Film News

ಪತಿಯೊಂದಿಗೆ ರೊಮ್ಯಾಂಟಿಕ್ ಗೇಮ್ ಆಡಿದ ಅಮಲಾಪಾಲ್, ಮುದ್ದಿನ ಆಟ ಕಂಡು ಫಿದಾ ಆದ ಫ್ಯಾನ್ಸ್……!

ಮಲಯಾಳಂ ಮೂಲದ ನಟಿ ಅಮಲಾಪಾಲ್ ಸಿನಿರಂಗದಲ್ಲಿ ವಿಭಿನ್ನ ನಟಿಯೆಂದೇ ಹೇಳಬಹುದು. ಪಾತ್ರ ಡಿಮ್ಯಾಂಡ್ ಮಾಡಿದ್ರೆ ಆಕೆ ನ್ಯೂಡ್ ಆಗಿ ಸಹ ನಟಿಸಲು ಸಿದ್ದವಾಗಿರುತ್ತಾರೆ. ಅದಕ್ಕೆ ಆಮೆ ಎಂಬ ಸಿನೆಮಾ ಉತ್ತಮ ಉದಾಹರಣೆ ಎನ್ನಬಹುದು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಎರಡನೇ ಮದುವೆಯಾಗಿ ಗರ್ಭಿಣಿಯಾಗಿರುವ ಸುದ್ದಿಯನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಆಕೆ ಸೋಷಿಯಲ್ ಮಿಡಿಯಾದಲ್ಲಿ ತನ್ನ ಬೇಬಿಬಂಪ್ ಪೊಟೋಸ್, ವಿಡಿಯೋಸ್ ಮೂಲಕ ಸದ್ದು ಮಾಡುತ್ತಿದ್ದು, ಇದೀಗ ಆಕೆ ಪತಿಯೊಂದಿಗೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ಡಸ್ಕಿ ಬ್ಯೂಟಿ ಅಮಲಾಪಾಲ್ ಸದ್ಯ ಎರಡನೇ ಮದುವೆಯಾಗಿದ್ದು, ಮದುವೆ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಅಮಲಾಪಾಲ್ ಕಳೆದ 2014 ರಲ್ಲಿ ನಿರ್ದೇಶಕ ಎ.ಎಲ್.ವಿಜಯ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಂಡು ದೂರವಾದರು. ಸುಮಾರು ವರ್ಷಗಳ ಕಾಲ ಆಕೆ ಒಂಟಿಯಾಗಿಯೇ ಜೀವನ ಸಾಗಿಸಿದ್ದರು. ಆದರೆ ಕಳೆದ ವರ್ಷ ಅಮಲಾಪಾಲ್ ಉದ್ಯಮಿ ಜಗತ್ ಎಂಬಾತನನ್ನು ಎರಡನೇ ಮದುವೆಯಾದರು. ಜನವರಿ ಮಾಹೆಯಲ್ಲಿ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದರು. ಬಳಿಕ ಆಕೆ ಬೇಬಿ ಬಂಪ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡಿದ್ದರು. ಪತಿಯೊಂದಿಗೆ, ಬೀಚ್ ಬಳಿ ಆಕೆ ಬೇಬಿ ಬಂಪ್ ಶೋ ಮಾಡುತ್ತಾ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಸದ್ಯ ಅಮಲಾಪಾಲ್ ಹಂಚಿಕೊಂಡ ವಿಡಿಯೋದಲ್ಲಿ ಬ್ಬರೂ ಪೋನ್ ನಲ್ಲಿ ಏನೋ ನೋಡುತ್ತಿರುತ್ತಾರೆ. ಈ ವೇಳೆ ಜಗತ್ ತನ್ನ ಪತ್ನಿಗೆ ಪ್ರೀತಿಯನ್ನು ತೋರಿಸಿ, ಮುತ್ತಿನ ಸುರಿಮಳೆ ಸುರಿಸುತ್ತಾರೆ. ಬೇಬಿ ಬಂಪ್ ನೋಡಿ ಆ ಅನುಭವ ಪಡುತ್ತಾರೆ. ಬಳಿಕ ಅಮಲಾಪಾಲ್ ಪತಿಯನ್ನು ಹತ್ತಿರ ತೆಗೆದುಕೊಂಡು ಮುತ್ತಿನ ಸುರಿಮಳೆ ಸುರಿಸುತ್ತಾರೆ. ಈ ವಿಡಿಯೋದಲ್ಲಿ ಅಮಲಾಪಾಲ್ ಸಹ ತುಂಬಾ ಸಂತೋಷದಿಂದ ಇದ್ದಾರೆ. ನ್ಯಾಚುರಲ್ ಆಗಿ ಅಮಲಾಪಾಲ್ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಾಗೂ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಡಸ್ಕಿ ಬ್ಯೂಟಿ ಬ್ಯೂಟಿ ನೆಕ್ಸ್ಟ್ ಲೆವೆಲ್ ಎಂತಲೂ, ಸೋ ಹಾಟ್ ಎಂತಲೂ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top