ತೆಲುಗು ಸಿನಿರಂಗದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪ್ರಿನ್ಸ್ ಮಹೇಶ್ ಬಾಬು ಒಬ್ಬರಾಗಿದ್ದಾರೆ. ಸ್ಟಾರ್ ಕಿಡ್ ಆಗಿ ಎಂಟ್ರಿ ಕೊಟ್ಟರೂ ಸಹ ಆತ ತನ್ನದೇ ಆದ ಫೇಮ್ ದಕ್ಕಿಸಿಕೊಂಡು ಸ್ಟಾರ್ ನಟರಾದರು. ಸೂಪರ್ ಸ್ಟಾರ್ ಕೃಷ್ಣ ಪುತ್ರನಾಗಿ ಸಿನಿರಂಗಕ್ಕೆ ಎಂಟ್ರಿಕೊಟ್ಟ ಮಹೇಶ್ ಬಾಬು ಅನೇಕ ಸೂಪರ್ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಫ್ಯಾನ್ ಫಾಲೋಯಿಂಗ್ ದಕ್ಕಿಸಿಕೊಂಡಿದ್ದಾರೆ. ಇದೀಗ ಮಹೇಶ್ ಬಾಬು ರವರ ನ್ಯೂ ಸೆಲ್ಫಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪ್ರಿನ್ಸ್ ಮಹೇಶ್ ಬಾಬು ಸದ್ಯ SSMB28 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನೆಮಾ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಶೂಟಿಂಗ್ ನಿಂದ ಕೊಂಚ ವಿರಾಮ ಪಡೆದುಕೊಂಡ ಮಹೇಶ್ ಬಾಬು ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ತನ್ನ ಲೇಟೆಸ್ಟ್ ಪೊಟೋ ಒಂದನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮೆಸ್ಸಿ ಹೇರ್ ಸ್ಟೈಲ್, ಗಡ್ಡದಿಂದ ಮಹೇಶ್ ಬಾಬು ಹೊಸ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಮಹೇಶ್ ಬಾಬು ಹಂಚಿಕೊಂಡ ಈ ಪೊಟೋ ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು ರವರ ಲೇಟೆಸ್ಟ್ ಲುಕ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಾ ಪೊಟೋಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ SSMB28 ಟೈಟಲ್ ಮೇರೆಗೆ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಸಿನೆಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಇತ್ತೀಚಿಗೆ ಕ್ರೇಜಿ ವಿಡಿಯೋ ಒಂದು ಸಹ ಹಂಚಿಕೊಂಡಿದ್ದರು. ಅದನ್ನು ಕಂಡ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಇನ್ನೂ ಮಹೇಶ್ ಬಾಬು ಈ ಸಿನೆಮಾಗಾಗಿ ತುಂಬಾ ಸ್ಟೈಲಿಷ್ ಆಗಿದ್ದಾರೆ. SSMB28 ಸಿನೆಮಾಗಾಗಿ ಮಹೇಶ್ ಬಾಬು ಸಂಪೂರ್ಣವಾಗಿ ಬದಲಾಗಿದ್ದಾರೆ. ಇನ್ನೂ ಮುಂದಿನ ಶೆಡ್ಯೂಲ್ಡ್ ಜೂನ್ ಮೊದಲ ವಾರದಿಂದ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಶೂಟಿಂಗ್ ಮೂರು ತಿಂಗಳುಗಳ ಕಾಲ ನಡೆಯಲಿದೆ ಎಂದು ಹೇಳಲಾಗಿದೆ. ಈ ಸಿನೆಮಾವನ್ನು ಮುಂದಿನ ವರ್ಷದ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬಿಡುಗಡೆ ಮಾಡಲು ಈಗಾಗಲೇ ದಿನಾಂಕ ಸಹ ಘೋಷಣೆಯಾಗಿದ್ದು, ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ.
ಇನ್ನೂ ಈ ಸಿನೆಮಾದ ಟೈಟಲ್ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಅನೇಕ ಹೆಸರುಗಳು ಕೇಳಿಬರುತ್ತಿವೆ. ಗುಂಟೂರು ಕಾರಂ, ಊರಿಕಿ ಮೊನಗಾಡು, ಅಮರಾವತಿಕಿ ಅಟು ಇಟು ಎಂಬ ಟೈಟಲ್ ಗಳು ಪರಿಶೀಲನಾ ಹಂತದಲ್ಲಿವೆ ಎನ್ನಲಾಗಿದೆ. ಈ ಸಿನೆಮಾದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಸಿನೆಮಾದ ಬಳಿಕ ಮಹೇಶ್ ಬಾಬು ರಾಜಮೌಳಿ ನಿರ್ದೇಶನದಲ್ಲಿ ಭಾರಿ ಪ್ರಾಜೆಕ್ಟ್ ಶುರು ಮಾಡಲಿದ್ದಾರೆ.