Film News

ಸಿಲ್ಕ್ ಸ್ಮಿತಾ ರಂತೆ ಪೋಸ್ ಕೊಟ್ಟ ಮಹಾನಟಿ ಕೀರ್ತಿ ಸುರೇಶ್, ವೈರಲ್ ಆದ ಪೋಟೋ…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಕೀರ್ತಿ ಸುರೇಶ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಆಕೆ ದಸರಾ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಭಾರಿ ಸಕ್ಸಸ್ ಕಂಡಿದೆ. ಈ ಸಿನೆಮಾ ಭಾರಿ ಹಿಟ್ ಪಡೆದುಕೊಂಡಿದ್ದು, ಕೀರ್ತಿ ಸುರೇಶ್ ಪುಲ್ ಖುಷಿಯಲ್ಲಿದ್ದಾರೆ. ಇನ್ನೂ ಮೊದಲಿನಿಂದಲೇ ಈ ಸಿನೆಮಾವನ್ನು ಸಿಲ್ಕ್ ಸ್ಮಿತಾ ಪೋಸ್ಟರ್‍ ಮೂಲಕ ಪ್ರಮೋಟ್ ಮಾಡುತ್ತಿದ್ದು, ಇದೀಗ ಕೀರ್ತಿ ಸುರೇಶ್ ಸಿಲ್ಕ್ ಸ್ಮಿತಾ ರವರಂತೆ ಫೀಲ್ ಆಗುತ್ತಾ ಪೋಸ್ ಕೊಟ್ಟಿದ್ದು, ಈ ಪೊಟೋ ಇದೀಗ ವೈರಲ್ ಆಗುತ್ತಿದೆ.

ಭಾರಿ ನಿರೀಕ್ಷೆಯಿಂದ ದಸರಾ ಸಿನೆಮಾ ತೆರೆಗೆ ತರಲಾಯಿತು. ಈ ಸಿನೆಮಾವನ್ನು ಮೊದಲಿನಿಂದಲೂ ಸಹ ಸಿಲ್ಕ್ ಸ್ಮಿತಾ ಪೋಸ್ಟರ್‍ ಮೂಲಕವೇ ಪ್ರಮೋಟ್ ಮಾಡಲಾಗುತ್ತಿದೆ. ಸಿನೆಮಾದಲ್ಲಿ ಹೆಂಡದ ಅಂಗಡಿಯ ಗೋಡೆಯ ಮೇಲೆ ಸಿಲ್ಕ್ ಸ್ಮಿತಾ ಪೋಸ್ಟರ್‍ ಇರುತ್ತದೆ. ಅದನ್ನು ಸ್ಮಿತಾ ಬಾರ್‍ ಎಂದು ಕರೆಯುತ್ತಾರೆ. ಇನ್ನೂ ದಸರಾ ಸಿನೆಮಾಗಾಗಿ ಚಿತ್ರತಂಡ ಭಾರಿ ವಿಲೇಜ್ ಸೆಟ್ ಹಾಕಲಾಗಿತ್ತು. ಈ ಸೆಟ್ ನಲ್ಲಿ ಹೆಂಡದ ಅಂಗಡಿ ಸಹ ಇತ್ತು. ಈ ಹೆಂಡದ ಅಂಗಡಿ ಗೋಡೆಯ ಮೇಲೆ ಸಿಲ್ಕ್ ಸ್ಮಿತಾ ದೊಡ್ಡ ಪೋಸ್ಟರ್‍ ಇದ್ದು, ಅದರ ಮುಂದೆ ಕೀರ್ತಿ ಸುರೇಶ್ ಪೋಸ್ ಕೊಟ್ಟಿದ್ದಾರೆ. ಗೋಡೆಯ ಮೇಲಿರುವ ಸಿಲ್ಕ್ ಸ್ಮಿತಾರವರಂತೆ ಇಮಿಟೇಟ್ ಮಾಡುತ್ತಾ, ಸಿಲ್ಕ್ ಸ್ಮಿತಾರಂತೆ ಫೀಲ್ ಆಗುತ್ತಾ ಪೋಸ್ ಕೊಟ್ಟಿದ್ದಾರೆ. ಸಿಲ್ಕ್ ಸ್ಮಿತಾ ರವರಂತೆ ಫೀಲ್ ಆಗುತ್ತಿದ್ದೇನೆ ಎಂದು ಆಕೆ ಆ ಪೊಟೋಗೆ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಶೂಟಿಂಗ್ ಮುಗಿದ ಬಳಿಕ ಸೆಟ್ ಸಹ ಕೆಡವಲಾಗುತ್ತಿದ್ದು, ಈ ವೇಳೆ ಕೀರ್ತಿ ಸುರೇಶ್ ಓಡಿ ಸಿಲ್ಕ್ ಸ್ಮಿತಾ ಪೋಸ್ಟರ್‍ ಬಳಿ ಪೊಟೋ ತೆಗೆದುಕೊಂಡಿದ್ದಾರಂತೆ. ಈ ವಿಚಾರವನ್ನು ತಿಳಿಸುತ್ತಾ ಕೀರ್ತಿ ಇಂಟ್ರಸ್ಟಿಂಗ್ ಪೋಸ್ಟ್ ಮಾಡಿದ್ದಾರೆ. ಇನ್ನೂ ದಸರಾ ಸಿನೆಮಾ ಭಾರಿ ಸಕ್ಸಸ್ ಕಂಡಿದೆ. ನಿರ್ದೇಶಕ ಶ್ರೀಕಾಂತ್ ಓದೆಲಾ ನಿರ್ದೇಶನದಲ್ಲಿ ಈ ಸಿನೆಮಾ ವಿಲೇಜ್ ರಿವೇಂಜ್ ಡ್ರಾಮಾ ಆಗಿ ಪ್ರೇಕ್ಷಕರನ್ನು ರಂಜಿಸಿದೆ. ನಾನಿ ಹಾಗೂ ಕೀರ್ತಿ ಸುರೇಶ್ ಇಬ್ಬರೂ ಸಹ ತುಂಬಾ ಚೆನ್ನಾಗಿ ನಟಿಸಿದ್ದಾರೆ. ನಾನಿ ಮೊದಲ ಬಾರಿಗೆ ದಸರಾ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸಿನೆಮಾಗೆ ಎಂಟ್ರಿ ಕೊಟ್ಟಿದ್ದು, ಒಳ್ಳೆಯ ಸಕ್ಸಸ್ ಕಂಡಿದ್ದು, ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದೆ.

ಇನ್ನೂ ಕೀರ್ತಿ ಸುರೇಶ್ ಕೆರಿಯರ್‍ ತುಂಬಾ ಸಕ್ಸಸ್ ಪುಲ್ ಆಗಿ ಸಾಗುತ್ತಿದೆ. ಸದ್ಯ ಆಕೆ ಮೆಗಾಸ್ಟಾರ್‍ ಚಿರಂಜೀವಿಯವರ ಭೋಳಾಶಂಕರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಆಕೆ ಚಿರಂಜೀವಿ ರವರ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಆ.11 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಜೊತೆಗೆ ಕೆಲವೊಂದು ತಮಿಳು ಸಿನೆಮಾಗಳಲ್ಲಿ ಸಹ ಆಕೆ ನಟಿಸುತ್ತಿದ್ದಾರೆ. ಜೊತೆಗೆ ಆಕೆ ಮದುವೆಯ ಬಗ್ಗೆ ಸಹ ಕೆಲವೊಂದು ರೂಮರ್‍ ಗಳು ಕೇಳಿಬರುತ್ತಿದ್ದು, ಅವನ್ನು ಕೀರ್ತಿ ಸುರೇಶ್ ತಳ್ಳಿಹಾಕಿದ್ದಾರೆ.

Most Popular

To Top