Film News

ಆ ಐದು ನಿಮಿಷಗಳು ನನ್ನ ಜೀವನದಲ್ಲಿ ವ್ಯರ್ಥ ಎಂದ ಆಶಿನ್, ವಿಚ್ಚೇದನ ರೂಮರ್ ಬಗ್ಗೆ ಖಡಕ್ ರಿಯಾಕ್ಷನ್…..!

ಸಿನಿರಂಗದಲ್ಲಿ ಕಡಿಮೆ ಸಮಯದಲ್ಲಿ ಬೇಡಿಕೆ ಪಡೆದುಕೊಂಡಂತಹ ನಟಿಯರ ಸಾಲಿಗೆ ಸೌತ್ ನಟಿ ಆಶಿನ್ ಸಹ ಸೇರುತ್ತಾರೆ. ಗಜಿನಿ ಸಿನೆಮಾದ ಮೂಲಕ ಆಕೆ ಇಡೀ ದೇಶದ ಸಿನಿರಸಿಕರಿಗೆ ಪರಿಚಯವಾದರು. ಈ ಸಿನೆಮಾದ ಮೂಲಕ ಆಕೆ ಭಾರಿ ಕ್ರೇಜ್ ಸಹ ಪಡೆದುಕೊಂಡರು. ಆದರೆ ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಕೆಲವು ದಿನಗಳಿಂದ ಆಶಿನ್ ತನ್ನ ಪತಿಯಿಂದ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಹರಿದಾಡುತ್ತಿದ್ದು, ಅದಕ್ಕೆ ಆಶಿನ್ ಖಡಕ್ ಆಗಿ ರಿಯಾಕ್ಟ್ ಆಗಿದ್ದಾರೆ.

ಸೌತ್ ಸಿನಿರಂಗದಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಪಡೆದುಕೊಂಡ ನಟಿಯರಲ್ಲಿ ಆಶಿನ್ ಸಹ ಒಬ್ಬರಾಗಿದ್ದಾರೆ. ಮಾಸ್ ಮಹಾರಾಜ ರವಿತೇಜ ಹಾಗೂ ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ತೆರೆಕಂಡ ಅಮ್ಮಾ ನಾನ್ನ ಓ ತಮಿಳ ಅಮ್ಮಾಯಿ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಆಶಿನ್ ಎಂಟ್ರಿ ಕೊಟ್ಟರು. ಈ ಸಿನೆಮಾ ಸೂಪರ್‍ ಹಿಟ್ ಪಡೆದುಕೊಂಡ ಹಿನ್ನೆಲೆಯಲ್ಲಿ ಆಕೆಗೆ ಸಾಲು ಸಾಲು ಅವಕಾಶಗಳು ಹರಿದುಬಂದವು. ಬಳಿಕ ಆಕೆ ನಾಗಾರ್ಜುನ್ ಜೊತೆಗೆ ಶಿವಮಣಿ, ವೆಂಕಟೇಶ್ ಜೊತೆಗೆ ಘರ್ಷಣ, ಬಾಲಕೃಷ್ಣ ಜೊತೆಗೆ ಲಕ್ಷ್ಮೀನರಸಿಂಹ ಮೊದಲಾದ ಸಿನೆಮಾಗಳ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಆದರೆ ಆಕೆಗೆ ಗಜಿನಿ ಸಿನೆಮಾ ಭಾರಿ ಕ್ರೇಜ್ ತಂದುಕೊಟ್ಟಿದೆ ಎಂದರೇ ತಪ್ಪಾಗಲಾರದು. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕಳೆದ 2016 ರಲ್ಲಿ ಆಶಿನ್ ಮೈಕ್ರೋಮ್ಯಾಕ್ಸ್ ವ್ಯವಸ್ಥಾಪಕ ರಾಹುಲ್ ಶರ್ಮಾ ರನ್ನು ಮದುವೆಯಾಗಿ ಸೆಟಲ್ ಆದರು. ಮದುವೆಯಾದ ಬಳಿಕ ಆಕೆ ಸಿನೆಮಾಗಳಿಗೆ ಗುಡ್ ಬೈ ಹೇಳಿದರು. ಅವರಿಬ್ಬರಿಗೂ ಒಬ್ಬ ಮಗಳಿದ್ದಾರೆ. ಸದ್ಯ ಆಶಿನ್ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ಆಶಿನ್ ಹಾಗೂ ರಾಹುಲ್ ನಡುವೆ ವಿಬೇದಗಳು ಹುಟ್ಟಿಕೊಂಡಿದ್ದು, ಇಬ್ಬರು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂದು ರೂಮರ್‍ ಗಳು ಹರಿದಾಡಿತ್ತು. ಅದರ ಜೊತೆಗೆ ಆಶಿನ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪತಿಯೊಂದಿಗೆ ಇರುವಂತಹ ಪೊಟೋಗಳು ಡಿಲೀಟ್ ಮಾಡಿದ ಕಾರಣದಿಂದ ಈ ರೂಮರ್‍ ಹುಟ್ಟಿಕೊಂಡಿತ್ತು. ಇನ್ನೂ ಈ ರೂಮರ್‍ ಗಳು ಆಶಿನ್ ವರೆಗೂ ತಲುಪಿದೆ. ಈ ಬಗ್ಗೆ ಆಕೆ ರಿಯಾಕ್ಟ್ ಆಗಿದ್ದು ಖಡಕ್ ಆಗಿ ಕೌಂಟರ್‍ ಕೊಟ್ಟಿದ್ದಾರೆ. ಈ ರೂಮರ್‍ ಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ತಳ್ಳಿಹಾಕಿದ್ದಾರೆ.

ಇನ್ನೂ ಈ ಬಗ್ಗೆ ನೋಟ್ ಒಂದನ್ನು ಸಹ ಹಂಚಿಕೊಂಡಿದ್ದಾರೆ. ನಾನು ನನ್ನ ಪತಿ ಸಮ್ಮರ್‍ ವೇಕೇಷನ್ ನಲ್ಲಿದ್ದೇವೆ. ಇಬ್ಬರೂ ಜೊತೆಯಲ್ಲಿ ಬ್ರೇಕ್ ಫಾಸ್ಟ್ ಸಹ ಮಾಡುತ್ತಾ ಎಂಜಾಯ್ ಮಾಡುತ್ತಿದ್ದೇವೆ. ಈ ಸುದ್ದಿ ಕೇಳಿದ ಬಳಿಕ ನನಗೆ ಮದುವೆ ದಿನಗಳು ನೆನಪಿಗೆ ಬಂದವು. ನಮ್ಮ ಮದುವೆಗೂ ಮುಂಚೆಯೇ ರೂಮರ್‍ ಗಳು ಬಂದವು. ಇದೀಗ ಇಬ್ಬರೂ ಬೇರೆಯಾಗುತ್ತಿರುವುದಾಗಿ ರೂಮರ್‍ ಗಳನ್ನು ಹರಿಬಿಡುತ್ತಿದ್ದಾರೆ. ಈ ನೋಟ್ ಪೋಸ್ಟ್ ಮಾಡಲು ನನ್ನ ಜೀವನದಲ್ಲಿ 5 ನಿಮಿಷಗಳು ವ್ಯರ್ಥವಾಯ್ತು ಎಂದು ಅನಿಸಿದೆ. ಇಲ್ಲದೇ ಇದ್ದರೇ ಆ 5 ನಿಮಿಷವೂ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಬಗ್ಗೆ ಉಂಟಾದ ವಿಚ್ಚೇದನದ ರೂಮರ್‍ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

Most Popular

To Top