ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ಅಳವಡಿಸಿಕೊಳ್ಳಲು ಕೇಂದ್ರದ ಹೊಸ ಯೋಜನೆ, ನೀವು ಅರ್ಜಿ ಹಾಕಬಹುದು…..!

Follow Us :

ತಮ್ಮ ಮನೆಯ ಮೆಲ್ಚಾವಣಿಯ ಮೇಲೆ ಸೋಲಾರ್‍ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಯೋಜನೆಯನ್ನು ಘೋಷಣೆ ಮಾಡಿತ್ತು. ಫೆ.1 ರಂದು ಮಂಡನೆಯಾದ ಕೇಂದ್ರ ಸರ್ಕಾರದ ಮದ್ಯಂತರ ಬಜೆಟ್ ನಲ್ಲಿ ಸೌರ ಯೋಜನೆಯನ್ನು ಪಿಎಂ ಸೂರ್ಯ ಘರ್‍, ಮುಫ್ತ್ ಬಿಜ್ಲಿ ಯೋಜನೆ ಎಂದು ಕರೆಯಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದರು. ಈ ಯೋಜನೆಯಡಿ ತಾವು ಸಹ ಬಳಸಿಕೊಳ್ಳಬಹುದಾಗಿದೆ. ಹೇಗೆ ಅಂತಾ ಈ ಸ್ಟೋರಿ ಓದಿ.

ಕೇಂದ್ರ ಸರ್ಕಾರ ತಮ್ಮ ಮೇಲ್ಚಾವಣಿಯ ಮೇಲೆ ಸೋಲಾರ್‍ ಅಳವಡಿಸಿಕೊಳ್ಳಲು ಪಿಎಂ ಸೂರ್ಯ ಘರ್‍ ಎಂಬ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು 300 ಯೂನಿಟ್ ಗಳ ಉಚಿತ ವಿದ್ಯುತ್ ಒದಗಿಸಿ ಕೋಟ್ಯಂತರ ಮನೆಗಳನ್ನು ಬೆಳಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದಕ್ಕಾಗಿ 75 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಲು ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಇದರಿಂದ ಜನರಿಗೆ ತುಂಬಾನೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಪಿಎಂ ಸೂರ್ಯ ಘರ್‍, ಮುಫ್ತ್ ಬಿಜ್ಲಿ ಯೋಜನೆಯು ಕಡಿಮೆ ವಿದ್ಯುತ್ ಬಿಲ್, ಹೆಚ್ಚಿನ ಆದಾಯದ ಜೊತೆಗೆ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ವಸತಿ ಹೊಂದಿರುವ ನಾಗರೀಕರು ಸೌರ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ತಾಣದ ಬಗ್ಗೆ ಪ್ರಧಾನಿ ಟ್ವಿಟರ್‍ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆಸಕ್ತರು https://pmsuryaghar.gov.in ತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಮನವಿ ಮಾಡಿದ್ದಾರೆ. ತಮ್ಮ ಮನೆಯ ಮೇಲ್ಚಾವಣಿಯಲ್ಲಿ ಸೋಲಾರ್‍ ರೂಪ್ ಟಾಪ್ ಅಳವಡಿಸಿಕೊಳ್ಳುವ ಮೂಲಕ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. ಅದರ ಜೊತೆಗೆ ಹೆಚ್ಚುವರಿಯಾದ ವಿದ್ಯುತ್ ಕಂಪನಿಗಳಿಗೆ ಮಾರಟ ಮಾಡಬಹುದಾಗಿದೆ. ಇದರಿಂದ ಸುಮಾರು 15-18 ಸಾವಿರ ಹಣ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.