News

ವಿವೇಕಾನಂದರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಚೇತನ್ ಅಹಿಂಸಾ, ವಿವೇಕಾನಂದರು ಸಮಾನತಾವಾದಿಯಲ್ಲ, ನಮ್ಮವರಲ್ಲ ಎಂದು ಟ್ವೀಟ್…….!

ನಟ ಹಾಗೂ ಚಿಂತಕ ಚೇತನ್ ಅಹಿಂಸಾ ಸದಾ ಒಂದಲ್ಲ ಒಂದು ವಿವಾದಿತ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಸ್ವಾಮಿ ವಿವೇಕಾನಂದರ ಬಗ್ಗೆ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರು ಸಮಾನತಾವಾದಿಯಲ್ಲ, ಅವರು ನಮ್ಮವರಲ್ಲ ಎಂದು ಹೇಳುವ ಮೂಲಕ ವಿವಾದಿತ ಟ್ವೀಟ್ ಮಾಡಿದ್ದಾರೆ.

ಜ.12 ರಂದು ದೇಶದಾದ್ಯಂತ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಸಹ ವಿವೇಕನಂದರ ದಿನಾಚರಣೆಯಂದೇ ಐದನೇ ಗ್ಯಾರಂಟಿಯಾದ ಯುವನಿಧಿಗೆ ಚಾಲನೆ ಕೊಟ್ಟಿದೆ. ಈ ನಡುವೆ ಚೇತನ್ ಅಹಿಂಸಾ ವಿವೇಕಾನಂದರು ಸಮಾನತಾವಾದಿಯಲ್ಲ, ಅವರು ನಮ್ಮವರಲ್ಲ ಎಂದು ಟ್ವೀಟ್ ಮೂಲಕ ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ. ವಿವೇಕಾನಂದರು ಮಹಿಳಾ ವಿಮೋಷನೆಯನ್ನು ವಿರೋಧಿಸಿದ್ದರು, ಜಾತಿ ವ್ಯವಸ್ಥೆಯ ಪರವಾಗಿದ್ದರು ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಇನ್ನೂ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವಂತೆ ಇಂದು ವಿವೇಕಾನಂದರ ಜನ್ಮದಿನ, ವಿವೇಕಾನಂದರು ಮಹಿಳಾ ವಿಮೋಚನೆಯನ್ನು ವಿರೋಧಿಸಿದ್ದರು. ಜಾತಿ ವ್ಯವ್ಥೆಯನ್ನು ಸಮರ್ಥಿಸಿಕೊಂಡಿದ್ದರು. ಅವರೇ ಬರೆದ ಹಾಗೆ ಜಾತಿ ಒಳ್ಳೆಯದು, ಅದೊಂದೆ ಜೀವನನ್ನು ಪರಿಹರಿಸುವ ನೈಸರ್ಗಿಕ ಮಾರ್ಗವಾಗಿದೆ ಎನ್ನುತ್ತಾರೆ. ವಿವೇಕಾನಂದರನ್ನು ಹಿಂದೂ ಸಮಾಜದಿಂದ ವೈಭವೀಕರಿಸಲಾಗಿದೆ. ಯಾಕೆಂದರೇ ಅವರು ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುತ್ತಾರೆ. ಅವರು ಸಮಾನತಾವಾದಿಯಲ್ಲ, ಅವರು ನಮ್ಮವರಲ್ಲ ಎಂದು ಬರೆದಿದ್ದಾರೆ. ಜೊತೆಗೆ ನಾವು ಸಮಾನತಾವಾದಿಗಳು ನಮ್ಮ ಐಕಾನ್ ಗಳ (ಪೆರಿಯಾರ್‍, ಬಾಬಾಸಾಹೆಬ್) ಕ್ರಾಂತಿಕಾರಿ ಪರಿವರ್ತನೆಗೂ ಮತ್ತು ಅಸಮಾನತೆ/ಅನ್ಯಾಯವನ್ನು ಹೆಚ್ಚು ಆಳವಾಗಿ ಬೇರೂರಿಸುವ ಹಿಂದು ಸುಧಾರಣಾವಾದಿ ಉದಾರವಾದಿಗಳ ನಡುವೆ ವ್ಯತ್ಯಾಸವನ್ನು ಮಾಡಬೇಕು. ಹಿಂದೂ ಉದಾರವಾದಿಗಳು (ವಿವೇಕಾನಂದ, ಗಾಧಂಇ ಇತ್ಯಾದಿ) ಹಿಂದುತ್ವಕ್ಕಿಂತ (ಸಾರ್ವಕರ್‍ ಮತ್ತು RSS) ಹೆಚ್ಚು ಅಪಾಯಕಾರಿ ಇದಕ್ಕೆ ಕಾರಣ ಹಿಂದುತ್ವು ಪ್ರಮಾಣಿಕ ಶತ್ರು, ಆದರೆ ಹಿಂದೂ ಉದಾರವಾದಿಗಳು ಅಪ್ರಾಮಾಣಿಕ/ಕುತಂತ್ರವಾದಿ ಸ್ನೇಹಿತರು ಎಂದು ಬರೆದುಕೊಂಡಿದ್ದಾರೆ.

Most Popular

To Top