Film News

ಸಿಂಗರ್ ಜೊತೆಗೆ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್ ಲವ್? ವೈರಲ್ ಆದ ಪೊಟೋಸ್….!

ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿಯರಲ್ಲಿ ಮೃಣಾಲ್ ಠಾಕೂರ್‍ ಒಬ್ಬರಾಗಿದ್ದಾರೆ. ಸೀತಾರಾಮಂ ಎಂಬ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಸ್ಟಾರ್‍ ಆದರು. ಈ ಸಿನೆಮಾದಲ್ಲಿ ಆಕೆಯ ನಟನೆ ಹಾಗೂ ಟ್ರೆಡಿಷನಲ್ ಲುಕ್ಸ್ ಮೂಲಕ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದರು. ಆದರೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಖ್ಯಾತ ರ್ಯಾಪ್ ಸಿಂಗರ್‍ ಜೊತೆಗೆ ಲವ್ ನಲ್ಲಿದ್ದಾಳೆ ಎಂಬ ರೂಮರ್‍ ಜೋರಾಗಿ ಹರಿದಾಡುತ್ತಿದೆ.

ಮೃಣಾಲ್ ಠಾಕೂರ್‍ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತನ್ನ ವೈಯುಕ್ತಿಕ ಜೀವನದ ಬಗ್ಗೆ ಹಾಗೂ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೇ ಇರುತ್ತಾರೆ. ಜೊತೆಗೆ ಆಕೆ ನಟಿಸಿದ ಲಸ್ಟ್ ಸ್ಟೋರೀಸ್-2 ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ನಡೆದ ಸಂದರ್ಶನದಲ್ಲಿ ಆಕೆ ತಮ್ಮ ಮದುವೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದರು.  ತಮ್ಮ ಕುಟುಂಬದಲ್ಲಿ ಮದುವೆಯಾಗುವಂತೆ ಒತ್ತಡ ಸಹ ಹೆಚ್ಚಾಗುತ್ತಿದೆಯಂತೆ. ತಾವು ಸಹ ತಮಗಿಷ್ಟವಾದ ಹುಡುಗನನ್ನು ಹುಡುಕುವ ಕೆಲಸದಲ್ಲಿದ್ದಾರಂತೆ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗಿತ್ತು.

ಇನ್ನೂ ಮೃಣಾಲ್, ಸಿಂಗರ್‍ ಬಾದ್ಷಾ, ಶಿಲ್ಪಾಶೆಟ್ಟಿ ರವರು ದೀಪಾವಳಿ ಪಾರ್ಟಿಯಿಂದ ಮಿಡ್ ನೈಟ್ ವಾಪಸ್ಸು ಹೋಗುವಾಗ ಮೃಣಾಲ್ ಆತನೊಂದಿಗೆ ಕ್ಲೋಜ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಇದೀಗ ರೂಮರ್‍ ಹುಟ್ಟಲು ಕಾರಣವಾಗಿದೆ. ಮೃಣಾಲ್ ತನ್ನ ಇನ್ಸ್ಟಾ ಖಾತೆಯಲ್ಲಿ ಬಾದ್ಷಾ ಹಾಗೂ ಶಿಲ್ಪಾಶೆಟ್ಟಿ ಜೊತೆಗೆ ಇರುವ ಪೊಟೋ ಒಂದನ್ನು ಹಂಚಿಕೊಂಡಿದ್ದು, ಇಬ್ಬರೂ ತುಂಬಾ ಇಷ್ಟವಾದವರು ಎಂದು ಕೋಟ್ ಹಾಕಿದ್ದಾರೆ. ಈ ಪೋಸ್ಟ್ ಅನ್ನು ಬಾದ್ಷಾ ಸಹ ರಿಪೋಸ್ಟ್ ಮಾಡಿದ್ದಾರೆ. ಮೃಣಾಲ್ ಈ ಪೊಟೋದಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಾದ್ಷಾ ಬ್ಲಾಕ್ ಕಲರ್‍ ನಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕೈಯಲ್ಲಿ ಕೈಯಿಟ್ಟುಕೊಂಡು ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ.

ಇನ್ನೂ ಈ ವಿಡಿಯೋಗೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಕ್ಯೂಟ್ ಜೋಡಿ ಎಂದು ಇಬ್ಬರೂ ತುಂಬಾ ಪ್ರತಿಭಾನ್ವಿತರು ಶುಭಾಷಯಗಳು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಬಾದ್ಷಾ ಬಾಲಿವುಡ್ ನಲ್ಲಿ ಖ್ಯಾತ ಸಿಂಗರ್‍ ಆಗಿದ್ದಾರೆ. ವಿಶ್ವದಾಧ್ಯಂತ ಆತನಿಗೂ ಭಾರಿ ಫಾಲೋಯಿಂಗ್ ಇದೆ. ಇದೀಗ ಮೃಣಾಲ್ ಹಾಗೂ ಸಿಂಗರ ಬಾದ್ಷಾ ನಡುವೆ ಪ್ರೇಮ ಪಯಣ ಸಾಗುತ್ತಿದೆ ಎಂಬ ರೂಮರ್‍ ಹರಿದಾಡುತ್ತಿದೆ. ಈ ಬಗ್ಗೆ ಅವರಿಬ್ಬರಲ್ಲಿ ಯಾರಾದರೂ ಸ್ಪಷ್ಟನೆ ನೀಡುವವರೆಗೂ ಈ ರೂಮರ್‍ ಹರಿದಾಡುತ್ತಲೇ ಇರುತ್ತದೆ.

Most Popular

To Top