Film News

Yash19 ಸಿನೆಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಲಿದ್ದಾರಂತೆ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ….!

ಕೆಜಿಎಫ್ ಸಿರೀಸ್ ಮೂಲಕ ಯಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಪಡೆದುಕೊಂಡರು. ಕನ್ನಡ ಸಿನಿರಂಗದ ಖ್ಯಾತಿಯನ್ನು ಗ್ಲೋಬಲ್ ಮಟ್ಟದ ವರೆಗೆ ತೆಗೆದುಕೊಂಡು ಹೋದರು. ಕೆಜಿಎಫ್-1 ಹಾಗೂ ಕೆಜಿಎಫ್-2 ಎರಡೂ ಸಿನೆಮಾಗಳು ಭಾರಿ ಸಕ್ಸಸ್ ಕಂಡವು. ಈ ಸಿನೆಮಾದ ಬಳಿಕ ಯಶ್ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿಕೊಂಡಿತ್ತು. ಸದ್ಯ YASH19 ಸಿನೆಮಾದ ಬಗ್ಗೆ ಖಚಿತ ಅಪ್ಡೇಟ್ ದೊರೆತಿದೆ. ಡಿ.8 ರಂದು ಈ ಸಿನೆಮಾದ ಟೈಟಲ್ ರಿವೀಲ್ ಆಗಲಿದೆ. ಇದೀಗ ಈ ಸಿನೆಮಾದಲ್ಲಿ ಸೌತ್ ಸ್ಟಾರ್‍ ನಟಿ ಸಾಯಿ ಪಲ್ಲವಿ ಯಶ್ ಜೊತೆಗೆ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಸೌತ್ ಸಿನಿರಂಗದಲ್ಲಿ ಸದ್ಯ ಕಾಟೇರಾ, ಸಲಾರ್‍ ಸಿನೆಮಾದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಇದೀಗ Yash19 ಸಿನೆಮಾದ ಬಗ್ಗೆ ಸಹ ಚರ್ಚೆ ಶುರುವಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ Yash19 ಸಿನೆಮಾದ ಪೋ‌ಸ್ಟರ್‍ ಭಾರಿ ಸದ್ದು ಮಾಡಿತ್ತು. ಈ ಸಿನೆಮಾದ ಡಿ.8 ರಂದು ಈ ಸಿನೆಮಾದ ಟೈಟಲ್ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಒಂದೋಂದೆ ಪೋಸ್ಟರ್‍ ಮೂಲಕ ರಾಕಿಭಾಯ್ ಯಶ್ ರವರ ಸಿನೆಮಾದ ಬಗ್ಗೆ ಮಾಹಿತಿ ಸಿಗುತ್ತಿದೆ. ಈ ನಡುವೆ ಯಶ್ ರವರ ಸಿನೆಮಾದಲ್ಲಿ ನಾಯಕಿ ಯಾರು ಎಂಬ ಬಗ್ಗೆ ಸಹ ಚರ್ಚೆ ಶುರುವಾಗಿದೆ. ಡಿ.8 ರಂದು ಬೆಳಿಗ್ಗೆ 9.55 ಸಮಯಕ್ಕೆ ಟೈಟಲ್ ಅನೌನ್ಸ್ ಆಗಲಿದೆ. ಇದರ ಜೊತೆಗೆ ಸಿನೆಮಾದ ಟೀಸರ್‍ ಸಹ ರಿಲೀಸ್ ಆಗಲಿದೆ ಎಂಬ ಸುದ್ದಿ ಸಹ ಕೇಳಿಬರುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಇನ್ನೂ Yash19 ಸಿನೆಮಾದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಕೆಜಿಎಫ್ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ಯಶ್ ರವರ ಜೊತೆಗೆ ಮುಂದಿನ ಸಿನೆಮಾದಲ್ಲಿ ನಟಿಸುವ ನಾಯಕಿ ಯಾರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ ಮುನ್ನೆಲೆಗೆ ನ್ಯಾಚುರಲ್ ಸ್ಟಾರ್‍ ಸಾಯಿ ಪಲ್ಲವಿ ಹೆಸರು ಕೇಳಿಬರುತ್ತಿದೆ. ಫಿಲಂ ಕ್ರಿಟಿಕ್ ರೋಹಿತ್ ಜೈಸ್ವಾಲ್ ಈ ಕುರಿತು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಸುದ್ದಿ ಡಿ.8 ರಂದು ಹೊರಬರಬಹುದು ಎಂದು ಅಂದಾಜಿಸಲಾಗಿದೆ. ಈ ನಡುವೆ ರಾಶಿ ಖನ್ನಾ ರವರ ಹೆಸರು ಸಹ ಕೇಳಿಬರುತ್ತಿದೆ. ಒಟ್ಟಿನಲ್ಲಿ Yash19 ಸಿನೆಮಾದ ಮೇಲೆ ಭಾರಿ ನಿರೀಕ್ಷೆಯಿದ್ದು ಸಿನೆಮಾದ ನಟಿಯಾರು ಆಗಲಿದ್ದಾರೆ ಎಂಬ ಚರ್ಚೆ ಸಹ ಜೋರಾಗಿಯೇ ಕೇಳಿಬರುತ್ತಿದೆ.

Most Popular

To Top