Film News

ಅದಕ್ಕಾಗಿಯೇ ನಾನು ಎಂದಿಗೂ ಮದುವೆಯಾಗೊಲ್ಲ, ಒಂಟಿಯಾಗಿಯೇ ಇರುತ್ತೇನೆ ಎಂದ ಆಂಡ್ರಿಯಾ, ವೈರಲ್ ಆದ ಕಾಮೆಂಟ್ಸ್…….!

ಸೌತ್ ಸಿನಿರಂಗದ ನಟಿ ಆಂಡ್ರಿಯಾ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಸೆಕೆಂಡ್ ಹಿರೋಯಿನ್ ಆಗಿ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಮಲ್ಟಿ ಟ್ಯಾಲೆಂಟೆಡ್ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ. ಸಿಂಗರ್‍ ಆಗಿ, ಸಿನೆಮಾಗಳಲ್ಲಿ ನಟಿಯಾಗಿ ಬೋಲ್ಡ್ ಪಾತ್ರಗಳಲ್ಲಿ ನಟಿಸಲು ಸಹ ಆಕೆ ಸೈ ಎನ್ನುತ್ತಿರುತ್ತಾರೆ. ಇನ್ನೂ ಆಕೆಯ ಸಿನಿ ಕೆರಿಯರ್‍ ನಲ್ಲಿ ಅನೇಕ ವಿವಾದಗಳೂ ಸಹ ಮನೆ ಮಾಡಿದೆ. ಇದೀಗ ಆಕೆ ಮದುವೆಯ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ಅನೇಕ ನಟಿಯರು ಮದುವೆ ವಯಸ್ಸು ದಾಟಿದರೂ ಸಹ ಇನ್ನೂ ಮದುವೆಯಾಗಿಲ್ಲ. ಕೆಲ ನಟಿಯರಿಗೆ ಲವ್ ಬ್ರೇಕ್ ಅಪ್ ಆಗಿ ಮದುವೆಯಾಗದೇ ಹಾಗೆಯೇ ಉಳಿದಿದ್ದಾರೆ. ವಯಸ್ಸಾದರೂ ಸಹ ಇನ್ನೂ ಮದುವೆಯಾಗದ ನಟಿಯರಲ್ಲಿ ತ್ರಿಷಾ, ಅನುಷ್ಕಾ ಸೇರಿದಂತೆಅನೇಕರು ಇದ್ದಾರೆ. ಈ ಸಾಲಿಗೆ ನಟಿ ಆಂಡ್ರಿಯಾ ಸಹ ಸೇರುತ್ತಾರೆ. ನಟಿ ಆಂಡ್ರಿಯಾ ಜೀವನದಲ್ಲಿ ತುಂಬಾನೆ ವಿವಾದಗಳಿವೆ. ಸುಚಿ ಲೀಕ್ಸ್ ನಲ್ಲಿ ಆಕೆಯ ಹೆಸರು ತುಂಬಾನೆ ಕೇಳಿಬಂತು. ಸೌತ ಮ್ಯೂಸಿಕ್ ಡೈರೆಕ್ಟರ್‍ ಅನಿರುಧ್ ಜೊತೆಗೆ ಆಕೆ ಡೇಟ್ ನಡೆಸಿದ್ದಾರೆ. ಆತನೊಂದಿಗೆ ತುಂಬಾ ಕ್‌ಓಜ್ ಆಗಿರುವಂತಹ ಪೊಟೋಗಳೂ ಸಹ ಲೀಕ್ ಆಗಿತ್ತು. ಅವರಿಬ್ಬರ ನಡುವೆ ಅಫೈರ್‍ ಇದೆ ಎಂಬ ಸುದ್ದಿಗಳೂ ಸಹ ಹರಿದಾಡಿತ್ತು. ಇದೀಗ ಆಂಡ್ರಿಯಾ ಮದುವೆಯ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇನ್ನೂ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಆಂಡ್ರಿಯಾ ಮದುವೆಯ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಮದುವೆಯ ಬಗ್ಗೆ ಆಂಡ್ರಿಯಾರನ್ನು ಆಂಕರ್‍ ಪ್ರಶ್ನೆ ಮಾಡಿದಾಗ ಈ ಹಿಂದೆ ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆ. ನನಗೆ 25 ವರ್ಷ ವಯಸ್ಸಿನಲ್ಲಿರುವಾಗ ಮದುವೆಯ ಬಗ್ಗೆ ಆಲೋಚನೆ ಇತ್ತು. ಆ ಸಮಯದಲ್ಲಿ ಕೆಲವೊಂದು ಕಾರಣಗಳಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. ಇದೀಗ ನನಗೆ 40 ವರ್ಷ ವಯಸ್ಸು, ನನಗೆ ಮದುವೆ ಆಗುವ ಇಂಟ್ರಸ್ಟ್ ಇಲ್ಲ. ಭವಿಷ್ಯತ್ ನಲ್ಲಿ ಸಹ ಮದುವೆಯಾಗಬೇಕೆಂಬ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ನನ್ನ ಕುಟುಂಬಸ್ಥರು ಸಹ ಮದುವೆಯ ಬಗ್ಗೆ ಆಲೋಚನೆ ಮಾಡುವುದನ್ನು ಬಿಟ್ಟಿದ್ದಾರೆ. ಒಂಟಿ ಜೀವನವನ್ನು ನಾನು ಅಭ್ಯಾಸ ಮಾಡಿಕೊಂಡಿದ್ದೇನೆ. ಒಂಟಿಯಾಗಿಯೇ ಸಂತೋಷದಿಂದ ಇದ್ದೇನೆ. ಮದುವೆಯಾದರೇ ಈಗಿರುವಷ್ಟು ಸಂತೋಷ ಇರೊಲ್ಲ ಎಂಬ ಉದ್ದೇಶದಿಂದಲೇ ನಾನು ಮದುವೆಯ ಆಲೋಚನೆ ಮಾಡುತ್ತಿಲ್ಲ ಎಂದು ಆಂಡ್ರಿಯಾ ಹೇಳಿದ್ದಾರೆ.

ಇನ್ನೂ ಆಂಡ್ರಿಯಾ ತೆಲುಗು, ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡಿದ್ದಾರೆ. ಸೌಂದರ್ಯ ಅಭಿನಯ ಎರಡೂ ಇದ್ದರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದು ಹೇಳಬಹುದಾಗಿದೆ. ಕೊನೆಯದಾಗಿ ಆಕೆ ವಿಕ್ಟರಿ ವೆಂಕಟೇಶ್ ಅಭಿನಯದ ಸೈಂಧವ್ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ಡಿವಿಲ್-2 ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top