಹಾಕಿಕೊಂಡರು. ಆದರೆ ಬಾಹುಬಲಿ ಸಿನೆಮಾ ಮಾತ್ರ ಆಕೆಯ ಕೆರಿಯರ್‍ ನಲ್ಲಿ ದೊಡ್ಡ ಸಕ್ಸಸ್ ಎಂದೇ ಹೇಳಬಹುದು. ಆದರೆ ತಮನ್ನಾ ಇದೀಗ ಬಾಹುಬಲಿ ಸಿನೆಮಾದ ಸಕ್ಸಸ್ ನಿಂದ ತನಗೆ ಯಾವುದೇ ಅನುಕೂಲವಾಗಿಲ್ಲ. ಎಲ್ಲಾ ಕ್ರೆಡಿಟ್ ಅವರೇ ತೆಗೆದುಕೊಂಡರು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ತಮನ್ನಾ ಬಾಹುಬಲಿ ಸಿನೆಮಾದಲ್ಲಿ ಅವಂತಿಕ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆ ಗ್ಲಾಮರ್‍ ಜೊತೆಗೆ ಆಕ್ಷನ್ ದೃಶ್ಯಗಳ ಮೂಲಕ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿದ್ದರು. ಆದರೆ ತಮನ್ನಾ ಬಾಹುಬಲಿ ಸಿನೆಮಾದ ಸಕ್ಸಸ್ ಬಗ್ಗೆ ವಿಭಿನ್ನವಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನನಗೆ ಬಾಹುಬಲಿ ಸಿನೆಮಾದ ಸಕ್ಸಸ್ ನಿಂದ ಬಂದಿದ್ದು ಏನು ಇಲ್ಲ. ಬಾಹುಬಲಿ ಸಿನೆಮಾದಲ್ಲಿ ನನ್ನ ಪಾತ್ರ ಅತಿಥಿ ಪಾಥ್ರವಾಗಿಯೇ ಉಳಿದಿದೆ. ಸರಿಯಾದ ಮನ್ನಣೆ ಸಿಗಲಿಲ್ಲ. ಅಂತಹ ಸಿನೆಮಾಗಳಲ್ಲಿ ಹಿರೋಗಳಿಗೆ ಹೆಚ್ಚು ಕ್ರೇಜ್ ದೊರೆಯುತ್ತದೆ. ಪ್ರಭಾಸ್, ರಾಣಾ ರವರಿಗೆ ಒಳ್ಳೆಯ ಕ್ರೇಜ್ ದೊರೆಯಿತು. ಬಳಿಕ ರಮ್ಯಕೃಷ್ಣ, ಅನುಷ್ಕಾ ರವರಿಗೂ ಸಹ ಒಳ್ಳೆಯ ಕ್ರೇಜ್ ದೊರೆಯಿತು. ಆದರೆ ನನ್ನ ಪಾತ್ರಕ್ಕೆ ಅಷ್ಟೊಂದು ಕ್ರೇಜ್ ದೊರೆಯಲಿಲ್ಲ ಎಂದು ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರಗಳನ್ನು ಆಕೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಬಾಹುಬಲಿ ಸಿನೆಮಾ ಬಿಡುಗಡೆಯಾಗಿ ಸುಮಾರು ವರ್ಷಗಳ ಕಳೆದಿದೆ. ಈ ಸಮಯದಲ್ಲಿ ಆಕೆ ಈ ಕಾಮೆಂಟ್ ಗಳು ಏಕೆ ಮಾಡಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸದ್ಯ ತಮನ್ನಾ ಸೌತ್ ಅಂಡ್ ನಾರ್ತ್ ನಲ್ಲೂ ಪುಲ್ ಬ್ಯುಸಿಯಾಗಿದ್ದಾರೆ. ಆಕೆ ಭೋಳಾಶಂಕರ್‍, ಜೈಲರ್‍ ಸಿನೆಮಾಗಳಲ್ಲಿ ಜೊತೆಗೆ ಬಾಲಿವುಡ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ.