Film News

ಆ ಒಂದು ನೃತ್ಯ ಬಿಟ್ಟರೇ, ಉಳಿದೆಲ್ಲಾ ಎಲ್ಲಾ ನೃತ್ಯಗಳನ್ನು ನಾನು ಪಿರಿಯಡ್ಸ್ ಆದಾಗಲೇ ಮಾಡಿದ್ದು ಎಂದ ನಟ ಸ್ಟಾರ್ ನಟಿ ಸಾಯಿ ಪಲ್ಲವಿ….!

ಸಿನಿರಂಗದಲ್ಲಿ ಗ್ಲಾಮರ್‍ ಶೋ ಮಾಡದೇ ಸ್ಟಾರ್‍ ನಟಿಯಾದವರಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಸಿನೆಮಾಗಳಲ್ಲಿ ಗ್ಲಾಮರ್‍ ಶೋಗೆ ಯಾವುದೇ ರೀತಿಯ ಆಸ್ಪದ ನೀಡಿದೇ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಆಕೆ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳೂ ಸಹ ಸಕ್ಸಸ್ ಕಂಡಿದೆ. ಎನರ್ಜಿಟಿಕ್ ನೃತ್ಯ ಮಾಡುವುದರಲ್ಲಿ ಸಾಯಿ ಪಲ್ಲವಿ ತುಂಬಾ ಪ್ರಾವಿಣ್ಯತೆ ಹೊಂದಿದ್ದಾರೆ ಎನ್ನಬಹುದಾಗಿದೆ. ಇದೀಗ ಆಕೆ ನೃತ್ಯದ ಬಗ್ಗೆ ಮಾಡಿದ್ದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಪ್ರೇಮಂ ಎಂಬ ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ, ಕಡಿಮೆ ಸಮಯದಲ್ಲೇ ಭಾರಿ ಆಫರ್‍ ಗಳನ್ನು ಪಡೆದುಕೊಂಡು ಸ್ಟಾರ್‍ ನಟಿಯಾದರು. ಗ್ಲಾಮರ್‍ ಶೋ ಮಾಡದೇ ಆಕೆ ಸ್ಟಾರ್‍ ನಟಿಯಾದರು ಎನ್ನಬಹುದಾಗಿದೆ. ಬಳಿಕ ಆಕೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ಆಕೆಯ ನೃತ್ಯಕ್ಕೆ ಅನೇಕ ಮಂದಿ ಫಿದಾ ಆಗಿ ಆಕೆಯ ಅಭಿಮಾನಿಗಳಾಗಿದ್ದಾರೆ ಎನ್ನಬಹುದಾಗಿದೆ. ನೃತ್ಯದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುವ ಸಾಯಿ ಪಲ್ಲವಿ ಇದೀಗ ನೃತ್ಯದ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಂದು ಹಾಡಿನ ನೃತ್ಯ ಬಿಟ್ಟರೇ ಉಳಿದೆಲ್ಲಾ ಹಾಡುಗಳ ನೃತ್ಯವನ್ನು ತಾನು ಪಿರಿಯಡ್ಸ್ ಆಗಿದ್ದಾಗ ಮಾಡಿದ್ದಾಗಿ ಆಕೆ ಹೇಳಿದ್ದಾರೆ.

ನಟಿ ಸಾಯಿ ಪಲ್ಲವಿ ನೃತ್ಯ ಹಾಗೂ ಮುಟ್ಟಿನ ಬಗ್ಗೆ ಮಾತನಾಡಿರುವ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ಶ್ಯಾಮ್ ಸಿಂಗ್ ರಾಯ್ ಸಿನೆಮಾದಲ್ಲಿ ಸಾಯಿ ಪಲ್ಲವಿ ನೃತ್ಯ ಪ್ರದರ್ಶನವಿದೆ. ಈ ಸಿನೆಮಾದಲ್ಲಿ ಆಕೆ ದೇವದಾಸಿ ಪಾತ್ರವನ್ನು ಮಾಡಿದ್ದಾರೆ. ದೇವಾಲಯಗಳಲ್ಲಿ ನೃತ್ಯ ಮಾಡುವ ತಂಡದಲ್ಲಿ ಸಾಯಿ ಪಲ್ಲವಿ ಸಹ ಇರುತ್ತಾಳೆ. ಈ ಸಿನೆಮಾದಲ್ಲಿ ಸಾಯಿ ಪಲ್ಲವಿ ದೇವಾಲಯದಲ್ಲಿ ನೃತ್ಯ ಮಾಡುವ ದೃಶ್ಯ ಇರುತ್ತದೆ. ಈ ಹಾಡಿನ ಶೂಟಿಂಗ್ ಮಾಡುವಾಗ ಆಕೆ ಮುಟ್ಟಾಗಿರಲಿಲ್ಲವಂತೆ. ಇದು ಬಿಟ್ಟರೇ ಉಳಿದ ಸಿನೆಮಾಗಳಲ್ಲಿ ಮಾಡಿದ ನೃತ್ಯಗಳ ಶೂಟಿಂಗ್ ಸಮಯದಲ್ಲಿ ಅನೇಕ ಬಾರಿ ಪಿರೀಯಡ್ಸ್ ಆಗಿತ್ತು ಎಂದು ಆಕೆ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮುಕ್ತವಾಗಿ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಸಾಯಿ ಪಲ್ಲವಿ ಸದ್ಯ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ತಂಡೆಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿಯ ಕಾಂಬಿನೇಷನ್ ನಲ್ಲಿ ಈಗಾಗಲೇ ಲವ್ ಸ್ಟೋರಿ ಎಂಬ ಸಿನೆಮಾ ತೆರೆಕಂಡಿದ್ದು, ಒಳ್ಳೆಯ ಸಕ್ಸಸ್ ಕಂಡಿತ್ತು. ಇದೀಗ ಮತ್ತೊಮ್ಮೆ ಈ ಜೋಡಿ ಮೋಡಿ ಮಾಡಲಿದೆ. ಇದರ ಜೊತೆಗೆ ಅಮೀರ್‍ ಖಾನ್ ಪುತ್ರ ಜುನೈದ್ ಖಾನ್ ಜೊತೆಗೆ ಏಕ್ ದಿನ್ ಎಂಬ ಸಿನೆಮಾದ ಮೂಲಕ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ.

Most Popular

To Top