ಮನೆಯಲ್ಲಿ ಪುಟ್ಟ ಮಕ್ಕಳಿದ್ದರೇ ಹುಷಾರ್, ಮೊಬೈಲ್ ಚಾರ್ಜರ್ ನಿಂದಾಗಿ ಎಂಟು ತಿಂಗಳ ಕಂದಮ್ಮ ಸಾವು….!

ಇತ್ತೀಚಿಗೆ ಪ್ರತಿಯೊಂದು ಮನೆಯಲ್ಲೂ ಒಂದು ಮೊಬೈಲ್ ಇದ್ದೇ ಇರುತ್ತದೆ. ಮೊಬೈಲ್ ನಿಂದ ಅನೇಕ ಅನಾಹುತಗಳು ಸಂಭವಿಸಿದ್ದನ್ನು ನಾವು ಕೇಳಿದ್ದೇವೆ. ಮೊಬೈಲ್ ಬಳಸುತ್ತಾ ಚಾರ್ಜರ್‍ ಸಿಡಿದು ಅನೇಕರು ಆಸ್ಪತ್ರೆಯ ಪಾಲಾಗಿದ್ದಾರೆ. ಇದೀಗ ಎಂಟು ತಿಂಗಳ ಕಂದಮ್ಮ ಮೊಬೈಲ್ ಚಾರ್ಜರ್‍ ನಿಂದಾಗಿ ಇಹಲೋಕ ತ್ಯೆಜಿಸಿದೆ. ಮಗುವನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

ಕರ್ನಾಟಕದ ಕಾರವಾರದ ಸಿದ್ದರ ಗ್ರಾಮ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಸಂತೋಷ ಕಲ್ಗುಟ್ಕರ್‍ ಹಾಗೂ ಸಂಜನಾ ಎಂಬುವವರ ಎಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಮೃತ ದುರ್ದೈವಿ. ಮೊಬೈಲ್ ಚಾರ್ಜರ್‍ ಕಾರಣದಿಂದ ಈ ಪುಟ್ಟ ಕಂದಮ್ಮ ಮೃತಪಟ್ಟಿದೆ. ಮೊಬೈಲ್ ಚಾರ್ಜ್‌ಗೆ ಹಾಕಿ ಸ್ವಿಚ್ ಆಫ್ ಮಾಡದೇ ಬಿಟ್ಟ ಕಾರಣದಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮೊಬೈಲ್ ಚಾರ್ಜರ್‍ ಹಾಕಿ ಸ್ವಿಚ್ ಆಫ್ ಮಾಡದೇ ಇರುವ ಕಾರಣ ಆ ಚಾರ್ಜರ್‍ ಬಾಯಲ್ಲಿಟ್ಟುಕೊಂಡ ಮಗು ಕರೆಂಟ್ ಶಾಕ್ ನಿಂದ ಮೃತಪಟ್ಟಿದೆ. ಇನ್ನೂ ಮಗುವನ್ನು ಕಳೆದುಕೊಂಡ ದಂಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇನ್ನೂ ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಮಗುವಿಗೆ ಶಾಕ್ ತಗುಲಿದೆ ಎಂದು ಪೋಷಕರು ಹಾಗೂ ಸ್ಥಳೀಯರು ಸ್ಥಳಕ್ಕೆ ಹೋದೆವು. ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇನ್ನೂ ಆಸ್ಪತ್ರೆಯ ವೈದ್ಯರು ಮಗು ಸಾವನ್ನಪ್ಪಿದೆ ಎಂದು ತಿಳಿಸಿದರು. ಮೊಬೈಲ್ ಚಾರ್ಜರ್‍ ಆನ್ ನಲ್ಲಿಯೇ ಇದ್ದು, ಮಗು ಆಟವಾಡಲು ಚಾರ್ಜರ್‍ ವೈರ್‍ ಅನ್ನು ಬಾಯಿಗೆ ಹಾಕಿಕೊಂಡಿದೆ. ಇದರಿಂದಾಗಿ ಶಾಕ್ ಹೊಡೆದು ಮಗು ಮೃತಪಟ್ಟಿದೆ. ಇನ್ನೂ ಈ ದಂಪತಿಯ ಮೊದಲ  ಮಗುವಿನ ಹುಟ್ಟುಹಬ್ಬವೂ ಸಹ ಇತ್ತು. ಅದೇ ದಿನ ಈ ದುರ್ಘಟನೆ ನಡೆದಿದೆ.