Film News

ಸೋಷಿಯಲ್ ಮಿಡಿಯಾದಲ್ಲಿ ಮತ್ತೆ ಸೈಲೆಂಟ್ ಆದ ನಟಿ ನಿಹಾರಿಕಾ, ಹೊಸ ಅನುಮಾನಗಳು ಶುರುವಾಯ್ತು?

ಮೆಗಾ ಕುಟುಂಬದ ಏಕೈಕ ನಟಿಯಾಗಿ ಫೇಂ ಪಡೆದುಕೊಂಡ ನಿಹಾರಿಕಾ ಕೊಣಿದೆಲಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದರು. ಮೆಗಾ ಫ್ಯಾಮಿಲಿಯ ರೆಬೆಲ್ ಲೇಡಿ ಎಂತಲೇ ಕರೆಯಲಾಗುವ ನಿಹಾರಿಕಾ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿದಿದ್ದಾರೆ. ಈ ಹಿಂದೆ ಸಹ ಆಕೆ ವೈಯುಕ್ತಿಕ ಕಾರಣಗಳಿಂದ ಸೋಷಿಯಲ್ ಮಿಡಿಯಾಗೆ ದೂರವೇ ಉಳಿದಿದ್ದರು. ಇದೀಗ ಮತ್ತೊಮ್ಮೆ ಆಕೆ ಅಜ್ಞಾತಕ್ಕೆ ಹೋದರೇ ಎಂಬ ಅನುಮಾನಗಳು ಸಿನಿವಲಯದಲ್ಲಿ ಹುಟ್ಟಿಕೊಂಡಿದೆ.

ನಟಿ ನಿಹಾರಿಕಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು, ಸೋಷಿಯಲ್ ಮಿಡಿಯಾ ಮೂಲಕ ಅನೇಕ ವಿಚಾರಗಳನ್ನು ಹಂಚಿಕೋಳ್ಳುತ್ತಿದ್ದರು. ಪೊಟೋಶೂಟ್ಸ್ ಗಳು ಸೇರಿದಂತೆ ಸಿನಿರಂಗದ ಅನೇಕ ವಿಚಾರಗಳನ್ನು ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಆದರೆ ದಿಡೀರ್‍ ನೇ ನಿಹಾರಿಕಾ ಸೈಲೆಂಟ್ ಆಗಿದ್ದಾರೆ. ಆಕೆ ಕೊನೆಯದಾಗಿ ಕಳೆದ ವರ್ಷದ ಡಿಸೆಂಬರ್‍ 12 ರಂದು ಕೊನೆಯ ಪೋಸ್ಟ್ ಹಂಚಿಕೊಂಡಿದ್ದರು. ಇನ್ನೂ ಆಕೆ ಸಡನ್ ಆಗಿ ಈ ರೀತಿಯಲ್ಲಿ ಸೋಷಿಯಲ್ ಮಿಡಿಯಾದಿಂದ ದೂರವಾಗಿದ್ದು ಏಕೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಕಥನಗಳು, ರೂಮರ್‍ ಗಳು ಶುರುವಾಗಿದೆ.

ಈ ಹಿಂದೆ ಸಹ ನಿಹಾರಿಕಾ ತನ್ನ ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿದಿದ್ದರು. ತನ್ನ ಸೋಷಿಯಲ್ ಮಿಡಿಯಾ ಅಕೌಡ್ ಗಳನ್ನು ಸಸ್ಪೆಂಡ್ ಮಾಡಿದ್ದರು. ತನ್ನ ಅತ್ತೆಯ ಕುಟುಂಬದವರು ಸೋಷಿಯಲ್ ಮಿಡಿಯಾ ಬಳಸಬಾರದು ಎಂದು ಹೇಳಿದ್ದರಿಂದ ಆಕೆ ಸೋಷಿಯಲ್ ಮಿಡಿಯಾದಿಂದ ದೂರವುಳಿದರು ಎಂಬ ರೂಮರ್‍ ಗಳೂ ಸಹ ಅಂದು ಕೇಳಬಂದಿತ್ತು. ಬಳಿಕ ಪುನಃ ಇನ್ಸ್ಟಾಗ್ರಾಂ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆದರು. ಆಕ್ಟೀವ್ ಆದ ಕೆಲವೇ ದಿನಗಳಲ್ಲಿ ಆಕೆ ಪುನಃ ಸೋಷಿಯಲ್ ಮಿಡಿಯಾದಿಂದ ದೂರವಾಗಿ ಅಭಿಮಾನಿಗಳಿಗೆ ನಿರಾಸೆಯನ್ನು ತಂದಿದ್ದಾರೆ. ಇನ್ನೂ ಆಕೆಯ ಅಭಿಮಾನಿಗಳು ಕೋರುತ್ತಿದ್ದಾರೆ. ಇನ್ನೂ ನಿಹಾರಿಕಾ ಏತಕ್ಕಾಗಿ ಸೋಷಿಯಲ್ ಮಿಡಿಯಾದಿಂದ ದೂರವಾದರು ಎಂಬ ಬಗ್ಗೆ ವಿವಿಧ ಚರ್ಚೆಗಳು ನಡೆಯುತ್ತಿವೆ.

ಇನ್ನೂ ಒಕ್ಕ ಮನಸು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿಹಾರಿಕಾ ಸಿನಿರಂಗದಲ್ಲಿ ನಟಿಯಾಗಿ ಕ್ರೇಜ್ ಸಂಪಾದಿಸಿಕೊಳ್ಳಲು ವಿಫಲರಾದರು ಎನ್ನಬಹುದಾಗಿದೆ.  ಸೈರಾ ನರಸಿಂಹರೆಡ್ಡಿ ಸಿನೆಮಾದಲ್ಲಿ ನಿಹಾರಿಕಾ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಕಳೆದ 2020 ರಲ್ಲಿ ಆಕೆ ಪೋಷಕರ ಮಾತಿನಂತೆ ಮದುವೆಯಾದರು. ಇನ್ನೂ ಆಕೆ ನಿರ್ಮಾಪಕಿಯಾಗಿ ವೆಬ್ ಸೀರಿಸ್ ಗಳನ್ನು ನಿರ್ಮಾಣ ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top