ತಾನು ಓದಿದಂತಹ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದ ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ…..!

Follow Us :

ಸ್ಯಾಂಡಲ್ ವುಡ್ ನ ಸ್ಟಾರ್‍ ನಟ ಕಂ ನಿರ್ದೇಶಕ  ರಿಷಭ್ ಶೆಟ್ಟಿ ಕಾಂತಾರಾ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಸದ್ಯ ರಿಷಭ್ ಕಾಂತಾರಾ ಚಾಪ್ಟರ್‍-1 ಸಿನೆಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರಾ ಚಾಪ್ಟರ್‍-1 ಪೋಸ್ಟರ್‍ ಹಾಗೂ ಟೀಸರ್‍ ಒಂದು ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡಿತ್ತು. ಇದೀಗ ರಿಷಭ್ ತಾನು ಓದಿದ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇತ್ತೀಚಿಗೆ ಕನ್ನಡದಲ್ಲಿ ತೆರೆಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸಗೋಡು ಎಂಬ ಸಿನೆಮಾ ಕನ್ನಡ ಶಾಲೆಗಳ ಉಳಿವಿಗಾಗಿ ಜಾಗೃತಿ ಮೂಡಿಸಿತ್ತು. ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ಸಹ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಿಷಭ್ ಶೆಟ್ಟಿ ಫೌಂಡೇಶನ್ ಮೂಲಕ ಅನೇಕ ಸರ್ಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆದುಕೊಂಡು ಆ ಶಾಲೆಗಳ ಉಳಿವಿಗೆ ಶ್ರಮಿಸಿದ್ದಾರೆ. ಈ ಹಾದಿಯಲ್ಲೇ ರಿಷಭ್ ತಾವು ಓದಿದಂತಹ ಕೆರಾಡಿ ಶಾಲೆಯನ್ನು ದತ್ತು ಪಡೆದುಕೊಂಡು ಶಾಲೆಯನ್ನು ಸರ್ವತೋಮುಖ ಅಭಿವೃದ್ದಿ ಮಾಡುವುದಾಗಿ ತಿಳಿಸಿದ್ದಾರೆ. ಇನ್ನೂ ಈ ವೇಳೆ ಊರಿನ ಹಿರಿಯರು ಹಾಗೂ ಮುಖಂಡರು ಸಹ ಹಾಜರಿದ್ದು, ರಿಷಭ್ ರನ್ನು ಹಾಡಿ ಹೊಗಳಿದ್ದಾರೆ.

ಇನ್ನೂ ರಿಷಭ್ ಶೆಟ್ಟಿ ರವರು ಕೆರಾಡಿ ಶಾಲೆಯಲ್ಲಿ ಓದಿದ್ದಾಗಿ ಅನೇಕ ಸಂದರ್ಶನಗಳಲ್ಲಿ ತಿಳಿಸಿದ್ದರು. ಇದೀಗ ರಿಷಭ್ ತಾನು ಓದಿದ ಶಾಲೆಯ ಅಭಿವೃದ್ದಿಗೆ ಮುಂದಾಗಿದ್ದಾರೆ. ಇನ್ನೂ ಈ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ರಿಷಭ್ ಬಿಳಿ ಬಣ್ಣದ ಪಂಚೆ ಹಾಗೂ ಕಪ್ಪು ಬಣ್ಣದ ಶರ್ಟ್ ಧರಿಸಿ ತುಂಬಾ ಸಾಮಾನ್ಯರಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ರಿಷಭ್ ಕಾಂತಾರ ಚಾಪ್ಟರ್‌-1 ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸಿನೆಮಾ ಮೂಹೂರ್ತ ಸಹ ನೆರವೇರಿದ್ದು, ಶೀಘ್ರವೇ ಸಿನೆಮಾ ಸೆಟ್ಟೇರಲಿದೆ. ಸಿನೆಮಾದಲ್ಲಿನ ಕೆಲ ಕಲಾವಿದರ ಆಯ್ಕೆಗಾಗಿ ಕೆಲವು ದಿನಗಳ ಹಿಂದೆಯಷ್ಟೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟರ್‍ ಸಹ ಹಂಚಿಕೊಂಡಿತ್ತು. ಕಾಂತಾರ ಸಿನೆಮಾ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿದ್ದಾರೆ. ಕಾಂತಾರಾ ಚಾಪ್ಟರ್‍-1 ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.