ಸೌತ್ ಸಿನಿರಂಗದಲ್ಲಿ ಸ್ಟಾರ್ ಸಿಂಗರ್ ಆಗಿ ಮಂಗ್ಲಿ ರೇಸ್ ಕುದುರೆಯಂತೆ ಓಡುತ್ತಿದ್ದಾರೆ. ಆಕೆ ಎಂಟ್ರಿ ಕೊಟ್ಟ ಬಳಿಕ ಅನೇಕ ಸಿಂಗರ್ ಗಳು ಹಿಂದೆ ಸರಿದರು ಎಂದೇ ಹೇಳಬಹುದಾಗಿದೆ. ಫೋಕ್, ಡಿವೋಷನಲ್, ಐಟಂ ಸಾಂಗ್ಸ್ ಗಳಿಗೆ ಆಕೆ ತುಂಬಾನೆ ಫೇಮಸ್ ಎಂದೇ ಹೇಳಬಹುದು. ಕ್ಲಾಸ್ ಮಾಸ್ ಎಂಬುದಿಲ್ಲದೇ ಪ್ರತಿಯೊಂದು ಹಾಡಿನಲ್ಲೂ ತನ್ನದೇ ಆದ ಪ್ರತಿಭೆಯನ್ನು ಸಾರುತ್ತಾ ಅಭಿಮಾನಿಗಳನ್ನು ಹಾಗೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಕಾರ್ಯಕ್ರಮವೊಂದರಿಂದ ವಾಪಸ್ಸಾಗುವ ವೇಳೆ ಮಂಗ್ಲಿ ಕಾರು ಅಪಘಾತವಾಗಿದ್ದು, ಸಂಭವಿಸಬಹುದಾದ ದೊಡ್ಡ ಪ್ರಮಾದದಿಂದ ಪಾರಾಗಿದ್ದಾರೆ.
ಖ್ಯಾತ ಗಾಯಕಿ ಮಂಗ್ಲಿ ಜಾರ್ಜ್ ರೆಡ್ಡಿ ಎಂಬ ಸಿನೆಮಾದಲ್ಲಿ ರಾಯಲ್ ಎನ್ಫೀಲ್ಡ್ ಸಾಂಗ್ ಮಂಗ್ಲಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಬಳಿಕ ಅಲಾ ವೈಕುಂಠಪುರಂ, ಲವ್ ಸ್ಟೋರಿ ಸಿನೆಮಾಗಳಲ್ಲಿ ಹಾಡುವ ಮೂಲಕ ಭಾರಿ ಫಾಲೋಯಿಂಗ್ ಸಹ ಪಡೆದುಕೊಂಡಿದ್ದಾರೆ. ಅದರಲ್ಲೂ ಪುಷ್ಪಾ ಸಿನೆಮಾದ ಹೂ ಅಂತೀಯಾ ಮಾವ ಹಾಡನ್ನು ಹಾಡಿ ಮತಷ್ಟು ಫೇಮಸ್ ಆದರು. ರಂಗಾರೆಡ್ಡಿ ಜಿಲ್ಲೆ ನಂದಿ ಗ್ರಾಮ ಕನ್ಹಾ ಆಧ್ಯಾತ್ಮಿಕ ಉತ್ಸವದಲ್ಲಿ ಮಂಗ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರು ಹೈದರಾಬಾದ್ ಹೈವೇ ಮೂಲಕ ಹೈದರಾಬಾದ್ ಬರುತ್ತಿದ್ದರು. ಶಂಶಾಬಾದ್ ತೊಂಡುಪಲ್ಲಿ ಬಳಿ ಕಾರು ಅಪಘಾತಕ್ಕೆ ಒಳಗಾಗಿದ್ದು, ಮಂಗ್ಲಿ ಕಾರಿಗೆ ಸಣ್ಣ ಟ್ರಕ್ ಗುದ್ದಿದೆ. ಈ ಘಟನೆ ಭಾನುವಾರ (ಮಾ.17) ತಡರಾತ್ರಿ ನಡೆದಿದೆ. ಅದೃಷ್ಟಾವಶಾತ್ ಯಾವುದೇ ಪ್ರಮಾದ ಸಂಭವಿಸಿಲ್ಲ.
ಇನ್ನೂ ಮಂಗ್ಲಿ ಚಿತ್ತೂರು ಮೂಲದವರಾಗಿದ್ದಾರೆ. ಈಗಾಗಲೇ ಆಕೆ ಕೆಲವೊಂದು ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಸ್ವೇಚ್ಚ ಎಂಬ ಸಿನೆಮಾದಲ್ಲಿ ಹಾಗೂ ನಿತಿನ್ ಅಭಿನಯದ ಮ್ಯಾಸ್ಟ್ರೋ ಎಂಬ ಸಿನೆಮಾದಲ್ಲೂ ಸಹ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಮಂಗ್ಲಿ ಹಾಡೊಂದಕ್ಕೆ ಬರೊಬ್ಬರಿ ಮೂರು ಲಕ್ಷ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. 2018 ರಲ್ಲಿ ಮಂಗ್ಲಿ ಸಿಂಗರ್ ಆಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.