Film News

ನಿಹಾರಿಕಾಗೆ ಸ್ಟ್ರಾಂಗ್ ವಾರ್ನ್ ಕೊಟ್ಟ ಲಾವಣ್ಯ, ನೀನು ಆ ರೀತಿ ಮಾಡಿದ್ರೆ ನಮ್ಮ ಮದುವೆಗೆ ಬರಬೇಡ ಅಂದ್ರಂತೆ….!

ಕೆಲವು ವರ್ಷಗಳ ಕಾಲ ಗುಟ್ಟಾಗಿ ಪ್ರೇಮ ಪಯಣ ಸಾಗಿಸುತ್ತಿದ್ದ ಮೆಗಾ ಕುಟುಂಬದ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದ್ದು, ಮೆಗಾ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆದಿತ್ತು. ಕೆಲವು ದಿನಗಳ ಹಿಂದೆಯಷ್ಟೆ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್ ನಡೆದಿದ್ದು, ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ನಿಹಾರಿಕಾಗೆ ಲಾವಣ್ಯ ಸ್ಟ್ರಾಂಗ್ ವಾರ್ನ್ ಕೊಟ್ಟಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಅಷ್ಟಕ್ಕೂ ಲಾವಣ್ಯ ನಿಹಾರಿಕಾಗೆ ವಾರ್ನಿಂಗ್ ಕೊಟ್ಟಿದ್ದು ಯಾಕೆ ಎಂಬ ವಿಚಾರಕ್ಕೆ ಬಂದರೇ,

ಶೀಘ್ರದಲ್ಲೇ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಮದುವೆ ನಡೆಯಲಿದ್ದು, ಮದುವೆ ಕೆಲಸಗಳಲ್ಲಿ ಮೆಗಾ ಕುಟುಂಬ ಪುಲ್ ಬ್ಯುಸಿಯಾಗಿದೆ ಎಂದು ಹೇಳಲಾಗುತ್ತಿದೆ. ಮುಂದಿನ ತಿಂಗಳಲ್ಲೇ ಈ ಜೋಡಿ ಮದುವೆ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಮದುವೆ ದಿನಾಂಕ, ಸ್ಥಳದ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ. ಕೆಲವು ದಿನಗಳ ಹಿಂದೆಯಷ್ಟೆ ನಿಹಾರಿಕಾ ವಿಚ್ಚೇದನ ಪಡೆದುಕೊಂಡ ವಿಚಾರ ತಿಳಿದೇ ಇದೆ. ಸದ್ಯ ನಿಹಾರಿಕಾ ನಾಗಬಾಬು ಮನೆಯಲ್ಲಿಯೇ ಇದ್ದಾರೆ. ಮೆಗಾ ಕುಟುಂಬದಲ್ಲಿ ಮದುವೆಯೆಂದರೇ ಎಲ್ಲರೂ ಬರುತ್ತಾರೆ. ಈ ಮದುವೆಯಲ್ಲಿ ವಿಚ್ಚೇದನ ಪಡೆದುಕೊಂಡ ನಾನು ಖುಷಿಯಾಗಿ ಕಾಣಿಸಿಕೊಂಡರೇ ನಿಹಾರಿಕಾ ಏಕೆ ವಿಚ್ಚೇದನ ಪಡೆದುಕೊಂಡರು ಎಂದು ಎಲ್ರೂ ಕೇಳುತ್ತಾರೆ ಎಂದು, ಅದಕ್ಕೆ ನಾನು ಏನು ಉತ್ತರ ನೀಡಬೇಕು ಎಂದು ನಿಹಾರಿಕಾ ತನ್ನ ತಾಯಿಯ ಬಳಿ ಅಳಲು ತೋಡಿಕೊಂಡಿದ್ದರಂತೆ.

ಈ ಸುದ್ದಿ ಲಾವಣ್ಯವರೆಗೂ ತಲುಪಿದೆ. ಕೂಡಲೇ ಲಾವಣ್ಯ ನಿಹಾರಿಕಾಗೆ ವಾರ್ನ್ ಕೊಟ್ಟಿದ್ದಾರಂತೆ. ಈ ರೀತಿಯಲ್ಲಿ ನೀನು ಯೋಚನೆ ಮಾಡುತ್ತಾ, ಅಳುತ್ತಾ ಇದ್ದರೇ ನೀನು ಮದುವೆಗೆ ಬರಬೇಡ. ನೀನು ಮದುವೆಯಲ್ಲಿ ಸಂತೊಷದಿಂದ ನಗುತ್ತಾ ಇದ್ದರೇ ಮಾತ್ರ ಮದುವೆ ಬಾ ಎಂದು ಹೇಳಿದ್ದರಂತೆ. ಆ ಮೂಲಕ ನಿಹಾರಿಕಾ ಮೇಲಿನ ಪ್ರೀತಿ ಕಾಳಜಿಯನ್ನು ಈ ರೀತಿಯಾಗಿ ಲಾವಣ್ಯ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಲಾವಣ್ಯ ಹಾಗೂ ವರುಣ್ ಪ್ರೀತಿ, ಮದುವೆಯಲ್ಲಿ ನಿಹಾರಿಕಾ ತುಂಬಾನೆ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಲಾವಣ್ಯ ಸಹ ನಿಹಾರಿಕಾರನ್ನು ತಂಗಿಯಾಗಿ ನೋಡಿಕೊಳ್ಳುತ್ತಾರೆ. ನಿಹಾರಿಕಾಗಾಗಿ ಲಾವಣ್ಯ ನಾಗಬಾಬು ರವರನ್ನೇ ಎದುರು ಹಾಕಿಕೊಂಡಿದ್ದಾರೆ ಎಂದೂ ಸಹ ಸುದ್ದಿಗಳು ಕೇಳಿಬಂದಿದ್ದವು.

Most Popular

To Top